ಶನಿವಾರ, ಜೂನ್ 17, 2017

Gobi manchurian recipe in Kannada | ಗೋಬಿ ಮಂಚೂರಿ ಮಾಡುವ ವಿಧಾನ

Gobi manchurian recipe in Kannada | ಗೋಬಿ ಮಂಚೂರಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಭಾಗದಷ್ಟು ಹೂಕೋಸು
  2. 4 ಟೇಬಲ್ ಚಮಚ ಮೈದಾ ಹಿಟ್ಟು
  3. 2 ಟೇಬಲ್ ಚಮಚ ಜೋಳದ ಹಿಟ್ಟು
  4. 1 ಟೇಬಲ್ ಚಮಚ ಅಕ್ಕಿ ಹಿಟ್ಟು
  5. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  6. 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ 
  7. ಉಪ್ಪು ರುಚಿಗೆ ತಕ್ಕಷ್ಟು 
  8. ಎಣ್ಣೆ ಕಾಯಿಸಲು

ಸಾಸ್ ತಯಾರಿಸಲು ಬೇಕಾಗುವ ಪದಾರ್ಥಗಳು:

  1. 1 ಕತ್ತರಿಸಿದ ಈರುಳ್ಳಿ 
  2. 1/2 ಕತ್ತರಿಸಿದ ಕ್ಯಾಪ್ಸಿಕಂ 
  3. 1 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಬೆಳ್ಳುಳ್ಳಿ 
  4. 1 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ 
  5. 2 ಈರುಳ್ಳಿ ಗಿಡ 
  6. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ 
  7. 1/4 ಚಮಚ ಕಾಳುಮೆಣಸಿನ ಪುಡಿ 
  8. 1 ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ (ಬೇಕಾದಲ್ಲಿ) 
  9. 4 ಟೇಬಲ್ ಚಮಚ ಟೊಮೆಟೊ ಸಾಸ್ 
  10. 1 ಟೀಸ್ಪೂನ್ ಸೋಯಾ ಸಾಸ್ 
  11. ಉಪ್ಪು ರುಚಿಗೆ ತಕ್ಕಷ್ಟು 
  12. 2 ಟೀಸ್ಪೂನ್ ಅಡುಗೆ ಎಣ್ಣೆ 
  13. 1/2 ಕಪ್ ನೀರು

ಗೋಬಿ ಮಂಚೂರಿ ಮಾಡುವ ವಿಧಾನ:

  1. ಹೂಕೋಸನ್ನು ಬಿಡಿಸಿ, ಆಯ್ದು, ೨ ನಿಮಿಷ ಕುದಿಯುವ ಉಪ್ಪು ನೀರಿನಲ್ಲಿ ಬೇಯಿಸಿ. 
  2. ೨ ನಿಮಿಷದ ನಂತರ ನೀರು ಬಗ್ಗಿಸಿ ಪಕ್ಕಕ್ಕಿಡಿ. 
  3. ಈಗ ಸಾಸ್ ತಯಾರಿಸಲು 2 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ನುಣ್ಣಗೆ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಹುರಿಯಿರಿ. 
  4. ನಂತರ ಕತ್ತರಿಸಿದ ಈರುಳ್ಳಿ, ಈರುಳ್ಳಿ ಗಿಡದ ಬಿಳಿ ಭಾಗ, ಹಸಿರು ಮೆಣಸು ಮತ್ತು ಕ್ಯಾಪ್ಸಿಕಂ ಸೇರಿಸಿ ಹುರಿಯಿರಿ.
  5. ನಂತರ ಅಚ್ಚ ಖಾರದ ಪುಡಿ ಮತ್ತು ಕರಿ ಮೆಣಸಿನ ಪುಡಿ ಸೇರಿಸಿ ಕಲಸಿ. 
  6. ಟೊಮೆಟೊ ಸಾಸ್ ಮತ್ತು ಸೋಯಾ ಸಾಸ್ ಸೇರಿಸಿ. 
  7. ಈಗ 1/2 ಚಮಚ ಜೋಳದ ಹಿಟ್ಟನ್ನು 1/2 ಕಪ್ ನೀರಿನಲ್ಲಿ ಕಲಕಿ ಸೇರಿಸಿ. ಸ್ವಲ್ಪ ಮಂದವಾಗುವವರೆಗೆ ಮಗುಚಿ. 
  8. ಉಪ್ಪು ಸೇರಿಸಿ ಮತ್ತೆ ಚೆನ್ನಾಗಿ ಕಲಸಿ. ಸಾಸ್ ತಯಾರಾಯಿತು. 
  9. ನಂತ್ರ ಒಂದು ಬಟ್ಟಲಿನಲ್ಲಿ ಮೈದಾ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಕೆಂಪು ಮೆಣಸಿನಕಾಯಿ ಪುಡಿ, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ತೆಗೆದುಕೊಳ್ಳಿ. 
  10. ನೀರು ಸೇರಿಸಿ ಬಜ್ಜಿ ಅಥವಾ ಬೋಂಡಾದ ಹಿಟ್ಟಿಗಿಂತ ಕೊಂಚ ತೆಳುವಾಗಿ ಕಲಸಿಕೊಳ್ಳಿ. 
  11. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಹಿಟ್ಟಿನಲ್ಲಿ ಹೂಕೋಸಿನ ಚೂರುಗಳನ್ನು ಅದ್ದಿ, ಬಿಸಿಯಾದ ಎಣ್ಣೆಯಲ್ಲಿ ಗರಿ ಗರಿಯಾಗುವವರೆಗೆ ಮತ್ತು ಹೊಂಬಣ್ಣ ಬರುವವರೆಗೆ ಕಾಯಿಸಿ. 
  12. ನಂತರ ಮೇಲೆ ತಯಾರಿಸಿದ ಸಾಸ್ ಗೆ ಕರಿದ ಹೂಕೋಸನ್ನು ಸೇರಿಸಿ, ದೊಡ್ಡ ಉರಿಯಲ್ಲಿ ಚೆನ್ನಾಗಿ ಕಲಸಿ. ಕತ್ತರಿಸಿದ ಈರುಳ್ಳಿ ಗಿಡಗಳಿಂದ ಅಲಂಕರಿಸಿ  ತಕ್ಷಣವೇ ಬಡಿಸಿ.


1 ಕಾಮೆಂಟ್‌:

Related Posts Plugin for WordPress, Blogger...