ಬುಧವಾರ, ಜನವರಿ 18, 2017

Moolangi sambar recipe in Kannada | ಮೂಲಂಗಿ ಸಾಂಬಾರ್ ಮಾಡುವ ವಿಧಾನ

Moolangi sambar recipe in Kannada

Moolangi sambar recipe in Kannada | ಮೂಲಂಗಿ ಸಾಂಬಾರ್ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಮಧ್ಯಮ ಗಾತ್ರದ ಮೂಲಂಗಿ 
  2. 1 ದೊಡ್ಡ ಟೊಮೇಟೊ
  3. 1 ದೊಡ್ಡ ಈರುಳ್ಳಿ
  4. 4 ಟೇಬಲ್ ಚಮಚ ತೊಗರಿಬೇಳೆ
  5. 1/4 ಟೀಸ್ಪೂನ್ ಅರಿಶಿನ ಪುಡಿ
  6. 2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  7. 1/2 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
  8. ಸಣ್ಣ ಗೋಲಿ ಗಾತ್ರದ ಹುಣಿಸೇಹಣ್ಣು (ಬೇಕಾದಲ್ಲಿ)

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/ ಕಪ್ ತೆಂಗಿನ ತುರಿ
  2. 2 - 4 ಕೆಂಪು ಮೆಣಸಿನಕಾಯಿ
  3. 1.5 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/4 ಟೀಸ್ಪೂನ್ ಜೀರಿಗೆ
  6. 7 - 8 ಮೆಂತ್ಯ ಕಾಳು (ಬೇಕಾದಲ್ಲಿ)
  7. ಒಂದು ಚಿಟಿಕೆ ಇಂಗು
  8. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/4 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಮೂಲಂಗಿ ಸಾಂಬಾರ್ ಮಾಡುವ ವಿಧಾನ:

  1. ಮೂಲಂಗಿ ಮತ್ತು ಟೊಮೇಟೊವನ್ನು ತೊಳೆದು ಕತ್ತರಿಸಿ. ಈರುಳ್ಳಿಯನ್ನೂ ಕತ್ತರಿಸಿ.
  2. ಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. 1/2 ಕಪ್ ನೀರು, ಚಿಟಿಕೆ ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ ಎರಡು ವಿಷಲ್ ಮಾಡಿ. ಈ ಹಂತದಲ್ಲಿ ಬೇಳೆ ಅರ್ಧ ಬೆಂದಿರುತ್ತದೆ.
  3. ಈಗ ಅದೇ ಕುಕ್ಕರ್ ಗೆ ಕತ್ತರಿಸಿದ ತರಕಾರಿ, ಸ್ವಲ್ಪ ಉಪ್ಪು ಮತ್ತು 1 ಲೋಟ ನೀರು ಹಾಕಿ ಪುನಃ ಎರಡು ವಿಷಲ್ ಮಾಡಿ. ಈ ಹಂತದಲ್ಲಿ ಬೇಳೆ ತರಕಾರಿಯೊಂದಿಗೆ ಸಂಪೂರ್ಣ ಬೆಂದಿರುತ್ತದೆ.
  4. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಮತ್ತು ಇಂಗನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  5. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ. 
  6. ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. ಉಪ್ಪು, ಬೆಲ್ಲ ಮತ್ತು ಹುಣಿಸೆರಸ ಹಾಕಿ.
  7. ಕೊನೆಯಲ್ಲಿ ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ.
  8. ಕೆಂಪು ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...