Suruli poori recipe in Kannada | ಸುರುಳಿ ಪೂರಿ ಮಾಡುವ ವಿಧಾನ
ಸಿಹಿ ಪೂರಿಗೆ ಬೇಕಾಗುವ ಪದಾರ್ಥಗಳು :( ಅಳತೆ ಕಪ್ = 240 ಎಂಎಲ್ )
- 4 ಕಪ್ ಮೈದಾ ಹಿಟ್ಟು
- 1/2 ಕಪ್ ತುಪ್ಪ
- 1 ಕಪ್ ಹಾಲು
- 2 ಕಪ್ ಸಕ್ಕರೆ
- ಚಿಟಿಕೆ ಅಡುಗೆ ಸೋಡಾ
- ಚಿಟಿಕೆ ಏಲಕ್ಕಿ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
- ಕರಿಯಲು ಎಣ್ಣೆ
ಖಾರ ಪೂರಿಗೆ ಬೇಕಾಗುವ ಪದಾರ್ಥಗಳು :( ಅಳತೆ ಕಪ್ = 240 ಎಂಎಲ್ )
- 2 ಕಪ್ ಮೈದಾ ಹಿಟ್ಟು
- 1/4 ಕಪ್ ತುಪ್ಪ
- 1/2 ಕಪ್ ಹಾಲು
- 1 - 2 ಚಮಚ ಅಚ್ಚ ಖಾರದ ಪುಡಿ
- ಸಣ್ಣ ಚಿಟಿಕೆ ಅಡುಗೆ ಸೋಡಾ
- ಉಪ್ಪು ರುಚಿಗೆ ತಕ್ಕಷ್ಟು
- ಕರಿಯಲು ಎಣ್ಣೆ
ಸಿಹಿ ಸುರುಳಿ ಪೂರಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು, ಸೋಡಾ ಮತ್ತು ತುಪ್ಪ ಹಾಕಿ ಕಲಸಿ.
- ಸ್ವಲ್ಪ ಸ್ವಲ್ಪವೇ ಹಾಲು ಹಾಕುತ್ತಾ ಗಟ್ಟಿಯಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.
- ೨ ಕಪ್ ಸಕ್ಕರೆಗೆ ೧ ಕಪ್ ನೀರು ಹಾಕಿ ಒಂದೆಳೆ ಪಾಕ ಮಾಡಿಟ್ಟು ಕೊಳ್ಳಿ. ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ ಸೇರಿಸಿ.
- ಈಗ ಕಿತ್ತಳೆ ಹಣ್ಣಿನ ಗಾತ್ರದ ಉಂಡೆ ತೆಗೆದು ಕೊಂಡು ಲಟ್ಟಿಸಿ. 6 - 8 ಚೂರುಗಳಾಗಿ ಕತ್ತರಿಸಿ, ನಡುವಿನಲ್ಲಿ ಓರೆಯಾಗಿ ಗೀರಿ. ಸುತ್ತಿ, ಅಂಚನ್ನು ಒತ್ತಿ ಸೇರಿಸಿ.
- ಬಿಸಿಯಾದ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ.
- ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆದು, ಮೇಲಿನಿಂದ ಸಕ್ಕರೆ ಪಾಕವನ್ನು ಚಮಚದಲ್ಲಿ ಹಾಕಿ. ಬಿಸಿ ಆರಿದ ಮೇಲೆ ಸವಿದು ಆನಂದಿಸಿ.
ಖಾರ ಸುರುಳಿ ಪೂರಿ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು, ಅಚ್ಚ ಖಾರದ ಪುಡಿ, ಸೋಡಾ ಮತ್ತು ತುಪ್ಪ ಹಾಕಿ ಕಲಸಿ.
- ಸ್ವಲ್ಪ ಸ್ವಲ್ಪವೇ ಹಾಲು ಹಾಕುತ್ತಾ ಗಟ್ಟಿಯಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.
- ಈಗ ಕಿತ್ತಳೆ ಹಣ್ಣಿನ ಗಾತ್ರದ ಉಂಡೆ ತೆಗೆದು ಕೊಂಡು ಲಟ್ಟಿಸಿ. 6 - 8 ಚೂರುಗಳಾಗಿ ಕತ್ತರಿಸಿ, ನಡುವಿನಲ್ಲಿ ಓರೆಯಾಗಿ ಗೀರಿ. ಸುತ್ತಿ, ಅಂಚನ್ನು ಒತ್ತಿ ಸೇರಿಸಿ.
- ಬಿಸಿಯಾದ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ.
- ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆದು, ಚಹಾ ಜೊತೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ