ಬುಧವಾರ, ಜೂನ್ 28, 2017

Plain Akki rotti recipe in Kannada | ಉಕ್ಕರಿಸಿದ ಅಕ್ಕಿ ರೊಟ್ಟಿ ಮಾಡುವ ವಿಧಾನ

Plain Akki rotti recipe in Kannada

Plain Akki rotti recipe in Kannada | ಉಕ್ಕರಿಸಿದ ಅಕ್ಕಿ ರೊಟ್ಟಿ ಮಾಡುವ ವಿಧಾನ

ಉಕ್ಕರಿಸಿದ ಅಕ್ಕಿರೊಟ್ಟಿ ಅಥವಾ ಉಬ್ಬುರೊಟ್ಟಿಯ ವಿಡಿಯೋವನ್ನು ಈ ಕೆಳಗೆ ನೀಡಿದ್ದೇನೆ. ಒಮ್ಮೆ ವೀಕ್ಷಿಸಿದಲ್ಲಿ ರೊಟ್ಟಿ ಮಾಡಲು ಅನುಕೂಲವಾಗಬಹುದು. 
Akki rotti video

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ ಹಿಟ್ಟು 
  2. 1.5 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
  3. 1 ಟೀಸ್ಪೂನ್ ಅಡುಗೆ ಎಣ್ಣೆ 
  4. ಉಪ್ಪು ರುಚಿಗೆ ತಕ್ಕಷ್ಟು


ಉಕ್ಕರಿಸಿದ ಅಕ್ಕಿ ರೊಟ್ಟಿ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ನೀರು, ಉಪ್ಪು ಮತ್ತು ಎಣ್ಣೆ ಹಾಕಿ ಕುದಿಯಲು ಇಡಿ. 
  2. ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ  ಅಕ್ಕಿ ಹಿಟ್ಟನ್ನು ಸೇರಿಸಿ ಒಂದೆರಡು ಸುತ್ತು ಕಲಸಿ. ಸ್ಟವ್ ಆಫ್ ಮಾಡಿ. 
  3. ಸ್ಟವ್ ಆರಿಸಿದ ಮೇಲೆ ಸಟ್ಟುಗದಿಂದ ಚೆನ್ನಾಗಿ ಕಲಸಿ ಮುಚ್ಚಿಡಿ. 
  4. ಬಿಸಿ ಆರಿದ ಮೇಲೆ ಕೈಯಿಂದ ಚೆನ್ನಾಗಿ ನಾದಿ ಮೃದುವಾದ ಹಿಟ್ಟನ್ನು ತಯಾರಿಸಿ. 
  5. ನಿಂಬೆ ಗಾತ್ರದ ಉಂಡೆ ಮಾಡಿಕೊಂಡು, ಅಗತ್ಯವಿದ್ದಷ್ಟು ಹಿಟ್ಟು ಹಾಕಿ ತೆಳ್ಳಗೆ ಲಟ್ಟಿಸಿ. 
  6. ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ರೊಟ್ಟಿಯನ್ನು ತವಾ ಮೇಲೆ ಹಾಕಿ. 
  7. ಒಂದು ಶುಭ್ರವಾದ ಬಟ್ಟೆಯಿಂದ ರೊಟ್ಟಿಯ ಮೇಲ್ಭಾಗಕ್ಕೆ ನೀರನ್ನು ಹಚ್ಚಿ. 
  8. ಸಣ್ಣ ಗುಳ್ಳೆಗಳು ಬಂಡ ಕೂಡಲೇ ತಿರುಗಿಸಿ ಇನ್ನೊಂದು ಬದಿ ಕಾಯಿಸಿ. 
  9.  ಅಥವಾ ರೊಟ್ಟಿಯ ಎರಡು ಬದಿಯನ್ನು ಸುಮಾರು ಹತ್ತು ಸೆಕೆಂಡ್ಗಳ ಕಾಲ ಕಾಯಿಸಿ. 
  10. ನಂತರ ರೊಟ್ಟಿಯನ್ನು ನೇರವಾಗಿ ಸ್ಟವ್ ಮೇಲೆ ಹಾಕಿ. ಎರಡು ಬದಿ ಅಲ್ಲಲ್ಲಿ ಕೆಂಪಾಗುವವರೆಗೆ ಕಾಯಿಸಿ. 
  11. ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.

ಮಂಗಳವಾರ, ಜೂನ್ 27, 2017

Bendekai kayirasa recipe in Kannada | ಬೆಂಡೆಕಾಯಿ ಕಾಯಿರಸ ಮಾಡುವ ವಿಧಾನ

Bendekai kayirasa recipe in Kannada

Bendekai kayirasa recipe in Kannada | ಬೆಂಡೆಕಾಯಿ ಕಾಯಿರಸ ಮಾಡುವ ವಿಧಾನ 

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 250 ಗ್ರಾಂ ಬೆಂಡೆಕಾಯಿ
  2. 1 ಚಿಟಿಕೆ ಅರಿಶಿನ ಪುಡಿ
  3. ಹುಣಸೆ ಹಣ್ಣು ಒಂದು ನೆಲ್ಲಿಕಾಯಿ ಗಾತ್ರ
  4. ಬೆಲ್ಲ ಒಂದು ನೆಲ್ಲಿಕಾಯಿ ಗಾತ್ರ
  5. ಉಪ್ಪು ರುಚಿಗೆ ತಕ್ಕಷ್ಟು.

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಟೀಸ್ಪೂನ್ ಉದ್ದಿನ ಬೇಳೆ
  2. 2 - 4 ಒಣ ಮೆಣಸಿನಕಾಯಿ
  3. 1/2 ಕಪ್ ತೆಂಗಿನ ತುರಿ
  4. 1/2 ಟೀಸ್ಪೂನ್ ಮೆಂತ್ಯ
  5. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಸಾಸಿವೆ
  2. 1 ಒಣಮೆಣಸಿನಕಾಯಿ (ಬೇಕಾದಲ್ಲಿ)
  3. 4 - 5 ಕರಿಬೇವಿನ ಎಲೆ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಬೆಂಡೆಕಾಯಿ ಕಾಯಿರಸ ಮಾಡುವ ವಿಧಾನ:

  1. ಬೆಂಡೆಕಾಯಿ ತೊಳೆದು, ತುದಿ ಮತ್ತು ಬುಡ ತೆಗೆದು, 2 ಸೆಮೀ ಉದ್ದಕ್ಕೆ ಕತ್ತರಿಸಿಕೊಳ್ಳಿ.
  2. 1 ಕಪ್ ನೀರಿನಲ್ಲಿ ಹುಣಸೆ ಹಣ್ಣನ್ನು ನೆನೆಸಿ ರಸ ತೆಗೆದಿಟ್ಟುಕೊಳ್ಳಿ. 
  3. ಕುಕ್ಕರ್‌ಗೆ ಕತ್ತರಿಸಿದ ಬೆಂಡೆಕಾಯಿ ಹಾಕಿ. ಉಪ್ಪು, ಅರಿಶಿನ ಪುಡಿ, ಬೆಲ್ಲ ಮತ್ತು ಹುಣಸೆ ರಸ ಸೇರಿಸಿ ಒಂದು ವಿಷಲ್ ಮಾಡಿ.
  4. ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಒಣ ಮೆಣಸು, ಉದ್ದಿನ ಬೇಳೆ, ಮೆಂತ್ಯ ಮತ್ತು ಎಣ್ಣೆ ಹಾಕಿ. ಉದ್ದಿನ ಬೇಳೆ ಹೊಂಬಣ್ಣಕ್ಕೆ ಬರುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
  5. ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಪದಾರ್ಥಗಳನ್ನು ಹಾಕಿ ಅರೆಯಿರಿ. 
  6. ಬೇಯಿಸಿದ ಬೆಂಡೆಕಾಯಿಗೆ ಅರೆದ ಮಸಾಲೆ ಸೇರಿಸಿ. ಬೇಕಾದಲ್ಲಿ ಉಪ್ಪು ಸೇರಿಸಿ. ಒಂದು ಕುದಿ ಕುದಿಸಿ.  
  7. ನಂತರ ಎಣ್ಣೆ, ಒಣಮೆಣಸು, ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಮಾಡಿ. ಅನ್ನ ಅಥವಾ ಚಪಾತಿ ಜೊತೆ ಬಡಿಸಿ.

ಸೋಮವಾರ, ಜೂನ್ 26, 2017

Kashaya pudi recipe in Kannada | ಕಷಾಯ ಪುಡಿ ಮಾಡುವ ವಿಧಾನ

Kashaya pudi recipe in Kannada

Kashaya pudi recipe in Kannada | ಕಷಾಯ ಪುಡಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು (ವಿಧಾನ ೧):

  1. 100 ಗ್ರಾಂ ಕೊತ್ತುಂಬರಿ ಬೀಜ
  2. 100 ಗ್ರಾಂ ಜೀರಿಗೆ
  3. 50 ಗ್ರಾಂ ಮೆಂತ್ಯೆ
  4. 100 ಗ್ರಾಂ ಹೆಸರುಕಾಳು
  5. 20 ಏಲಕ್ಕಿ 
  6. 50 ಗ್ರಾಂ ಬಡೇಸೊಂಪು 
  7. 50 ಗ್ರಾಂ ಒಣ ಶುಂಠಿ 
  8. 100 ಗ್ರಾಂ ಕರಿ ಮೆಣಸು 
  9. 100 ಗ್ರಾಂ ಸುಗಂಧಿ 
  10. 100 ಗ್ರಾಂ ಅಶ್ವಗಂಧ 
  11. 100 ಗ್ರಾಂ ನೆಗ್ಗಿನಮುಳ್ಳು 
  12. 100 ಗ್ರಾಂ ಜೇಷ್ಠಮಧು 
  13. 100 ಗ್ರಾಂ ಅರಿಶಿನ ಕೊಂಬು (ಬೇಕಾದಲ್ಲಿ)

ಬೇಕಾಗುವ ಪದಾರ್ಥಗಳು (ವಿಧಾನ ೨):

  1. 1/2 ಕಪ್ ಕೊತ್ತುಂಬರಿ ಬೀಜ
  2. 1/4 ಕಪ್ ಜೀರಿಗೆ
  3. 1 ಟೇಬಲ್ ಚಮಚ ಮೆಂತ್ಯ
  4. 2 ಟೇಬಲ್ ಚಮಚ ಬಡೇಸೊಂಪು 
  5. 2 ಟೇಬಲ್ ಚಮಚ ಕರಿ ಮೆಣಸು 
  6. 2cm ಅರಿಶಿನ ಕೊಂಬು
  7. 1cm  ಒಣ ಶುಂಠಿ 
  8. 4-5 ಏಲಕ್ಕಿ 
  9. 10 ಲವಂಗ

ಕಷಾಯ ಪುಡಿ ಮಾಡುವ ವಿಧಾನ:

  1. ಅಳತೆ ಪ್ರಕಾರ ಎಲ್ಲ ಮಸಾಲಾ ಪದಾರ್ಥಗಳನ್ನು ತೆಗೆದುಕೊಳ್ಳಿ. 
  2. ನಂತರ ಮಸಾಲಾ ಪದಾರ್ಥಗಳನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಬಾಣಲೆಯಲ್ಲಿ ಸ್ವಲ್ಪ ಬಿಸಿಯಾಗುವವರೆಗೆ ಹುರಿಯಿರಿ. 
  3. ಮಸಾಲಾ ಪದಾರ್ಥಗಳು ತಣ್ಣಗಾದಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಬೇರು ನಾರುಗಳನ್ನು ಮೊದಲಿಗೆ ಒರಳು ಕಲ್ಲಿನಲ್ಲಿ ಜಜ್ಜಿಕೊಂಡು ನಂತ್ರ ಮಿಕ್ಸಿಗೆ ಹಾಕಿ. 
  4. ಜರಡಿಯಲ್ಲಿ ಸಾರಣಿಸಿ, ನುಣ್ಣನೆ ಪುಡಿಯನ್ನು ತಯಾರಿಸಿ.  
  5.  ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ರುಚಿಕರ ಮತ್ತು ಆರೋಗ್ಯಕರ ಕಷಾಯಪುಡಿ ಉಪಯೋಗಿಸಿ ಕಷಾಯ ಮಾಡಿ.
  6. ಕಷಾಯ ಮಾಡಲು, ನೀರು ಮತ್ತು ಬೆಲ್ಲ ಕುದಿಸಿ, ಕೊನೆಯಲ್ಲಿ ಪುಡಿ ಹಾಕಿ ಸ್ವಲ್ಪ ಹೊತ್ತು ಕುದಿಸಿ, ಹಾಲು ಹಾಕಿ ಕುಡಿದರಾಯಿತು. 

ಶುಕ್ರವಾರ, ಜೂನ್ 23, 2017

Tomato onion chutney recipe in Kannada | ಟೊಮೇಟೊ ನೀರುಳ್ಳಿ ಚಟ್ನಿ ಮಾಡುವ ವಿಧಾನ

Tomato onion chutney recipe in Kannada

Tomato onion chutney recipe in Kannada | ಟೊಮೇಟೊ ನೀರುಳ್ಳಿ ಚಟ್ನಿ ಮಾಡುವ ವಿಧಾನ

Tomato onion chutney video Kannada


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 3 ಮಧ್ಯಮ ಗಾತ್ರದ ಟೊಮೇಟೊ
  2. 1 ದೊಡ್ಡ ಈರುಳ್ಳಿ ಅಥವಾ ನೀರುಳ್ಳಿ
  3. 2 - 3 ಎಸಳು ಬೆಳ್ಳುಳ್ಳಿ
  4. 1 - 2 ಹಸಿರುಮೆಣಸಿನಕಾಯಿ 
  5. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  6. ಒಂದು ದೊಡ್ಡ ಚಿಟಿಕೆ ಅರಿಶಿನ
  7. ಗೋಲಿಗಾತ್ರದ ಬೆಲ್ಲ 
  8. ಉಪ್ಪು ರುಚಿಗೆ ತಕ್ಕಷ್ಟು
  9. 2 ಚಮಚ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 1/2 ಟೀಸ್ಪೂನ್ ಉದ್ದಿನಬೇಳೆ
  5. 4 - 5 ಕರಿಬೇವಿನ ಎಲೆ
  6. 2 ಟೇಬಲ್ ಚಮಚ ಅಡುಗೆ ಎಣ್ಣೆ

ಟೊಮೇಟೊ ನೀರುಳ್ಳಿ ಚಟ್ನಿ ಮಾಡುವ ವಿಧಾನ:

  1. ಬೆಳ್ಳುಳ್ಳಿ, ಟೊಮೇಟೊ ಮತ್ತು ಈರುಳ್ಳಿಯನ್ನು ಕತ್ತರಿಸಿ. 
  2. ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ, ಬೆಳ್ಳುಳ್ಳಿ ಹಾಕಿ ಹುರಿಯಿರಿ. 
  3. ನಂತ್ರ ಕತ್ತರಿಸಿದ ಈರುಳ್ಳಿ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. 
  4. ಆಮೇಲೆ ಕತ್ತರಿಸಿದ ಟೊಮೇಟೊ ಹಾಕಿ ಹುರಿಯಿರಿ. 
  5. ಉಪ್ಪು ಮತ್ತು ಅರಿಶಿನ ಸೇರಿಸಿ, ಟೊಮೇಟೊ ಮೆತ್ತಗಾಗುವವರೆಗೆ ಬೇಯಿಸಿ. 
  6. ಕೊನೆಯಲ್ಲಿ ಹಸಿರುಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಸ್ಟವ್ ಆಫ್ ಮಾಡಿ. 
  7. ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಅರೆದಿಟ್ಟುಕೊಳ್ಳಿ. 
  8. ಒಂದು ಬಾಣಲೆಯಲ್ಲಿ ಮೆಣಸಿನಕಾಯಿ, ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ,  ಒಗ್ಗರಣೆಯನ್ನು ಮಾಡಿ. 
  9. ಅರೆದ ಮಿಶ್ರಣವನ್ನು ಹಾಕಿ, ಒಂದು ನಿಮಿಷ ಕುದಿಸಿ. ಬಿಸಿ ಅನ್ನ, ದೋಸೆ ಅಥವಾ ಚಪಾತಿಯೊಂದಿಗೆ ಬಡಿಸಿ. 

ಗುರುವಾರ, ಜೂನ್ 22, 2017

Hesarittinunde recipe in Kannada | ಹೆಸರಿಟ್ಟಿನುಂಡೆ ಮಾಡುವ ವಿಧಾನ

Hesarittinunde recipe in Kannada

Hesarittinunde recipe in Kannada | ಹೆಸರಿಟ್ಟಿನುಂಡೆ ಮಾಡುವ ವಿಧಾನ 

ಹೆಸರಿಟ್ಟಿನ ಉಂಡೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಹೆಸರುಬೇಳೆ
  2. 1/2 ಕಪ್ ಸಕ್ಕರೆ 
  3. 1/4 ಕಪ್ ತುಪ್ಪ
  4. 4 ಟೇಬಲ್ ಚಮಚ ಗೋಡಂಬಿ ಚೂರುಗಳು

ಹೆಸರಿಟ್ಟಿನುಂಡೆ ಮಾಡುವ ವಿಧಾನ:

  1. ಗೋಡಂಬಿಯನ್ನು ಚೂರು ಮಾಡಿ ಹುರಿದಿಟ್ಟುಕೊಳ್ಳಿ.
  2. ಒಂದು ದಪ್ಪ ತಳದ ಬಾಣಲೆಯಲ್ಲಿ ಹೆಸರುಬೇಳೆಯನ್ನು ಮಧ್ಯಮ ಉರಿಯಲ್ಲಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
  3. ಬಿಸಿ ಆರಿದ ಮೇಲೆ ಹೆಸರುಬೇಳೆಯನ್ನು ಮಿಕ್ಸಿಯಲ್ಲಿ ನುಣ್ಣನೆ ಪುಡಿಮಾಡಿಕೊಳ್ಳಿ. 
  4. ನಂತರ ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ. 
  5. ಪುಡಿಮಾಡಿದ ಸಕ್ಕರೆ ಮತ್ತು ಹೆಸರುಬೇಳೆಯನ್ನು ಜರಡಿಯಲ್ಲಿ ಸಾರಣಿಸಿ. 
  6. ನಂತರ ಹುರಿದಿಟ್ಟ ಗೋಡಂಬಿ ಸೇರಿಸಿ. ಸ್ವಲ್ಪ ಸ್ವಲ್ಪವೇ ತುಪ್ಪ ಸೇರಿಸುತ್ತ ಚೆನ್ನಾಗಿ ಕಲಸಿ. 
  7. ಕೈಯಲ್ಲಿ ಒತ್ತಿ ಉಂಡೆ ಮಾಡಲು ಆಗಬೇಕು. ಅಲ್ಲಿಯವರೆಗೆ ತುಪ್ಪ ಸೇರಿಸಿ ಕಲಸಿ. 
  8. ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಮುಷ್ಟಿಯಲ್ಲಿ ಉಂಡೆ ಮಾಡಿ. ಹೀಗೆ ಎಲ್ಲ ಉಂಡೆಗಳನ್ನು ಮಾಡಿ ಸವಿದು ಆನಂದಿಸಿ.


ಮಂಗಳವಾರ, ಜೂನ್ 20, 2017

Suruli poori recipe in Kannada | ಸುರುಳಿ ಪೂರಿ ಮಾಡುವ ವಿಧಾನ

Suruli poori recipe in Kannada

Suruli poori recipe in Kannada | ಸುರುಳಿ ಪೂರಿ ಮಾಡುವ ವಿಧಾನ 

ಸಿಹಿ ಪೂರಿಗೆ ಬೇಕಾಗುವ ಪದಾರ್ಥಗಳು :( ಅಳತೆ ಕಪ್ = 240 ಎಂಎಲ್ )

  1. 4 ಕಪ್ ಮೈದಾ ಹಿಟ್ಟು 
  2. 1/2 ಕಪ್ ತುಪ್ಪ
  3. 1 ಕಪ್ ಹಾಲು
  4. 2 ಕಪ್ ಸಕ್ಕರೆ 
  5. ಚಿಟಿಕೆ ಅಡುಗೆ ಸೋಡಾ
  6. ಚಿಟಿಕೆ ಏಲಕ್ಕಿ ಪುಡಿ 
  7. ಉಪ್ಪು ರುಚಿಗೆ ತಕ್ಕಷ್ಟು
  8. ಕರಿಯಲು ಎಣ್ಣೆ

ಖಾರ ಪೂರಿಗೆ ಬೇಕಾಗುವ ಪದಾರ್ಥಗಳು :( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಮೈದಾ ಹಿಟ್ಟು 
  2. 1/4 ಕಪ್ ತುಪ್ಪ
  3. 1/2 ಕಪ್ ಹಾಲು
  4. 1 - 2 ಚಮಚ ಅಚ್ಚ ಖಾರದ ಪುಡಿ
  5. ಸಣ್ಣ ಚಿಟಿಕೆ ಅಡುಗೆ ಸೋಡಾ
  6. ಉಪ್ಪು ರುಚಿಗೆ ತಕ್ಕಷ್ಟು
  7. ಕರಿಯಲು ಎಣ್ಣೆ

ಸಿಹಿ ಸುರುಳಿ ಪೂರಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು, ಸೋಡಾ ಮತ್ತು ತುಪ್ಪ ಹಾಕಿ ಕಲಸಿ. 
  2. ಸ್ವಲ್ಪ ಸ್ವಲ್ಪವೇ ಹಾಲು ಹಾಕುತ್ತಾ ಗಟ್ಟಿಯಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. 
  3. ೨ ಕಪ್ ಸಕ್ಕರೆಗೆ ೧ ಕಪ್ ನೀರು ಹಾಕಿ ಒಂದೆಳೆ ಪಾಕ ಮಾಡಿಟ್ಟು ಕೊಳ್ಳಿ. ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ ಸೇರಿಸಿ. 
  4. ಈಗ ಕಿತ್ತಳೆ ಹಣ್ಣಿನ ಗಾತ್ರದ ಉಂಡೆ ತೆಗೆದು ಕೊಂಡು ಲಟ್ಟಿಸಿ. 6 - 8 ಚೂರುಗಳಾಗಿ ಕತ್ತರಿಸಿ, ನಡುವಿನಲ್ಲಿ ಓರೆಯಾಗಿ ಗೀರಿ.  ಸುತ್ತಿ, ಅಂಚನ್ನು ಒತ್ತಿ ಸೇರಿಸಿ. 
  5. ಬಿಸಿಯಾದ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. 
  6. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆದು, ಮೇಲಿನಿಂದ ಸಕ್ಕರೆ ಪಾಕವನ್ನು ಚಮಚದಲ್ಲಿ ಹಾಕಿ. ಬಿಸಿ ಆರಿದ ಮೇಲೆ ಸವಿದು ಆನಂದಿಸಿ. 

ಖಾರ ಸುರುಳಿ ಪೂರಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು, ಅಚ್ಚ ಖಾರದ ಪುಡಿ, ಸೋಡಾ ಮತ್ತು ತುಪ್ಪ ಹಾಕಿ ಕಲಸಿ. 
  2. ಸ್ವಲ್ಪ ಸ್ವಲ್ಪವೇ ಹಾಲು ಹಾಕುತ್ತಾ ಗಟ್ಟಿಯಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. 
  3. ಈಗ ಕಿತ್ತಳೆ ಹಣ್ಣಿನ ಗಾತ್ರದ ಉಂಡೆ ತೆಗೆದು ಕೊಂಡು ಲಟ್ಟಿಸಿ. 6 - 8 ಚೂರುಗಳಾಗಿ ಕತ್ತರಿಸಿ, ನಡುವಿನಲ್ಲಿ ಓರೆಯಾಗಿ ಗೀರಿ.  ಸುತ್ತಿ, ಅಂಚನ್ನು ಒತ್ತಿ ಸೇರಿಸಿ. 
  4. ಬಿಸಿಯಾದ ಎಣ್ಣೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಿ. 
  5. ಸ್ವರ ಅಥವಾ ಗುಳ್ಳೆಗಳು ನಿಂತ ಮೇಲೆ ತೆಗೆದು, ಚಹಾ ಜೊತೆ ಸವಿದು ಆನಂದಿಸಿ. 

ಶನಿವಾರ, ಜೂನ್ 17, 2017

Gobi manchurian recipe in Kannada | ಗೋಬಿ ಮಂಚೂರಿ ಮಾಡುವ ವಿಧಾನ

Gobi manchurian recipe in Kannada | ಗೋಬಿ ಮಂಚೂರಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಭಾಗದಷ್ಟು ಹೂಕೋಸು
  2. 4 ಟೇಬಲ್ ಚಮಚ ಮೈದಾ ಹಿಟ್ಟು
  3. 2 ಟೇಬಲ್ ಚಮಚ ಜೋಳದ ಹಿಟ್ಟು
  4. 1 ಟೇಬಲ್ ಚಮಚ ಅಕ್ಕಿ ಹಿಟ್ಟು
  5. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  6. 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ 
  7. ಉಪ್ಪು ರುಚಿಗೆ ತಕ್ಕಷ್ಟು 
  8. ಎಣ್ಣೆ ಕಾಯಿಸಲು

ಸಾಸ್ ತಯಾರಿಸಲು ಬೇಕಾಗುವ ಪದಾರ್ಥಗಳು:

  1. 1 ಕತ್ತರಿಸಿದ ಈರುಳ್ಳಿ 
  2. 1/2 ಕತ್ತರಿಸಿದ ಕ್ಯಾಪ್ಸಿಕಂ 
  3. 1 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಬೆಳ್ಳುಳ್ಳಿ 
  4. 1 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ 
  5. 2 ಈರುಳ್ಳಿ ಗಿಡ 
  6. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ 
  7. 1/4 ಚಮಚ ಕಾಳುಮೆಣಸಿನ ಪುಡಿ 
  8. 1 ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ (ಬೇಕಾದಲ್ಲಿ) 
  9. 4 ಟೇಬಲ್ ಚಮಚ ಟೊಮೆಟೊ ಸಾಸ್ 
  10. 1 ಟೀಸ್ಪೂನ್ ಸೋಯಾ ಸಾಸ್ 
  11. ಉಪ್ಪು ರುಚಿಗೆ ತಕ್ಕಷ್ಟು 
  12. 2 ಟೀಸ್ಪೂನ್ ಅಡುಗೆ ಎಣ್ಣೆ 
  13. 1/2 ಕಪ್ ನೀರು

ಗೋಬಿ ಮಂಚೂರಿ ಮಾಡುವ ವಿಧಾನ:

  1. ಹೂಕೋಸನ್ನು ಬಿಡಿಸಿ, ಆಯ್ದು, ೨ ನಿಮಿಷ ಕುದಿಯುವ ಉಪ್ಪು ನೀರಿನಲ್ಲಿ ಬೇಯಿಸಿ. 
  2. ೨ ನಿಮಿಷದ ನಂತರ ನೀರು ಬಗ್ಗಿಸಿ ಪಕ್ಕಕ್ಕಿಡಿ. 
  3. ಈಗ ಸಾಸ್ ತಯಾರಿಸಲು 2 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ನುಣ್ಣಗೆ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಹುರಿಯಿರಿ. 
  4. ನಂತರ ಕತ್ತರಿಸಿದ ಈರುಳ್ಳಿ, ಈರುಳ್ಳಿ ಗಿಡದ ಬಿಳಿ ಭಾಗ, ಹಸಿರು ಮೆಣಸು ಮತ್ತು ಕ್ಯಾಪ್ಸಿಕಂ ಸೇರಿಸಿ ಹುರಿಯಿರಿ.
  5. ನಂತರ ಅಚ್ಚ ಖಾರದ ಪುಡಿ ಮತ್ತು ಕರಿ ಮೆಣಸಿನ ಪುಡಿ ಸೇರಿಸಿ ಕಲಸಿ. 
  6. ಟೊಮೆಟೊ ಸಾಸ್ ಮತ್ತು ಸೋಯಾ ಸಾಸ್ ಸೇರಿಸಿ. 
  7. ಈಗ 1/2 ಚಮಚ ಜೋಳದ ಹಿಟ್ಟನ್ನು 1/2 ಕಪ್ ನೀರಿನಲ್ಲಿ ಕಲಕಿ ಸೇರಿಸಿ. ಸ್ವಲ್ಪ ಮಂದವಾಗುವವರೆಗೆ ಮಗುಚಿ. 
  8. ಉಪ್ಪು ಸೇರಿಸಿ ಮತ್ತೆ ಚೆನ್ನಾಗಿ ಕಲಸಿ. ಸಾಸ್ ತಯಾರಾಯಿತು. 
  9. ನಂತ್ರ ಒಂದು ಬಟ್ಟಲಿನಲ್ಲಿ ಮೈದಾ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಕೆಂಪು ಮೆಣಸಿನಕಾಯಿ ಪುಡಿ, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ತೆಗೆದುಕೊಳ್ಳಿ. 
  10. ನೀರು ಸೇರಿಸಿ ಬಜ್ಜಿ ಅಥವಾ ಬೋಂಡಾದ ಹಿಟ್ಟಿಗಿಂತ ಕೊಂಚ ತೆಳುವಾಗಿ ಕಲಸಿಕೊಳ್ಳಿ. 
  11. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಹಿಟ್ಟಿನಲ್ಲಿ ಹೂಕೋಸಿನ ಚೂರುಗಳನ್ನು ಅದ್ದಿ, ಬಿಸಿಯಾದ ಎಣ್ಣೆಯಲ್ಲಿ ಗರಿ ಗರಿಯಾಗುವವರೆಗೆ ಮತ್ತು ಹೊಂಬಣ್ಣ ಬರುವವರೆಗೆ ಕಾಯಿಸಿ. 
  12. ನಂತರ ಮೇಲೆ ತಯಾರಿಸಿದ ಸಾಸ್ ಗೆ ಕರಿದ ಹೂಕೋಸನ್ನು ಸೇರಿಸಿ, ದೊಡ್ಡ ಉರಿಯಲ್ಲಿ ಚೆನ್ನಾಗಿ ಕಲಸಿ. ಕತ್ತರಿಸಿದ ಈರುಳ್ಳಿ ಗಿಡಗಳಿಂದ ಅಲಂಕರಿಸಿ  ತಕ್ಷಣವೇ ಬಡಿಸಿ.


ಬುಧವಾರ, ಜೂನ್ 14, 2017

Pudina shavige recipe in Kannada | ಪುದಿನ ಶಾವಿಗೆ ಮಾಡುವ ವಿಧಾನ


Shavige chitranna recipe in Kannada

Pudina shavige recipe in Kannada | ಪುದಿನ ಶಾವಿಗೆ ಮಾಡುವ ವಿಧಾನ

ಪುದಿನ ಶಾವಿಗೆ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಕಪ್ ಶಾವಿಗೆ 
  2. 1 ಟೀಸ್ಪೂನ್ ಸಾಸಿವೆ 
  3. 2 ಟೇಬಲ್ ಸ್ಪೂನ್ ಶೇಂಗಾ ಅಥವಾ ಕಡಲೆಕಾಯಿ 
  4. 1 ಟೀಸ್ಪೂನ್ ಉದ್ದಿನ ಬೇಳೆ 
  5. 1 - 2 ಹಸಿರು ಮೆಣಸಿನಕಾಯಿ 
  6. 5 - 6 ಕರಿಬೇವಿನ ಎಲೆ 
  7. ಉಪ್ಪು ನಿಮ್ಮ ರುಚಿ ಪ್ರಕಾರ 
  8. ದೊಡ್ಡ ಚಿಟಿಕೆ ಅರಿಶಿನ ಪುಡಿ 
  9. 3 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1 ಟೀಸ್ಪೂನ್ ಜೀರಿಗೆ
  2. 1/2 ಟೀಸ್ಪೂನ್ ಹೆಚ್ಚಿದ ಶುಂಠಿ
  3. 1/2 ಟೀಸ್ಪೂನ್ ಹೆಚ್ಚಿದ ಬೆಳ್ಳುಳ್ಳಿ
  4. 1 ಮಧ್ಯಮ ಗಾತ್ರದ ಈರುಳ್ಳಿ ಹೆಚ್ಚಿದ್ದು
  5. 1/2 ಹಿಡಿ ಹೆಚ್ಚಿದ ಕೊತ್ತಂಬರಿ ಸೊಪ್ಪು 
  6. 1 ಹಿಡಿ ಹೆಚ್ಚಿದ ಪುದಿನ ಸೊಪ್ಪು 
  7. 2 ಟೀಸ್ಪೂನ್ ಅಡುಗೆ ಎಣ್ಣೆ


ಪುದಿನ ಶಾವಿಗೆ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ. ಮಸಾಲೆಗೆ ಪಟ್ಟಿ ಮಾಡಿದ ಪದಾರ್ಥಗಳನ್ನು ಒಂದೊಂದಾಗಿ ಸೇರಿಸುತ್ತ ಹುರಿಯಿರಿ. 
  2. ಮೊದಲಿಗೆ ಜೀರಿಗೆ, ಜೀರಿಗೆ ಸಿಡಿದ ಮೇಲೆ ಶುಂಠಿ, ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ. 
  3. ಕೊನೆಯಲ್ಲಿ ಪುದಿನ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಬಾಡಿಸಿ. 
  4. ಹುರಿದ ಪದಾರ್ಥಗಳು ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಅರೆದು ಪಕ್ಕಕ್ಕಿಡಿ. 
  5. ಒಂದು ಪಾತ್ರೆಯಲ್ಲಿ ಸುಮಾರು 5 ಕಪ್ ನೀರು, 1/2 ಚಮಚ ಉಪ್ಪು ಮತ್ತು 1 ಚಮಚ ಎಣ್ಣೆ ತೆಗೆದುಕೊಳ್ಳಿ. ನೀರನ್ನು ಕುದಿಸಿ, ಅದಕ್ಕೆ ಶಾವಿಗೆ ಹಾಕಿ ಬೇಯಿಸಿಕೊಳ್ಳಿ. ಗಮನಿಸಿ ತುಂಬ ಮೆತ್ತಗೆ ಬೇಯಿಸುವುದು ಬೇಡ.
  6. ಬೇಯಿಸಿದ ನಂತರ ನೀರನ್ನು ಬಸಿದು ಪಕ್ಕಕ್ಕಿಡಿ. 
  7. ಈಗ ಒಗ್ಗರಣೆ ಮಾಡಲು ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಲು ಇಡಿ. ಮೊದಲಿಗೆ ಶೇಂಗಾ ಅಥವಾ ಕಡಲೆಕಾಯಿಯನ್ನು ಹಾಕಿ. 
  8. ಕಡಲೆಕಾಯಿ ಸ್ವಲ್ಪ ಕಾದು ಸಿಡಿಯಲು ಪ್ರಾರಂಭಿಸಿದ ಕೂಡಲೇ ಸಾಸಿವೆ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ. 
  9. ಸಾಸಿವೆ ಸಿಡಿದ ಕೂಡಲೇ ಹಸಿರುಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ. 
  10. ನಂತರ ಅರೆದ ಮಸಾಲೆಯನ್ನು ಸೇರಿಸಿ. ಅರಿಶಿನ ಪುಡಿ ಮತ್ತು ಉಪ್ಪು ಹಾಕಿ. ಚೆನ್ನಾಗಿ ಕಲಸಿ. 
  11. ಈಗ ಬೇಯಿಸಿದ ಶಾವಿಗೆ ಹಾಕಿ.  
  12. ಚಪ್ಪಟೆಯಾದ ಸಟ್ಟುಗ ಬಳಸಿ ಕಲಸಿ. ನಂತರ ಸ್ಟೋವ್ ಆಫ್ ಮಾಡಿ. ಸವಿದು ಆನಂದಿಸಿ.

To see step by step pictures click here (ಹೆಚ್ಚಿನ ವಿವರಣೆ ಮತ್ತು ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಜೂನ್ 13, 2017

Kosu vade or pakoda recipe in Kannada | ಕೋಸು ವಡೆ ಅಥವಾ ಪಕೋಡ ಮಾಡುವ ವಿಧಾನ

Kosu vade or pakoda recipe in Kannada

Kosu vade or pakoda recipe in Kannada | ಕೋಸು ವಡೆ ಅಥವಾ ಪಕೋಡ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. ಮಧ್ಯಮ ಗಾತ್ರದ ಕೋಸಿನ ಅರ್ಧಭಾಗ
  2. 1.5 ಕಪ್ ಕಡ್ಲೆ ಹಿಟ್ಟು
  3. 1/2 ಕಪ್ ಅಕ್ಕಿ ಹಿಟ್ಟು
  4. 1 ಟೀಸ್ಪೂನ್ ಅಚ್ಚ ಖಾರದ ಪುಡಿ
  5. 1 - 2 ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ
  6. 2 ಟೇಬಲ್ ಚಮಚ ಹೆಚ್ಚಿದ ಕರಿಬೇವು
  7. 2 ಟೇಬಲ್ ಚಮಚ ಹೆಚ್ಚಿದಕೊತ್ತಂಬರಿ ಸೊಪ್ಪು
  8. 1/4 ಟೀಸ್ಪೂನ್ ಇಂಗು
  9. 1/2 ಟೀಸ್ಪೂನ್ ತುರಿದ ಶುಂಠಿ (ಬೇಕಾದಲ್ಲಿ)
  10. ಉಪ್ಪು ರುಚಿಗೆ ತಕ್ಕಷ್ಟು
  11. ಎಣ್ಣೆ ಖಾಯಿಸಲು ಅಥವಾ ಕರಿಯಲು

ಕೋಸು ವಡೆ ಅಥವಾ ಪಕೋಡ ಮಾಡುವ ವಿಧಾನ:

  1. ಕೋಸನ್ನು ಸಣ್ಣನೆ ಹೆಚ್ಚಿ, ೫ ನಿಮಿಷ ಉಪ್ಪು ನೀರಿನಲ್ಲಿ ಹಾಕಿಡಿ. 
  2. ನಂತರ ನೀರು ಹಿಂಡಿ ತೆಗೆದು ಒಂದು ಅಗಲವಾದ ಬಟ್ಟಲಿಗೆ ಹಾಕಿಕೊಳ್ಳಿ. 
  3. ಅದಕ್ಕೆ ಅಚ್ಚ ಖಾರದ ಪುಡಿ, ಕತ್ತರಿಸಿದ ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಶುಂಠಿ (ಬೇಕಾದಲ್ಲಿ), ಉಪ್ಪು ಮತ್ತು ಇಂಗು ಸೇರಿಸಿ ಚೆನ್ನಾಗಿ ಕಲಸಿ. ನೀರು ಹಾಕಬೇಡಿ.
  4. ನಂತರ ಕಡಲೆಹಿಟ್ಟು, ಅಕ್ಕಿ ಹಿಟ್ಟು ಸೇರಿಸಿ ಮತ್ತೆ ಚೆನ್ನಾಗಿ ಕಲಸಿ. ಈಗ ಸಹ ನೀರು ಸೇರಿಸುವ ಅವಶ್ಯಕತೆ ಇಲ್ಲ. ಹಿಟ್ಟು ತುಂಬ ಉದುರಾಗಿದೆ (ಒಣಕಲಾಗಿದೆ) ಎನಿಸಿದರೆ ಸ್ವಲ್ಪವೇ ಸ್ವಲ್ಪ ನೀರು ಸಿಂಪಡಿಸಿ ಚೆನ್ನಾಗಿ ಕಲಸಿ. 
  5. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿಯಾಗಲು ಇಡಿ. 
  6. ಎಣ್ಣೆ ಬಿಸಿಯಾದ ಕೂಡಲೇ ಸ್ವಲ್ಪ ಸ್ವಲ್ಪವೇ ಹಿಟ್ಟು ತೆಗೆದುಕೊಂಡು ಬಿಸಿ ಎಣ್ಣೆಗೆ ಹಾಕಿ.
  7.  ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಕಾಯಿಸಿ. ಬಿಸಿಬಿಸಿಯಾಗಿರುವಾಗಲೇ ಸವಿದು ಆನಂದಿಸಿ. 

ಸೋಮವಾರ, ಜೂನ್ 12, 2017

Kudi gatti or thambli gatti recipe in kannada | ಕುಡಿ ಗಟ್ಟಿ ಅಥವಾ ತಂಬ್ಳಿ ಗಟ್ಟಿ ಮಾಡುವ ವಿಧಾನ

Kudi gatti or thambli gatti recipe in kannada

Kudi gatti or thambli gatti recipe in kannada | ಕುಡಿ ಗಟ್ಟಿ ಅಥವಾ ತಂಬ್ಳಿ ಗಟ್ಟಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ಬಟ್ಟಲು ಸೊಪ್ಪುಗಳು (ನುಗ್ಗೆ, ತೊಂಡೆ, ಇಲಿಕಿವಿ, ನೆಕ್ಕರೆ, ನೆಲನೆಕ್ರೆ, ಗೇರುಸೊಪ್ಪು, ಪೇರಳೆ ಕುಡಿ, ಚೇರ್ ಕುಡಿ, ಗರಗ, ಕರಿಬೇವು, ಕಾಕಿ ಸೊಪ್ಪು, ಹೊನ್ನೆಗಿನೆ, ಚಕ್ರಮುನಿ, ಎಲ್ಲೂರಿ, ವಿಟಮಿನ್ ಸೊಪ್ಪು, ವಾಯುವಿಳಂಗ, ಕೆಂಜಿಗೆ ಮುಳ್ಳು ಕುಡಿ, ಬಿಲ್ಪತ್ರೆ ಕುಡಿ ಇತ್ಯಾದಿ)
  2. 2 ಟೀಸ್ಪೂನ್ ಕೊತ್ತಂಬರಿ ಬೀಜ
  3. 1 ಟೀಸ್ಪೂನ್ ಓಮ ಅಥವಾ ಅಜವೈನ್
  4. 1/2 - 1 ಟೀಸ್ಪೂನ್ ಕಾಳುಮೆಣಸು
  5. 4 - 5 ಒಣ ಮೆಣಸಿನಕಾಯಿ
  6. ಸಣ್ಣ ನೆಲ್ಲಿಕಾಯಿಗಾತ್ರದ ಹುಣಿಸೇಹಣ್ಣು
  7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 4 ಟೇಬಲ್ ಚಮಚ ತೆಂಗಿನೆಣ್ಣೆ ಅಥವಾ ಅಡುಗೆ ಎಣ್ಣೆ
  4. ಒಂದು ಮಧ್ಯಮ ಗಾತ್ರದ ಬೆಳ್ಳುಳ್ಳಿ

ಕುಡಿ ಗಟ್ಟಿ ಅಥವಾ ತಂಬ್ಳಿ ಗಟ್ಟಿ ಮಾಡುವ ವಿಧಾನ:

  1. ಎಲ್ಲ ಸೊಪ್ಪುಗಳನ್ನು ಆಯ್ದು ತೊಳೆಯಿರಿ. 
  2. ಒಂದು ಬಾಣಲೆಯಲ್ಲಿ ತೊಳೆದ ಸೊಪ್ಪು ಕೊತ್ತಂಬರಿ ಬೀಜ, ಓಮ, ಕಾಳುಮೆಣಸು, ಒಣಮೆಣಸಿನಕಾಯಿ, ಹುಣಿಸೇಹಣ್ಣು ಮತ್ತು ಉಪ್ಪನ್ನು ತೆಗೆದುಕೊಳ್ಳಿ. 
  3. ೧/೨ ಕಪ್ ನೀರು ಹಾಕಿ, ಮುಚ್ಚಳ ಮುಚ್ಚಿ, ಸೊಪ್ಪನ್ನು ಬೇಯಿಸಿಕೊಳ್ಳಿ. 
  4. ಬಿಸಿ ಆರಿದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಅರೆದುಕೊಳ್ಳಿ. 
  5. ಒಂದು ಬಾಣಲೆಯಲ್ಲಿ ಮೆಣಸಿನಕಾಯಿ, ಎಣ್ಣೆ, ಸಾಸಿವೆ ಮತ್ತು ಕತ್ತರಿಸಿದ ಬೆಳ್ಳುಳ್ಳಿ ಹಾಕಿ,  ಒಗ್ಗರಣೆಯನ್ನು ಮಾಡಿ. 
  6. ಅರೆದ ಮಿಶ್ರಣವನ್ನು ಹಾಕಿ, ಎರಡು ನಿಮಿಷ ಕುದಿಸಿ. ಬಿಸಿ ಅನ್ನ ಮತ್ತು ತುಪ್ಪದೊಂದಿಗೆ ಬಡಿಸಿ. 

ಶುಕ್ರವಾರ, ಜೂನ್ 9, 2017

Shavige chitranna recipe in Kannada | ಶಾವಿಗೆ ಚಿತ್ರಾನ್ನ ಮಾಡುವ ವಿಧಾನ

Shavige chitranna recipe in Kannada

Shavige chitranna recipe in Kannada | ಶಾವಿಗೆ ಚಿತ್ರಾನ್ನ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಕಪ್ ಶಾವಿಗೆ 
  2. 1/2 ಕಪ್ ತೆಂಗಿನ ತುರಿ 
  3. 2 - 4 ಹಸಿರು ಮೆಣಸಿನಕಾಯಿ 
  4. 1 ಟೀಸ್ಪೂನ್ ಸಾಸಿವೆ 
  5. 2 ಟೇಬಲ್ ಸ್ಪೂನ್ ಶೇಂಗಾ ಅಥವಾ ಕಡಲೆಕಾಯಿ 
  6. 1 ಟೀಸ್ಪೂನ್ ಉದ್ದಿನ ಬೇಳೆ 
  7. 1 ಟೀಸ್ಪೂನ್ ಕಡ್ಲೆಬೇಳೆ 
  8. ಉಪ್ಪು ನಿಮ್ಮ ರುಚಿ ಪ್ರಕಾರ 
  9. 5 - 6 ಕರಿಬೇವಿನ ಎಲೆ 
  10. 1 ದೊಡ್ಡ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  11. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು 
  12. 1/4 ಟೀಸ್ಪೂನ್ ಅರಿಶಿನ ಪುಡಿ 
  13. 1 ಮಧ್ಯಮ ಗಾತ್ರದ ನಿಂಬೆ ಹಣ್ಣು 
  14. 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಶಾವಿಗೆ ಚಿತ್ರಾನ್ನ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಸುಮಾರು 5 ಕಪ್ ನೀರು, 1/2 ಚಮಚ ಉಪ್ಪು ಮತ್ತು 1 ಚಮಚ ಎಣ್ಣೆ ತೆಗೆದುಕೊಳ್ಳಿ. ನೀರನ್ನು ಕುದಿಸಿ, ಅದಕ್ಕೆ ಶಾವಿಗೆ ಹಾಕಿ ಬೇಯಿಸಿಕೊಳ್ಳಿ. ಗಮನಿಸಿ ತುಂಬ ಮೆತ್ತಗೆ ಬೇಯಿಸುವುದು ಬೇಡ.
  2. ಬೇಯಿಸಿದ ನಂತರ ನೀರನ್ನು ಬಸಿದು ಪಕ್ಕಕ್ಕಿಡಿ. 
  3. ಒಂದು ಮಿಕ್ಸಿ ಜಾರಿನಲ್ಲಿ 1 ಕಪ್ ತೆಂಗಿನ ತುರಿ, 2 ಹಸಿರು ಮೆಣಸಿನಕಾಯಿ ಮತ್ತು 1/2 ಚಮಚ ಸಾಸಿವೆ ಹಾಕಿ. 
  4. ನೀರು ಹಾಕದೇ ಪುಡಿ ಮಾಡಿ ಪಕ್ಕಕ್ಕಿಡಿ. ಇದನ್ನು ಒಗ್ಗರಣೆ ಮಾಡುವಾಗ ಮುಂದೆ ಉಪಯೋಗಿಸಲಾಗುತ್ತದೆ. 
  5. ಈಗ ಒಂದು ದೊಡ್ಡ ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಲು ಇಡಿ. ಮೊದಲಿಗೆ ಶೇಂಗಾ ಅಥವಾ ಕಡಲೆಕಾಯಿಯನ್ನು ಹಾಕಿ. 
  6. ಕಡಲೆಕಾಯಿ ಸ್ವಲ್ಪ ಕಾದು ಸಿಡಿಯಲು ಪ್ರಾರಂಭಿಸಿದ ಕೂಡಲೇ ಸಾಸಿವೆ, ಕಡ್ಲೆಬೇಳೆ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ. 
  7. ಸಾಸಿವೆ ಸಿಡಿದ ಕೂಡಲೇ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  8. ನಂತರ ಪುಡಿಮಾಡಿದ ತೆಂಗಿನ ತುರಿ, ಸಾಸಿವೆ ಮತ್ತು ಹಸಿಮೆಣಸಿನ ಮಿಶ್ರಣವನ್ನು ಸೇರಿಸಿ. ಅರಿಶಿನ ಪುಡಿಯನ್ನು ಹಾಕಿ. ಚೆನ್ನಾಗಿ ಕಲಸಿ. ನಂತರ ಸ್ಟೋವ್ ಆಫ್ ಮಾಡಿ.
  9. ಈಗ ಬೇಯಿಸಿದ ಶಾವಿಗೆ ಹಾಕಿ. 
  10. ಮೇಲಿನಿಂದ ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ನಿಂಬೆಹಣ್ಣಿನ ರಸವನ್ನು ಸೇರಿಸಿ. 
  11. ಚಪ್ಪಟೆಯಾದ ಸಟ್ಟುಗ ಬಳಸಿ ಚಿತ್ರಾನ್ನವನ್ನು ಕಲಸಿ. ಸವಿದು ಆನಂದಿಸಿ.

To see step by step pictures click here (ಈ ಅಡುಗೆ ಬಗ್ಗೆ ಹೆಚ್ಚಿನ ವಿವರಣೆ ಮತ್ತು ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಜೂನ್ 6, 2017

Sihi kumbalakai palya recipe in Kannada | ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿ ಪಲ್ಯ ಮಾಡುವ ವಿಧಾನ

Sihi kumbalakai palya recipe in Kannada

Sihi kumbalakai palya recipe in Kannada | ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿ ಪಲ್ಯ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕೆಜಿ ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 1 ಟೀಸ್ಪೂನ್ ಕಡ್ಲೆ ಬೇಳೆ
  5. 4 - 6 ಟೀಸ್ಪೂನ್ ಅಡುಗೆ ಎಣ್ಣೆ
  6. 1 ಒಣ ಮೆಣಸಿನಕಾಯಿ (ಬೇಕಾದಲ್ಲಿ)
  7. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  8. 1 ದೊಡ್ಡ ಚಿಟಿಕೆ ಇಂಗು
  9. 4 - 5 ಕರಿಬೇವಿನ ಎಲೆ
  10. ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ
  11. ಸಣ್ಣ ಗೋಲಿಗಾತ್ರದ ಹುಣಿಸೇಹಣ್ಣು
  12. ಉಪ್ಪು ರುಚಿಗೆ ತಕ್ಕಷ್ಟು
  13. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  14. 1/4 ಕಪ್ ನೀರು

ಅರೆಯಲು ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 2 - 4 ಒಣ ಮೆಣಸಿನ ಕಾಯಿ
  3. 1/2 ಟೀಸ್ಪೂನ್ ಸಾಸಿವೆ

ಸಿಹಿ ಕುಂಬಳಕಾಯಿ ಪಲ್ಯ ಮಾಡುವ ವಿಧಾನ:

  1. ಸಿಹಿ ಕುಂಬಳಕಾಯಿಯನ್ನು ತೊಳೆದು, ಸಿಪ್ಪೆ ತೆಗೆದು,  ಕತ್ತರಿಸಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  3. ಸಾಸಿವೆ ಸಿಡಿದ ಕೂಡಲೇ ಅರಶಿನ, ಇಂಗು, ಒಣ ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 
  4. ಅದಕ್ಕೆ ಕತ್ತರಿಸಿದ ಸಿಹಿ ಕುಂಬಳಕಾಯಿ ಹಾಕಿ. 
  5. ಉಪ್ಪು, ಹುಣಿಸೆರಸ ಮತ್ತು ಬೆಲ್ಲ ಹಾಕಿ ಮಗುಚಿ.
  6. 1/4 ಕಪ್ ನೀರು ಹಾಕಿ, ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ. 
  7. ಅದೇ ಸಮಯದಲ್ಲಿ ಒಂದು ಮಿಕ್ಸಿ ಜಾರ್ ನಲ್ಲಿ ತೆಂಗಿನ ತುರಿ, 1/4 ಚಮಚ ಸಾಸಿವೆ ಮತ್ತು ಒಣ ಮೆಣಸು ಹಾಕಿ, ನೀರು ಹಾಕದೆ ಪುಡಿ ಮಾಡಿ. 
  8. ಪುಡಿ ಮಾಡಿದ ಮಸಾಲೆಯನ್ನು ಬೇಯುತ್ತಿರುವ ಸಿಹಿ ಕುಂಬಳಕಾಯಿ ಅಥವಾ ಚೀನಿಕಾಯಿಗೆ ಹಾಕಿ. 
  9. ಚೆನ್ನಾಗಿ ಮಗುಚಿ, ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟೋವ್ ಆಫ್ ಮಾಡಿ. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಸೋಮವಾರ, ಜೂನ್ 5, 2017

Karibevu chutney pudi recipe in Kannada | ಕರಿಬೇವು ಚಟ್ನಿ ಪುಡಿ ಮಾಡುವ ವಿಧಾನ

Karibevu chutney pudi recipe in Kannada

Karibevu chutney pudi recipe in Kannada | ಕರಿಬೇವು ಚಟ್ನಿ ಪುಡಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 10 - 20 ಒಣ ಮೆಣಸಿನಕಾಯಿ (ಮಧ್ಯಮ ಖಾರ)
  2. 2 ಹಿಡಿ ಅಥವಾ 40 ಎಸಳು ಕರಿಬೇವು 
  3. 1/2 ಕಪ್ ಕಡಲೆಬೇಳೆ 
  4. 1/3 ಕಪ್ ಉದ್ದಿನ ಬೇಳೆ 
  5. 1/2 ಕಪ್ ಒಣ ಕೊಬ್ಬರಿ ತುರಿದಿದ್ದು
  6. 2 ಟೀಸ್ಪೂನ್ ಕೊತ್ತಂಬರಿ ಬೀಜ
  7. 1/2 ಟೀಸ್ಪೂನ್ ಇಂಗು
  8. ಸಣ್ಣ ಲಿಂಬೆ ಹಣ್ಣಿನ ಗಾತ್ರದ ಹುಣಿಸೇಹಣ್ಣು (ನಾನು ವಾಟೆಹುಳಿ ಪುಡಿ ಉಪಯೋಗಿಸಿದ್ದೇನೆ)
  9. 2 ಟೀಸ್ಪೂನ್ ಅಡುಗೆ ಎಣ್ಣೆ

ಕರಿಬೇವು ಚಟ್ನಿ ಪುಡಿ ಮಾಡುವ ವಿಧಾನ:

  1. ಒಂದು ಬಾಣಲೆಯನ್ನು ಬಿಸಿ ಮಾಡಿ. ಒಂದು ಚಮಚ ಎಣ್ಣೆ ಹಾಕಿ. ಕರಿಬೇವನ್ನು ಗರಿಗರಿ ಯಾಗುವವರೆಗೆ ಹುರಿದು ತೆಗೆದಿಡಿ.
  2. ನಂತರ ಒಣ ಕೊಬ್ಬರಿ ಯನ್ನು ಹುರಿದು ತೆಗೆದಿಡಿ. 
  3. ಇನ್ನೊಂದು ಚಮಚ ಅಡುಗೆ ಎಣ್ಣೆ ಹಾಕಿ ಒಣ ಮೆಣಸಿನಕಾಯಿಗಳನ್ನು ಹುರಿಯಿರಿ.
  4. ನಂತರ ಕಡಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
  5. ನಂತರ ಉದ್ದಿನ ಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
  6. ಕೊನೆಯಲ್ಲಿ ಕೊತ್ತಂಬರಿ ಬೀಜ, ಇಂಗು ಮತ್ತು ಹುಣಿಸೆಹಣ್ಣಿನ ಚೂರುಗಳನ್ನು ಹಾಕಿ ಕೆಲವು ಸೆಕೆಂಡ್ಗಳ ಕಾಲ ಹುರಿಯಿರಿ. 
  7. ಹುರಿದ ಎಲ್ಲ ಪದಾರ್ಥಗಳು ತಣ್ಣಗೆ ಆದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 


ಶುಕ್ರವಾರ, ಜೂನ್ 2, 2017

Baale hoovina chutney recipe in kannada | ಬಾಳೆ ಹೂವಿನ ಚಟ್ನಿ ಮಾಡುವ ವಿಧಾನ

Baale hoovina chutney recipe in kannada

Baale hoovina chutney recipe in kannada | ಬಾಳೆ ಹೂವಿನ ಚಟ್ನಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕತ್ತರಿಸಿದ ಬಾಳೆ ಹೂವು
  2. 1/2 ಕಪ್ ತೆಂಗಿನ ತುರಿ
  3. 2 - 4 ಒಣ ಮೆಣಸಿನಕಾಯಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. ಒಂದು ಸಣ್ಣ ಗೋಲಿಗಾತ್ರದ ಹುಣಿಸೇಹಣ್ಣು
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ (ಬೇಕಾದಲ್ಲಿ)
  2. 2 ಟೀಸ್ಪೂನ್ ಉದ್ದಿನ ಬೇಳೆ
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಬಾಳೆ ಹೂವಿನ ಚಟ್ನಿ ಮಾಡುವ ವಿಧಾನ:

  1. ಬಾಳೆ ಹೂ ಅಥವಾ ಬಾಳೆ ಮೂತಿಯನ್ನು ತೊಳೆದು ಸಣ್ಣದಾಗಿ ಕೊಚ್ಚಿ.  ನೇಂದ್ರ ಅಥವಾ ಏಲಕ್ಕಿ ಬಾಳೆ ಹೂ ಆದಲ್ಲಿ ಉತ್ತಮ. ಬೇರೆ ಬಾಳೆ ಆದಲ್ಲಿ ಹೊರಗಿನ ಒಂದೆರಡು ಎಲೆಯನ್ನು ತೆಗೆದು ಹಾಕಿ. 
  2. ಒಂದು ಬಾಣಲೆಗೆ ಒಗ್ಗರಣೆಗೆ ಪಟ್ಟಿ ಮಾಡಿದ  ಪದಾರ್ಥಗಳನ್ನು (ಎಣ್ಣೆ, ಒಣ ಮೆಣಸು, ಸಾಸಿವೆ ಮತ್ತು ಉದ್ದಿನಬೇಳೆ) ಹಾಕಿ, ಉದ್ದಿನಬೇಳೆ ಹೊಂಬಣ್ಣ ಬರುವವರೆಗೆ ಹುರಿಯಿರಿ.
  3. ಒಂದು ಮಿಕ್ಸೀ ಜಾರಿಗೆ ತೆಂಗಿನ ತುರಿ, ಕೊಚ್ಚಿದ ಬಾಳೆ ಹೂ, ತೆಂಗಿನ ತುರಿ, ಒಣ ಮೆಣಸು, ಕೊತ್ತಂಬರಿ ಬೀಜ, ಉಪ್ಪು ಮತ್ತು ಹುಣಿಸೇಹಣ್ಣು ಹಾಕಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ  ಅರೆಯಿರಿ. 
  5. ಕೊನೆಯಲ್ಲಿ ತಯಾರಿಸಿದ ಒಗ್ಗರಣೆಯನ್ನು ಹಾಕಿ (ಹುರಿದ ಒಣಮೆಣಸಿನಕಾಯಿ, ಉದ್ದಿನ ಬೇಳೆ ಮತ್ತು ಸಾಸಿವೆ) ಒಂದೆರಡು ಸುತ್ತು ಅರೆದು ತೆಗೆಯಿರಿ.
Related Posts Plugin for WordPress, Blogger...