Ragi laddu or ragi unde recipe | ರಾಗಿ ಲಾಡು ಮಾಡುವ ವಿಧಾನ
ragi unde or ladoo video Kannada
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ರಾಗಿ ಹಿಟ್ಟು
- 1/4 ಕಪ್ ಕೊಬ್ಬರಿ ತುರಿ
- 3/4 ಕಪ್ ಬೆಲ್ಲ ಪುಡಿ ಮಾಡಿದ್ದು
- 1/4 ಕಪ್ ನೀರು
- 2 ಟೇಬಲ್ ಚಮಚ ತುಪ್ಪ
- 2 ಟೇಬಲ್ ಚಮಚ ಗೋಡಂಬಿ ಚೂರು
- ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ರಾಗಿ ಲಾಡು ಮಾಡುವ ವಿಧಾನ:
- ಒಂದು ಬಾಣಲೆಯಲ್ಲಿ 1 ಟೇಬಲ್ ಚಮಚ ತುಪ್ಪ ಬಿಸಿ ಮಾಡಿ, ಗೋಡಂಬಿಯನ್ನು ಹುರಿದು ಪಕ್ಕಕ್ಕಿಡಿ.
- ನಂತರ ಅದೇ ಬಾಣಲೆಗೆ ಇನ್ನೊಂದು ಟೇಬಲ್ ಚಮಚ ತುಪ್ಪ ಮತ್ತು ರಾಗಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಬಣ್ಣ ಬದಲಾವಣೆ ಅಥವಾ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿಯಿರಿ. ಸುಮಾರು ಹತ್ತು ನಿಮಿಷ ಬೇಕಾಗುತ್ತದೆ.
- ನಂತರ ಕೊಬ್ಬರಿ ತುರಿಯನ್ನು ಸೇರಿಸಿ ಇನ್ನೊಂದು ನಿಮಿಷ ಹುರಿದು, ಗೋಡಂಬಿಯೊಂದಿಗೆ ಪಕ್ಕಕ್ಕಿಡಿ.
- ಒಂದು ದಪ್ಪ ತಳದ ಬಾಣಲೆಗೆ ಬೆಲ್ಲ ಮತ್ತು ನೀರನ್ನು ಹಾಕಿ ಕುದಿಸಿ. ಒಂದೆಳೆ ಪಾಕ ಮಾಡಿ. ಏಲಕ್ಕಿ ಪುಡಿಯನ್ನೂ ಸೇರಿಸಿ. ಗಮನಿಸಿ ಪಾಕ ಹೆಚ್ಚಾಗ ಬಾರದು. ಒಂದೆಳೆ ಪಾಕ ಬಂದ ಕೂಡಲೇ ಸ್ಟವ್ ಆಫ್ ಮಾಡಿ.
- ಕೂಡಲೇ ಬೆಲ್ಲದ ಪಾಕವನ್ನು ಹುರಿದ ರಾಗಿ ಹಿಟ್ಟು, ಕೊಬ್ಬರಿ ತುರಿ ಮತ್ತು ಗೋಡಂಬಿ ಮಿಶ್ರಣದ ಮೇಲೆ ಸುರಿಯಿರಿ.
- ಸ್ವಲ್ಪ ಬಿಸಿ ಆರಿದ ಮೇಲೆ ಉಂಡೆಗಳನ್ನು ಮಾಡಿ ಸವಿಯಿರಿ. ಈ ಉಂಡೆ ಅಥವಾ ರಾಗಿ ಲಾಡು ಬಿಸಿಯಲ್ಲಿ ಸ್ವಲ್ಪ ಮೆತ್ತಗಿದ್ದು, ಬಿಸಿ ಆರಿದ ಮೇಲೆ ಗಟ್ಟಿಯಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ