Girmit recipe in Kannada | ಗಿರ್ಮಿಟ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 2 ಕಪ್ ಮಂಡಕ್ಕಿ
- 2 ಟೇಬಲ್ ಚಮಚ ಕಡಲೇಕಾಯಿ ಅಥವಾ ಶೇಂಗಾ
- 2 ಹಸಿರು ಸೀಳಿದ ಹಸಿರು ಮೆಣಸಿನಕಾಯಿ
- 1/2 ಸಣ್ಣದಾಗಿ ಹೆಚ್ಚಿದ ಈರುಳ್ಳಿ
- 1/2 ಸಣ್ಣದಾಗಿ ಹೆಚ್ಚಿದ ಟೊಮೇಟೊ
- 2 ಟೇಬಲ್ ಚಮಚ ಪುಟಾಣಿ ಹಿಟ್ಟು ಅಥವಾ ಹುರಿಗಡಲೆ ಪುಡಿ
- 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 2 ಟೇಬಲ್ ಚಮಚ ಸೇವ್ (ಬೇಕಾದಲ್ಲಿ)
ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
- 1/4 ಟೀಸ್ಪೂನ್ ಸಾಸಿವೆ
- 1/4 ಟೀಸ್ಪೂನ್ ಜೀರಿಗೆ
- 3 - 4 ಕರಿಬೇವಿನ ಎಲೆ
- ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
- 1 - 2 ಕತ್ತರಿಸಿದ ಹಸಿರು ಮೆಣಸಿನಕಾಯಿ
- 3 - 4 ಬೇಳೆ ಬೆಳ್ಳುಳ್ಳಿ
- 1 ಸಣ್ಣದಾಗಿ ಹೆಚ್ಚಿದ ಈರುಳ್ಳಿ
- 1 ಸಣ್ಣದಾಗಿ ಹೆಚ್ಚಿದಟೊಮೇಟೊ
- 1 ಟೀಸ್ಪೂನ್ ಬೆಲ್ಲ ಅಥವಾ ಸಕ್ಕರೆ
- ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- 2 ಟೇಬಲ್ ಚಮಚ ಪುಟಾಣಿ ಹಿಟ್ಟು ಅಥವಾ ಹುರಿಗಡಲೆ ಪುಡಿ
- 2 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಗಿರ್ಮಿಟ್ ಮಾಡುವ ವಿಧಾನ:
- 1/2 ಕಪ್ ನಷ್ಟು ಹುರಿಗಡಲೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಿ.
- ಗೊಜ್ಜಿಗೆ ಬೇಕಾದ ಈರುಳ್ಳಿ, ಟೊಮೇಟೊ ಮತ್ತು ಹಸಿರುಮೆಣಸಿನಕಾಯಿಯನ್ನು ಹೆಚ್ಚಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಕಡಲೇಕಾಯಿ ಅಥವಾ ಶೇಂಗಾವನ್ನು ಹುರಿದು ತೆಗೆದಿಟ್ಟುಕೊಳ್ಳಿ.
- ನಂತರ ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ 2 ಸೀಳಿದ ಹಸಿರು ಮೆಣಸಿನಕಾಯಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ.
- ನಂತರ ಅದೇ ಬಾಣಲೆಯಲ್ಲಿ, ಗೊಜ್ಜು ಮಾಡಲು, ಸಾಸಿವೆ, ಜೀರಿಗೆ, ಕರಿಬೇವಿನ ಎಲೆ ಮತ್ತು ಅರಿಶಿನ ಪುಡಿ ಸೇರಿಸಿ ಒಗ್ಗರಣೆ ಮಾಡಿ.
- ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಬಾಡಿಸಿ.
- ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಿ.
- ಹುಣಿಸೆಹಣ್ಣಿನ ರಸ ಸೇರಿಸಿ, ಟೊಮೇಟೊ ಮುದ್ದೆ ಆಗುವವರೆಗೆ ಬೇಯಿಸಿ.
- ಕೊನೆಯಲ್ಲಿ ಉಪ್ಪು, ಬೆಲ್ಲ ಮತ್ತು 2 ಟೇಬಲ್ ಚಮಚ ಹುರಿಗಡಲೆ ಪುಡಿ (ಪುಟಾಣಿ) ಸೇರಿಸಿ. ಮಗುಚಿ ಸ್ಟವ್ ಆಫ್ ಮಾಡಿ.
- ತಣ್ಣಗಾದ ನಂತರ ಒಂದು ಪ್ಲೇಟ್ ಗಿರ್ಮಿಟ್ ಮಾಡಲು, ಒಂದು ಪಾತ್ರೆಯಲ್ಲಿ ೧ ಕಪ್ ನಷ್ಟು ಮಂಡಕ್ಕಿ ತೆಗೆದುಕೊಳ್ಳಿ.
- ಅದಕ್ಕೆ ೨ ಟೇಬಲ್ ಚಮಚದಷ್ಟು ಗೊಜ್ಜು ಸೇರಿಸಿ ಕಲಸಿ.
- ೧ ಟೇಬಲ್ ಚಮಚದಷ್ಟು ಹುರಿಗಡಲೆ ಪುಡಿ ಸೇರಿಸಿ ಕಲಸಿ.
- ಪ್ಲೇಟ್ ಗೆ ಹಾಕಿ. ಮೇಲಿನಿಂದ ಈರುಳ್ಳಿ, ಟೊಮೇಟೊ, ಕೊತ್ತಂಬರಿ ಸೊಪ್ಪು ಮತ್ತು ಸೇವ್ ಅಥವಾ ಖಾರ ಶೇವ್ ಹಾಕಿ. ಕೂಡಲೇ ಸವಿಯಿರಿ.
Nice to read recipe in Kannada.
ಪ್ರತ್ಯುತ್ತರಅಳಿಸಿI follow vegrececipe site a lot.