Rave or sajjige rotti recipe in Kannada | ರವೆ ಅಥವಾ ಸಜ್ಜಿಗೆ ರೊಟ್ಟಿ ಮಾಡುವ ವಿಧಾನ
ರವೆ ಅಥವಾ ಸಜ್ಜಿಗೆ ರೊಟ್ಟಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಈ ರೀತಿಯ ರವೆ ರೊಟ್ಟಿಯನ್ನು ಮಂಗಳೂರು ಪ್ರದೇಶದಲ್ಲಿ ತಯಾರಿಸಲಾಗುತ್ತದೆ. ಅಲ್ಲಿ ರವೆಯನ್ನು ಸಜ್ಜಿಗೆ ಎಂದೂ, ತವಾದ ಮೇಲೆ ಹರಡಿ ಮಾಡುವ ತಿಂಡಿಯನ್ನು ರೊಟ್ಟಿಯೆಂದು ಕರೆಯುವ ಕಾರಣ ಈ ತಿಂಡಿಯನ್ನು ಸಜ್ಜಿಗೆ ರೊಟ್ಟಿ ಎಂದು ಕರೆಯುತ್ತಾರೆ. ಈ ಅಡುಗೆಯ ವೀಡಿಯೊ ಮಾಡಿದ್ದೇನೆ. ನೋಡಿ ಆನಂದಿಸಿ.ತಯಾರಿ ಸಮಯ: 30 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ : 3 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1.5 ಕಪ್ ಸಣ್ಣ ರವೆ / ಸಜ್ಜಿಗೆ
- 0.5 ಕಪ್ ಮೊಸರು (ಸ್ವಲ್ಪ ಹುಳಿ ಇದ್ದರೆ ಒಳ್ಳೆಯದು )
- 1 ಟೀಸ್ಪೂನ್ ಮೈದಾ ಹಿಟ್ಟು
- 1.5 ಟೀಸ್ಪೂನ್ ಅಕ್ಕಿ ಹಿಟ್ಟು
- 1.5 ಕಪ್ ನೀರು
- 2 ಟೇಬಲ್ ಚಮಚ ತೆಂಗಿನ ತುರಿ
- 1 - 2 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ
- 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 0.25 ಟೀಸ್ಪೂನ್ ಇಂಗು
- 1/4 ಟೀಸ್ಪೂನ್ ಅರಿಶಿನ ಪುಡಿ ( ಬೇಕಾದಲ್ಲಿ - ನಾನು ಬಳಸಲಿಲ್ಲ)
- ಸಾಸಿವೆ ಮತ್ತು ಮಜ್ಜಿಗೆ ಮೆಣಸಿನ ಒಗ್ಗರಣೆ (ಬೇಕಾದಲ್ಲಿ- ನಾನು ಬಳಸಲಿಲ್ಲ)
- ತೆಂಗಿನ ಎಣ್ಣೆ / ತುಪ್ಪ ( ದೋಸೆ ಮಾಡುವ ಸಂದರ್ಭದಲ್ಲಿ ಬಳಸಲು)
- ಉಪ್ಪು ರುಚಿಗೆ ತಕ್ಕಷ್ಟು
ರವೆ ಅಥವಾ ಸಜ್ಜಿಗೆ ರೊಟ್ಟಿ ಮಾಡುವ ವಿಧಾನ:
- ದೊಡ್ಡ ಬಟ್ಟಲಿನಲ್ಲಿ ರವೆ, ಮೈದಾ ಮತ್ತು ಅಕ್ಕಿ ಹಿಟ್ಟು ತೆಗೆದುಕೊಳ್ಳಿ.
- ಮೊಸರು ಮತ್ತು ನೀರು ಸೇರಿಸಿ.
- ಚೆನ್ನಾಗಿ ಕಲಸಿ, 15 - 20 ನಿಮಿಷ ನೆನೆಯಲು ಬಿಡಿ.
- ನಂತರ ತುರಿದ ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು , ಉಪ್ಪು, ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಇಂಗು ಸೇರಿಸಿ.
- ಚೆನ್ನಾಗಿ ಕಲಸಿ. ಹಿಟ್ಟು ದಪ ದಪನೆ ಬೀಳುವಂತೆ ಇರಬೇಕು. ಬೇಕಾದಲ್ಲಿ ನೀರು ಸೇರಿಸಿ.
- ದೋಸೆ ಕಲ್ಲು ಅಥವಾ ನಾನ್-ಸ್ಟಿಕ್ ತವ ಬಿಸಿ ಮಾಡಿ. ಬಿಸಿ ಪ್ಯಾನ್ ಮೇಲೆ ಒಂದು ಸೌಟು ಹಿಟ್ಟು ಸುರಿದು ವೃತ್ತಾಕಾರವಾಗಿ ಕೈಗಳಿಂದ ಹರಡಿ. ಈ ಹಂತದಲ್ಲಿ ಸ್ವಲ್ಪ ಶೀಘ್ರವಾಗಿರಲು ಮರೆಯದಿರಿ.
- ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
- ಎರಡೂ ಬದಿ ಕಾಯಿಸಿ. ತೆಂಗಿನ ಚಟ್ನಿ ಮತ್ತು ಬೆಣ್ಣೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ