Hesarittinunde recipe in Kannada | ಹೆಸರಿಟ್ಟಿನುಂಡೆ ಮಾಡುವ ವಿಧಾನ
ಹೆಸರಿಟ್ಟಿನ ಉಂಡೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಹೆಸರುಬೇಳೆ
- 1/2 ಕಪ್ ಸಕ್ಕರೆ
- 1/4 ಕಪ್ ತುಪ್ಪ
- 4 ಟೇಬಲ್ ಚಮಚ ಗೋಡಂಬಿ ಚೂರುಗಳು
ಹೆಸರಿಟ್ಟಿನುಂಡೆ ಮಾಡುವ ವಿಧಾನ:
- ಗೋಡಂಬಿಯನ್ನು ಚೂರು ಮಾಡಿ ಹುರಿದಿಟ್ಟುಕೊಳ್ಳಿ.
- ಒಂದು ದಪ್ಪ ತಳದ ಬಾಣಲೆಯಲ್ಲಿ ಹೆಸರುಬೇಳೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
- ಬಿಸಿ ಆರಿದ ಮೇಲೆ ಹೆಸರುಬೇಳೆಯನ್ನು ಮಿಕ್ಸಿಯಲ್ಲಿ ನುಣ್ಣನೆ ಪುಡಿಮಾಡಿಕೊಳ್ಳಿ.
- ನಂತರ ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ.
- ಪುಡಿಮಾಡಿದ ಸಕ್ಕರೆ ಮತ್ತು ಹೆಸರುಬೇಳೆಯನ್ನು ಜರಡಿಯಲ್ಲಿ ಸಾರಣಿಸಿ.
- ನಂತರ ಹುರಿದಿಟ್ಟ ಗೋಡಂಬಿ ಸೇರಿಸಿ. ಸ್ವಲ್ಪ ಸ್ವಲ್ಪವೇ ತುಪ್ಪ ಸೇರಿಸುತ್ತ ಚೆನ್ನಾಗಿ ಕಲಸಿ.
- ಕೈಯಲ್ಲಿ ಒತ್ತಿ ಉಂಡೆ ಮಾಡಲು ಆಗಬೇಕು. ಅಲ್ಲಿಯವರೆಗೆ ತುಪ್ಪ ಸೇರಿಸಿ ಕಲಸಿ.
- ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಉಂಡೆ ಮಾಡಿ. ಹೀಗೆ ಎಲ್ಲ ಉಂಡೆಗಳನ್ನು ಮಾಡಿ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ