Davanagere benne dose in kannada | ದಾವಣಗೆರೆ ಬೆಣ್ಣೆ ದೋಸೆ ಮಾಡುವ ವಿಧಾನ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 2 ಕಪ್ ದೋಸೆ ಅಕ್ಕಿ
- 1/2 ಕಪ್ ಉದ್ದಿನ ಬೇಳೆ
- 2 - 3 ಕಪ್ ಮಂಡಕ್ಕಿ
- 1 ಟೀಸ್ಪೂನ್ ಮೆಂತ್ಯ
- 2 ಟೀಸ್ಪೂನ್ ಮೈದಾ ಹಿಟ್ಟು
- 1 ಟೀಸ್ಪೂನ್ ಸಕ್ಕರೆ
- 1/4 ಟೀಸ್ಪೂನ್ ಅಡುಗೆ ಸೋಡಾ
- 1/4 ಕಪ್ ಬೆಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ದಾವಣಗೆರೆ ಬೆಣ್ಣೆ ದೋಸೆ ಮಾಡುವ ವಿಧಾನ:
- ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು ಒಳ್ಳೆಯ ಕುಡಿಯುವ ನೀರಿನಲ್ಲಿ 5-6 ಗಂಟೆಗಳ ಕಾಲ ನೆನೆಯಲು ಬಿಡಿ.
- ಮಂಡಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿ.
- ಈಗ ಮಿಕ್ಸಿ ಜಾರ್ ಗೆ, ನೆನೆಸಿ ನೀರು ಬಗ್ಗಿಸಿದ ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ರುಬ್ಬಿರಿ. ನಯವಾದ ದೋಸೆ ಹಿಟ್ಟು ತಯಾರಾಗುವವರೆಗೆ ರುಬ್ಬಿ, ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಬಗ್ಗಿಸಿ.
- ನಂತರ ನೆನೆಸಿದ ಮಂಡಕ್ಕಿಯನ್ನು ಅರೆದು ಅದೇ ಪಾತ್ರೆಗೆ ಸೇರಿಸಿ. ಚಳಿ ಪ್ರದೇಶವಾದಲ್ಲಿ ಮೈದಾ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕಲಸಿ ಹಿಟ್ಟು ಹುದುಗುವ ಮೊದಲೇ ಸೇರಿಸಿ.
- ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, ಹಿಟ್ಟು ಹುದುಗಲು 7-8 ಘಂಟೆ ಕಾಲ ಬಿಡಿ.
- 7-8 ಘಂಟೆಯ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
- ಒಂದು ಸಣ್ಣ ಬಟ್ಟಲಿನಲ್ಲಿ ಸೋಡಾ, ಸಕ್ಕರೆ ಮತ್ತು ಮೈದಾ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕಲಸಿ ಸೇರಿಸಿ. ಚೆನ್ನಾಗಿ ಕಲಸಿ . ದಾವಣಗೆರೆ ಬೆಣ್ಣೆ ದೋಸೆಯ ಹಿಟ್ಟು ತಯಾರಾಯಿತು.
- ದೋಸೆ ಹೆಂಚನ್ನು ಬಿಸಿಮಾಡಿ ಕೊಳ್ಳಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ. ಹೆಚ್ಚು ಹರಡ ಬೇಡಿ. ಹಾಗು ಮುಚ್ಚಳ ಮುಚ್ಚ ಬೇಕಾಗಿಲ್ಲ.
- 5 ಸೆಕೆಂಡುಗಳ ನಂತರ ಸಣ್ಣ ಸಣ್ಣ ಬೆಣ್ಣೆಯ ತುಣುಕುಗಳನ್ನು ದೋಸೆಯ ಮೇಲೆ ಅಲ್ಲಲ್ಲಿ ಧಾರಾಳವಾಗಿ ಹಾಕಿ.
- ದೋಸೆಯ ಅಂಚು ಹೊಂಬಣ್ಣಕ್ಕೆ ತಿರುಗಿದ ಕೂಡಲೇ ದೋಸೆಯನ್ನು ತೆಗೆಯಿರಿ. ಬೇಕಾದಲ್ಲಿ ಇನ್ನೊಂದು ಬದಿ ಒಂದೈದು ಸೆಕೆಂಡ್ ಗಳ ಕಾಲ ಬೇಯಿಸಿ.
ತುಂಬಾ ಚೆನ್ನಾಗಿದೆ... ಪಲ್ಯದ ರೆಸಪಿ ಹಾಕಿ ಪ್ಲೀಸ್
ಪ್ರತ್ಯುತ್ತರಅಳಿಸಿ