Ellu bella recipe in Kannada | ಎಳ್ಳು ಬೆಲ್ಲ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 250gm ಶೇಂಗಾ ಅಥವಾ ಕಡ್ಲೆಕಾಯಿ
- 250gm ಹುರಿಗಡಲೆ ಅಥವಾ ಕಡಲೆಪಪ್ಪು
- 1 ಒಣ ಕೊಬ್ಬರಿ
- 100gm ಬಿಳಿ ಎಳ್ಳು
- 250gm ಅಚ್ಚು ಬೆಲ್ಲ
- 1/4 ಕಪ್ ಜೀರಿಗೆ ಮಿಠಾಯಿ (ಬೇಕಾದಲ್ಲಿ)
- 1/4 ಕಪ್ ಸಣ್ಣ ಸಕ್ಕರೆ ಮಿಠಾಯಿ (ಬೇಕಾದಲ್ಲಿ)
ಎಳ್ಳು ಬೆಲ್ಲ ಮಾಡುವ ವಿಧಾನ:
- ಒಣ ಕೊಬ್ಬರಿಯನ್ನು ಸಣ್ಣದಾಗಿ ಹೆಚ್ಚಿ. ತುರಿಮಣೆ ಸಹಾಯದಿಂದ ಕೊಬ್ಬರಿಯ ಕಪ್ಪುಭಾಗವನ್ನು ತುರಿದು ತೆಗೆದು ನಂತರ ಹೆಚ್ಚಬಹುದು. ನಮ್ಮ ಮನೆಯಲ್ಲಿ ಕಪ್ಪು ಭಾಗವನ್ನು ತೆಗೆಯುವುದಿಲ್ಲ. ಹೆಚ್ಚಿದ ಕೊಬ್ಬರಿಯನ್ನು ಬಿಸಿಲಿನಲ್ಲಿ ಗರಿಗರಿಯಾಗುವರೆಗೆ ಒಣಗಿಸಿ ಅಥವಾ ತಪ್ಪ ತಳದ ಬಾಣಲೆಯಲ್ಲಿ ಬಿಸಿ ಮಾಡಿ.
- ಹುರಿಗಡಲೆಯನ್ನು ಬಿಸಿಲಿನಲ್ಲಿ ಗರಿಗರಿಯಾಗುವರೆಗೆ ಒಣಗಿಸಿ ಅಥವಾ ತಪ್ಪ ತಳದ ಬಾಣಲೆಯಲ್ಲಿ ಬಿಸಿ ಮಾಡಿ.
- ಕಡ್ಲೆಕಾಯಿ ಅಥವಾ ನೆಲಗಡಲೆಯನ್ನು ಸ್ವಲ್ಪ ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಹುರಿದು ಪಕ್ಕಕ್ಕಿಡಿ. ತಣ್ಣಗಾದ ನಂತರ ಸಿಪ್ಪೆ ಬೇರ್ಪಡಿಸಿ.
- ಎಳ್ಳನ್ನು ಉಬ್ಬುವವರೆಗೆ ಹುರಿದು ಪಕ್ಕಕ್ಕಿಡಿ. ಸಿಡಿಯುವವರೆಗೆ ಕಾಯುವುದು ಬೇಡ.
- ಅಚ್ಚು ಬೆಲ್ಲವನ್ನು ದೋಸೆ ಸಟ್ಟುಗ ಅಥವಾ ಚಾಕು ಅಥವಾ ದೊಡ್ಡ ಕತ್ತರಿ ಅಥವಾ ಅಡಕತ್ತರಿಯ ಸಹಾಯದಿಂದ ಸಣ್ಣ ಚೂರುಗಳಾಗಿ ಕತ್ತರಿಸಿ.
- ಕೊನೆಯಲ್ಲಿ ಎಲ್ಲ ಪದಾರ್ಥಗಳನ್ನು ಸೇರಿಸಿ, ಕಲಸಿ.
- ಬೇಕಾದಲ್ಲಿ ಜೀರಿಗೆ ಮಿಠಾಯಿ ಮತ್ತು ಸಕ್ಕರೆ ಮಿಠಾಯಿಯನ್ನು ಸೇರಿಸಿ.
- ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಹಂಚಿ, ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ