Tomato dosa recipe in Kannada | ಟೊಮೇಟೊ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಅಕ್ಕಿ (ದೋಸೆ ಅಕ್ಕಿ ಆಥವಾ ಸೋನಾ ಮಸೂರಿ)
- 2 ದೊಡ್ಡ ಟೊಮೇಟೊ
- 2 ಟೇಬಲ್ ಚಮಚ ತೊಗರಿಬೇಳೆ
- 1 ಟೀಸ್ಪೂನ್ ಕೊತ್ತಂಬರಿ ಬೀಜ ಅಥವಾ ಧನಿಯಾ
- 1/2 ಟೀಸ್ಪೂನ್ ಜೀರಿಗೆ
- 1 - 2 ಕೆಂಪು ಮೆಣಸಿನಕಾಯಿ
- 1cm ಗಾತ್ರದ ಶುಂಠಿ
- 7 - 8 ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ
- 2 ಟೇಬಲ್ ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
ಟೊಮೇಟೊ ದೋಸೆ ಮಾಡುವ ವಿಧಾನ:
- ಅಕ್ಕಿ ಮತ್ತು ತೊಗರಿಬೇಳೆಯನ್ನು ತೊಳೆದು ಕನಿಷ್ಠ 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ರಾತ್ರೆಯಿಡೀ ಬೇಕಾದರೂ ನೆನೆಸಬಹುದು.
- ನಂತರ ನೀರನ್ನು ಬಗ್ಗಿಸಿ, ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. ಒಂದು ಪಾತ್ರೆಗೆ ಬಗ್ಗಿಸಿ.
- ನಂತರ ಕತ್ತರಿಸಿದ ಟೊಮೇಟೊ, ಕೊತ್ತಂಬರಿ ಬೀಜ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ಶುಂಠಿಯನ್ನು ಮಿಕ್ಸರ್ ಗ್ರೈಂಡರ್ ನಲ್ಲಿ ಅರೆಯಿರಿ.
- ಅಕ್ಕಿ ಹಿಟ್ಟು ಇರುವ ಪಾತ್ರೆಗೆ ಹಾಕಿ.
- ಈಗ ರುಚಿಗೆ ತಕ್ಕಷ್ಟು ಉಪ್ಪು, ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
- ಚೆನ್ನಾಗಿ ಕಲಸಿ ಉದ್ದಿನ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳುವಾದ ಹಿಟ್ಟನ್ನು ತಯಾರಿಸಿ. ಸಮಯವಿದ್ದರೆ ಒಂದು 30 ನಿಮಿಷ ಹಿಟ್ಟನ್ನು ಹಾಗೆ ಬಿಡಿ.
- ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ ಬಿಸಿ ಮಾಡಿ. ಕಬ್ಬಿಣದ ದೋಸೆ ಕಾವಲಿಯಾದಲ್ಲಿ ಎಣ್ಣೆ ಹಚ್ಚಿ. ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿದು ದೋಸೆ ಮಾಡಿ.
- ಸ್ವಲ್ಪ ಹೊತ್ತು ಮುಚ್ಚಳವನ್ನು ಮುಚ್ಚಿ.
- ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ ಎರಡು ಬದಿ ಕಾಯಿಸಿ. ಬೆಣ್ಣೆ ಮತ್ತು ಕಾಯಿ ಚಟ್ನಿ ಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ