Gatti avalakki oggarane recipe in Kannada | ಗಟ್ಟಿ ಅವಲಕ್ಕಿ ಒಗ್ಗರಣೆ ಮಾಡುವ ವಿಧಾನ
ಗಟ್ಟಿ ಅವಲಕ್ಕಿ ಒಗ್ಗರಣೆ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 2 ಕಪ್ ಗಟ್ಟಿ ಅವಲಕ್ಕಿ ಅಥವಾ 3 ಕಪ್ ಮೀಡಿಯಂ ಅವಲಕ್ಕಿ
- 2 ಟೇಬಲ್ ಸ್ಪೂನ್ ಕಡ್ಲೆಕಾಯಿ ಅಥವಾ ಶೇಂಗಾ
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಉದ್ದಿನಬೇಳೆ
- 1 ಟೀಸ್ಪೂನ್ ಕಡ್ಲೆಬೇಳೆ
- 1 ದೊಡ್ಡ ಈರುಳ್ಳಿ
- 1 ದೊಡ್ಡ ಟೊಮ್ಯಾಟೋ
- 1-2 ಹಸಿರು ಮೆಣಸಿನಕಾಯಿ
- 4-5 ಕರಿ ಬೇವಿನ ಎಲೆ
- 1/4 ಟೀಸ್ಪೂನ್ ಅರಶಿನ ಪುಡಿ
- 6-8 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು
- 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1/2 ಕಪ್ ತೆಂಗಿನತುರಿ
ಗಟ್ಟಿ ಅವಲಕ್ಕಿ ಒಗ್ಗರಣೆ ಮಾಡುವ ವಿಧಾನ:
- ಗಟ್ಟಿ ಅಥವಾ ದಪ್ಪ ಅವಲಕ್ಕಿಯನ್ನು ತೊಳೆದು ಹತ್ತು ನಿಮಿಷಗಳ ಕಾಲ ನೀರಲ್ಲಿ ನೆನೆಸಿ. ಮೀಡಿಯಂ ಅವಲಕ್ಕಿ ಆದಲ್ಲಿ ತೊಳೆದು ಕೂಡಲೇ ನೀರು ಬಗ್ಗಿಸಿ, ನೆನೆಸುವುದು ಬೇಡ.
- ಈರುಳ್ಳಿ, ಟೊಮ್ಯಾಟೋ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಯನ್ನು ಕತ್ತರಿಸಿಟ್ಟು ಕೊಳ್ಳಿ. ಬೇರೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಮೊದಲಿಗೆ ಶೇಂಗಾ ಅಥವಾ ಕಡ್ಲೆಕಾಯಿಯನ್ನು ಹುರಿಯಿರಿ.
- ಅದಕ್ಕೆ ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ.
- ಸಾಸಿವೆ ಸಿಡಿದ ಕೂಡಲೇ ಕರಿಬೇವು, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
- ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ.
- ನೆನೆಸಿಟ್ಟ ಅವಲಕ್ಕಿ ಮತ್ತು ಉಪ್ಪು ಹಾಕಿ ಮಗುಚಿ.
- ಒಂದು ಐದು ನಿಮಿಷ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ.
- ನಂತರ ಮುಚ್ಚಳ ತೆಗೆದು ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಬೇಕಾದಲ್ಲಿ ಸ್ವಲ್ಪ ನಿಂಬೆ ರಸವನ್ನು ಸೇರಿಸಬಹುದು. ಸ್ಟವ್ ಆಫ್ ಮಾಡಿ, ಬಡಿಸಿ.
Dhanyavaadagalu, tumba easy aagi explain maadidakke....
ಪ್ರತ್ಯುತ್ತರಅಳಿಸಿDhanyavadagalu..Nimma sahakara heege irali.
ಅಳಿಸಿ