Udupi style idli sambar recipe | ಉಡುಪಿ - ಮಂಗಳೂರು ಶೈಲಿಯ ಇಡ್ಲಿ ಸಾಂಬಾರ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:
- 1/4 ಕಪ್ ತೊಗರಿಬೇಳೆ
- 1 ಸಣ್ಣ ಗಾತ್ರದ ಆಲೂಗಡ್ಡೆ ಅಥವಾ ಇನ್ನಾವುದೇ ಮೆತ್ತಗೆ ಬೇಯುವ ತರಕಾರಿ
- 1 ಸಣ್ಣ ಗಾತ್ರದ ನುಗ್ಗೆಕಾಯಿ
- 1 ಸಣ್ಣ ಗಾತ್ರದ ಬದನೇಕಾಯಿ
- 1 ದೊಡ್ಡ ಗಾತ್ರದ ಈರುಳ್ಳಿ
- 1 ಮಧ್ಯಮ ಗಾತ್ರದ ಟೊಮೇಟೊ
- 1/4 ಟೀಸ್ಪೂನ್ ಅರಿಶಿನ ಪುಡಿ
- ಒಂದು ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು (ಅಥವಾ ನಿಮ್ಮ ರುಚಿ ಪ್ರಕಾರ)
- 1/2 ಟೀಸ್ಪೂನ್ ಬೆಲ್ಲ (ಅಥವಾ ನಿಮ್ಮ ರುಚಿ ಪ್ರಕಾರ)
- ಉಪ್ಪು ನಿಮ್ಮ ರುಚಿ ಪ್ರಕಾರ
ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಥವಾ 3 ಟೀಸ್ಪೂನ್ ಸಾಂಬಾರ್ ಪೌಡರ್ )
- 2 - 4 ಕೆಂಪು ಮೆಣಸಿನಕಾಯಿ
- 1 ಟೀಸ್ಪೂನ್ ಉದ್ದಿನ ಬೇಳೆ
- 1/2 ಟೀಸ್ಪೂನ್ ಉದ್ದಿನ ಬೇಳೆ
- 1.5 ಟೀಸ್ಪೂನ್ ಕೊತ್ತಂಬರಿ ಬೀಜ ಅಥವಾ ಧನಿಯಾ
- 1/4 ಟೀಸ್ಪೂನ್ ಜೀರಿಗೆ
- 8 - 10 ಕಾಳು ಮೆಂತೆ ಅಥವಾ ಮೆಂತ್ಯ
- ಒಂದು ದೊಡ್ಡ ಚಿಟಿಕೆ ಇಂಗು
- 1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಕೆಂಪು ಮೆಣಸಿನಕಾಯಿ
- 1/4 ಟೀಸ್ಪೂನ್ ಮೆಂತೆ ಅಥವಾ ಮೆಂತ್ಯ
- 1/4 ಟೀಸ್ಪೂನ್ ಸಾಸಿವೆ
- 5 - 6 ಕರಿಬೇವಿನ ಎಲೆ
- ಒಂದು ದೊಡ್ಡ ಚಿಟಿಕೆ ಇಂಗು
- 2 ಟೀಸ್ಪೂನ್ ಅಡುಗೆ ಎಣ್ಣೆ
ಉಡುಪಿ - ಮಂಗಳೂರು ಶೈಲಿಯ ಇಡ್ಲಿ ಸಾಂಬಾರ್ ಮಾಡುವ ವಿಧಾನ:
- ಈ ಸಾಂಬಾರ್ ನ್ನು ಸಾಂಬಾರ್ ಪುಡಿ ಉಪಯೋಗಿಸಿ ಮಾಡಲಾಗುತ್ತದೆ. ಹಾಗಾಗಿ ನಿಮ್ಮಲ್ಲಿ ಸಾಂಬಾರ್ ಪುಡಿ ಇಲ್ಲದಿದ್ದರೆ, ಮೇಲೆ "ಮಸಾಲೆಗೆ" ಎಂದು ಪಟ್ಟಿ ಮಾಡಿರುವ ಪದಾರ್ಥಗಳನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ.
- ಎಲ್ಲ ತರಕಾರಿಗಳನ್ನು ಹೆಚ್ಚಿಟ್ಟುಕೊಳ್ಳಿ. ಹೆಚ್ಚಿದ ಬದನೆಕಾಯಿಯನ್ನು ನೀರಿನಲ್ಲಿ ಹಾಕಿಡಿ.
- ನಂತರ ಕುಕ್ಕರ್ ನಲ್ಲಿ ತೊಗರಿಬೇಳೆಯನ್ನು ತೊಳೆದು, ಒಂದು ಕಪ್ ನೀರು ಹಾಕಿ ಬೇಯಿಸಿಕೊಳ್ಳಿ.
- ನಂತರ ಬೇಳೆಯಿರುವ ಕುಕ್ಕರ್ ಗೆ, ಮೇಲೆ ಹೆಚ್ಚಿದ ಎಲ್ಲ ತರಕಾರಿಗಳನ್ನು ಹಾಕಿ, ಪುನಃ ಒಂದು ವಿಷಲ್ ಮಾಡಿ ಬೇಯಿಸಿಕೊಳ್ಳಿ.
- ಒತ್ತಡ ಇಳಿದ ಮೇಲೆ ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಹಾಕಿ ಕುದಿಸಿ.
- ಅಗತ್ಯವಿದ್ದಷ್ಟು ನೀರು ಮತ್ತು ಸಾಂಬಾರ್ ಪೌಡರ್ ಹಾಕಿ ಕುದಿಸಿ.
- ಕೆಂಪು ಮೆಣಸು, ಸಾಸಿವೆ, ಮೆಂತೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ