Kashaya pudi recipe in Kannada | ಕಷಾಯ ಪುಡಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು (ವಿಧಾನ ೧):
- 100 ಗ್ರಾಂ ಕೊತ್ತುಂಬರಿ ಬೀಜ
- 100 ಗ್ರಾಂ ಜೀರಿಗೆ
- 50 ಗ್ರಾಂ ಮೆಂತ್ಯೆ
- 100 ಗ್ರಾಂ ಹೆಸರುಕಾಳು
- 20 ಏಲಕ್ಕಿ
- 50 ಗ್ರಾಂ ಬಡೇಸೊಂಪು
- 50 ಗ್ರಾಂ ಒಣ ಶುಂಠಿ
- 100 ಗ್ರಾಂ ಕರಿ ಮೆಣಸು
- 100 ಗ್ರಾಂ ಸುಗಂಧಿ
- 100 ಗ್ರಾಂ ಅಶ್ವಗಂಧ
- 100 ಗ್ರಾಂ ನೆಗ್ಗಿನಮುಳ್ಳು
- 100 ಗ್ರಾಂ ಜೇಷ್ಠಮಧು
- 100 ಗ್ರಾಂ ಅರಿಶಿನ ಕೊಂಬು (ಬೇಕಾದಲ್ಲಿ)
ಬೇಕಾಗುವ ಪದಾರ್ಥಗಳು (ವಿಧಾನ ೨):
- 1/2 ಕಪ್ ಕೊತ್ತುಂಬರಿ ಬೀಜ
- 1/4 ಕಪ್ ಜೀರಿಗೆ
- 1 ಟೇಬಲ್ ಚಮಚ ಮೆಂತ್ಯ
- 2 ಟೇಬಲ್ ಚಮಚ ಬಡೇಸೊಂಪು
- 2 ಟೇಬಲ್ ಚಮಚ ಕರಿ ಮೆಣಸು
- 2cm ಅರಿಶಿನ ಕೊಂಬು
- 1cm ಒಣ ಶುಂಠಿ
- 4-5 ಏಲಕ್ಕಿ
- 10 ಲವಂಗ
ಕಷಾಯ ಪುಡಿ ಮಾಡುವ ವಿಧಾನ:
- ಅಳತೆ ಪ್ರಕಾರ ಎಲ್ಲ ಮಸಾಲಾ ಪದಾರ್ಥಗಳನ್ನು ತೆಗೆದುಕೊಳ್ಳಿ.
- ನಂತರ ಮಸಾಲಾ ಪದಾರ್ಥಗಳನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಬಾಣಲೆಯಲ್ಲಿ ಸ್ವಲ್ಪ ಬಿಸಿಯಾಗುವವರೆಗೆ ಹುರಿಯಿರಿ.
- ಮಸಾಲಾ ಪದಾರ್ಥಗಳು ತಣ್ಣಗಾದಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಬೇರು ನಾರುಗಳನ್ನು ಮೊದಲಿಗೆ ಒರಳು ಕಲ್ಲಿನಲ್ಲಿ ಜಜ್ಜಿಕೊಂಡು ನಂತ್ರ ಮಿಕ್ಸಿಗೆ ಹಾಕಿ.
- ಜರಡಿಯಲ್ಲಿ ಸಾರಣಿಸಿ, ನುಣ್ಣನೆ ಪುಡಿಯನ್ನು ತಯಾರಿಸಿ.
- ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ರುಚಿಕರ ಮತ್ತು ಆರೋಗ್ಯಕರ ಕಷಾಯಪುಡಿ ಉಪಯೋಗಿಸಿ ಕಷಾಯ ಮಾಡಿ.
- ಕಷಾಯ ಮಾಡಲು, ನೀರು ಮತ್ತು ಬೆಲ್ಲ ಕುದಿಸಿ, ಕೊನೆಯಲ್ಲಿ ಪುಡಿ ಹಾಕಿ ಸ್ವಲ್ಪ ಹೊತ್ತು ಕುದಿಸಿ, ಹಾಲು ಹಾಕಿ ಕುಡಿದರಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ