Baale hoovina chutney recipe in kannada | ಬಾಳೆ ಹೂವಿನ ಚಟ್ನಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಕತ್ತರಿಸಿದ ಬಾಳೆ ಹೂವು
- 1/2 ಕಪ್ ತೆಂಗಿನ ತುರಿ
- 2 - 4 ಒಣ ಮೆಣಸಿನಕಾಯಿ
- 1 ಟೀಸ್ಪೂನ್ ಕೊತ್ತಂಬರಿ ಬೀಜ
- ಒಂದು ಸಣ್ಣ ಗೋಲಿಗಾತ್ರದ ಹುಣಿಸೇಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ (ಬೇಕಾದಲ್ಲಿ)
- 2 ಟೀಸ್ಪೂನ್ ಉದ್ದಿನ ಬೇಳೆ
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಅಡುಗೆ ಎಣ್ಣೆ
ಬಾಳೆ ಹೂವಿನ ಚಟ್ನಿ ಮಾಡುವ ವಿಧಾನ:
- ಬಾಳೆ ಹೂ ಅಥವಾ ಬಾಳೆ ಮೂತಿಯನ್ನು ತೊಳೆದು ಸಣ್ಣದಾಗಿ ಕೊಚ್ಚಿ. ನೇಂದ್ರ ಅಥವಾ ಏಲಕ್ಕಿ ಬಾಳೆ ಹೂ ಆದಲ್ಲಿ ಉತ್ತಮ. ಬೇರೆ ಬಾಳೆ ಆದಲ್ಲಿ ಹೊರಗಿನ ಒಂದೆರಡು ಎಲೆಯನ್ನು ತೆಗೆದು ಹಾಕಿ.
- ಒಂದು ಬಾಣಲೆಗೆ ಒಗ್ಗರಣೆಗೆ ಪಟ್ಟಿ ಮಾಡಿದ ಪದಾರ್ಥಗಳನ್ನು (ಎಣ್ಣೆ, ಒಣ ಮೆಣಸು, ಸಾಸಿವೆ ಮತ್ತು ಉದ್ದಿನಬೇಳೆ) ಹಾಕಿ, ಉದ್ದಿನಬೇಳೆ ಹೊಂಬಣ್ಣ ಬರುವವರೆಗೆ ಹುರಿಯಿರಿ.
- ಒಂದು ಮಿಕ್ಸೀ ಜಾರಿಗೆ ತೆಂಗಿನ ತುರಿ, ಕೊಚ್ಚಿದ ಬಾಳೆ ಹೂ, ತೆಂಗಿನ ತುರಿ, ಒಣ ಮೆಣಸು, ಕೊತ್ತಂಬರಿ ಬೀಜ, ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಕೊನೆಯಲ್ಲಿ ತಯಾರಿಸಿದ ಒಗ್ಗರಣೆಯನ್ನು ಹಾಕಿ (ಹುರಿದ ಒಣಮೆಣಸಿನಕಾಯಿ, ಉದ್ದಿನ ಬೇಳೆ ಮತ್ತು ಸಾಸಿವೆ) ಒಂದೆರಡು ಸುತ್ತು ಅರೆದು ತೆಗೆಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ