Banana milkshake recipe in Kannada | ಬಾಳೆಹಣ್ಣು ಮಿಲ್ಕ್ ಶೇಕ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 4 ಸಣ್ಣ ಅಥವಾ 2 ದೊಡ್ಡ ಚೆನ್ನಾಗಿ ಕಳಿತ ಬಾಳೆಹಣ್ಣು
- 4 ಟೀಸ್ಪೂನ್ ಸಕ್ಕರೆ
- 2 ಟೀಸ್ಪೂನ್ ಗೋಡಂಬಿ
- 2 ಟೀಸ್ಪೂನ್ ನೆಲಗಡಲೆ ಅಥವಾ ಶೇಂಗಾ
- 2 ಟೀಸ್ಪೂನ್ ಹಾರ್ಲಿಕ್ಸ್ ಅಥವಾ ಇನ್ನಾವುದೇ ಪುಡಿ
- 1 ಕಪ್ ಕುದಿಸಿ ಆರಿಸಿದ ಹಾಲು
ಬಾಳೆಹಣ್ಣು ಮಿಲ್ಕ್ ಶೇಕ್ ಮಾಡುವ ವಿಧಾನ:
- ಕುದಿಸಿ ಆರಿಸಿದ ಹಾಲನ್ನು ಫ್ರೀಜರ್ ನಲ್ಲಿ ಗಟ್ಟಿ ಆಗಲು ಇಡಿ. ನೆಲಗಡಲೆಯನ್ನು ಹುರಿದು ಸಿಪ್ಪೆ ತೆಗೆಯಿರಿ.
- ಮಿಕ್ಸಿ ಜಾರಿಗೆ ಸಿಪ್ಪೆ ಸುಲಿದ ಬಾಳೆಹಣ್ಣು, ಸಕ್ಕರೆ, ಗೋಡಂಬಿ, ಹುರಿದು ಸಿಪ್ಪೆ ತೆಗೆದ ನೆಲಗಡಲೆ, ಹಾರ್ಲಿಕ್ಸ್ ಮತ್ತು ಫ್ರೀಜರ್ ನಲ್ಲಿಟ್ಟು ಗಟ್ಟಿ ಮಾಡಿದ ಹಾಲು ಹಾಕಿ ನುಣ್ಣನೆ ಅರೆಯಿರಿ.
- ರುಚಿ ರುಚಿಯಾದ ಬಾಳೆಹಣ್ಣಿನ ಮಿಲ್ಕ್ ಶೇಕ್ ಕುಡಿದು ಆನಂದಿಸಿ. ಈ ಮಿಲ್ಕ್ ಶೇಕ್ ನ್ನುಮಾಡಿದ ಕೂಡಲೇ ಸವಿಯಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ