Vangi bath powder recipe in kannada | ವಾಂಗಿ ಬಾತ್ ಪುಡಿ ಮಾಡುವ ವಿಧಾನ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 1 ಕಪ್
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 15 - 20 ಒಣ ಮೆಣಸಿನಕಾಯಿ (ಮಧ್ಯಮ ಖಾರ)
- 1/4 ಕಪ್ ಕಡಲೆಬೇಳೆ
- 1/4 ಕಪ್ ಉದ್ದಿನ ಬೇಳೆ
- 1/4 ಕಪ್ ಕೊತ್ತಂಬರಿ ಬೀಜ
- 1/2 - 1 ಕಪ್ ಒಣ ಕೊಬ್ಬರಿ ತುರಿದಿದ್ದು
- 4 - 5 1 " ಉದ್ದದ ದಾಲ್ಚಿನ್ನಿ ಅಥವಾ ಚಕ್ಕೆ
- 8 - 10 ಲವಂಗ
- 1 ಮರಾಟಿ ಮೊಗ್ಗು
- 1 ಏಲಕ್ಕಿ (ಬೇಕಾದಲ್ಲಿ)
- 2 ಟೀಸ್ಪೂನ್ ಗಸಗಸೆ ಬೀಜಗಳು (ಬೇಕಾದಲ್ಲಿ)
- 1/2 ಟೀಸ್ಪೂನ್ ಅಡುಗೆ ಎಣ್ಣೆ
ವಾಂಗಿ ಬಾತ್ ಪುಡಿ ಮಾಡುವ ವಿಧಾನ:
- ಒಂದು ಬಾಣಲೆಯನ್ನು ಬಿಸಿ ಮಾಡಿ. 1/2 ಚಮಚ ಅಡುಗೆ ಎಣ್ಣೆ ಹಾಕಿ ಒಣ ಮೆಣಸಿನಕಾಯಿಗಳನ್ನು ಹುರಿದು ತೆಗೆದಿಡಿ.
- ನಂತರ ಕಡಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
- ನಂತರ ಉದ್ದಿನ ಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
- ನಂತರ ಕೊತ್ತುಂಬರಿ ಬೀಜವನ್ನು ಘಮ್ಮನೆ ಸುವಾಸನೆ ಬರುವವರೆಗೆ ಹುರಿಯಿರಿ.
- ಕೂಡಲೇ ಅದಕ್ಕೆ ದಾಲ್ಚಿನ್ನಿ (ಚಕ್ಕೆ), ಲವಂಗ, ಏಲಕ್ಕಿ, ಮರಾಟಿ ಮೊಗ್ಗು ಮತ್ತು ಗಸಗಸೆ ಬೀಜಗಳನ್ನು ಸೇರಿಸಿ ಕೆಲವು ಸೆಕೆಂಡ್ಗಳ ಕಾಲ ಹುರಿಯಿರಿ.
- ಹಾಗು ಹುರಿದಿಟ್ಟ ಎಲ್ಲ ಪದಾರ್ಥಗಳನ್ನು ಸೇರಿಸಿ. ಮತ್ತೊಮ್ಮೆ ಕೆಲವು ಸೆಕೆಂಡುಗಳ ಕಾಲ ಹುರಿದು ತೆಗೆದಿಡಿ.
- ನಂತರ ಕೊಬ್ಬರಿಯನ್ನು ಕೆಲವು ಸೆಕೆಂಡುಗಳ ಕಾಲ ಹುರಿದು ತೆಗೆದಿಡಿ.
- ಹುರಿದ ಪದಾರ್ಥಗಳು ತಣ್ಣಗೆ ಆದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ