Eeradye or arishina ele kadubu | ಈರಡ್ಯೆ ಅಥವಾ ಅರಿಶಿನ ಎಲೆ ಕಡುಬು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ ಹಿಟ್ಟು
- 1 ಕಪ್ ತೆಂಗಿನ ತುರಿ
- 1/2 ಕಪ್ ಬೆಲ್ಲ
- 1.5 - 2 ಕಪ್ ನೀರು (ಅಕ್ಕಿ ಹಿಟ್ಟಿನ ಗುಣಮಟ್ಟ ಅವಲಂಬಿಸಿ)
- ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
- 2 ಟೀಸ್ಪೂನ್ ತುಪ್ಪ
- ಉಪ್ಪು ರುಚಿಗೆ ತಕ್ಕಷ್ಟು
- ಅರಿಶಿನ ಎಲೆಗಳು
ಈರಡ್ಯೆ ಅಥವಾ ಅರಿಶಿನ ಎಲೆ ಕಡುಬು ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ ನೀರು, 1/2 ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ.
- ನೀರು ಕುದಿಯಲು ಪ್ರಾರಂಭಿಸಿದ ನಂತರ ಅಕ್ಕಿ ಹಿಟ್ಟನ್ನು ಹಾಕಿ, ಒಮ್ಮೆ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ.
- ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ.
- ತೆಂಗಿನ ತುರಿ, ಬೆಲ್ಲ ಮತ್ತು ಏಲಕ್ಕಿಯನ್ನು ಒಂದು ಬಾಣಲೆಗೆ ಹಾಕಿ ಬಿಸಿ ಮಾಡಿ ಹೂರಣ ಸಿದ್ಧ ಮಾಡಿಕೊಳ್ಳಿ.
- ಇಷ್ಟು ಹೊತ್ತಿಗೆ ಅಕ್ಕಿ ಹಿಟ್ಟು ಬಿಸಿ ಆರಿರುತ್ತದೆ. ಆ ಹಿಟ್ಟನ್ನು ಚೆನ್ನಾಗಿ ನಾದಿ. ಹಿಟ್ಟು ಮೃದುವಾಗಿರಬೇಕು.
- ಒಂದು ಲಿಂಬೆ ಗಾತ್ರದ ಹಿಟ್ಟು ತೆಗೆದು ಕೊಂಡು, ಸ್ವಚ್ಛ ಮಾಡಿದ ಅರಿಶಿನದ ಎಲೆ ಮೇಲೆ ತಟ್ಟಿ. ಕೈ ಬೆರಳುಗಳಿಗೆ ತುಪ್ಪ ಸವರಿಕೊಳ್ಳಿ.
- ಮಧ್ಯದಲ್ಲಿ ಹೂರಣ ಇಟ್ಟು, ಮಡಿಸಿ, ಅಂಚುಗಳನ್ನು ಒತ್ತಿ ಅಂಟಿಸಿ.
- ಸೆಕೆಯಲ್ಲಿ (ಆವಿಯಲ್ಲಿ) 10 - 12 ನಿಮಿಷ ಬೇಯಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ