Alugadde palya for davangere benne dose in Kannada | ದಾವಣಗೆರೆ ಬೆಣ್ಣೆ ದೋಸೆಯ ಆಲೂಗಡ್ಡೆ ಪಲ್ಯ
ತಯಾರಿ ಸಮಯ: 20 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ: 4 ಜನರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 2 ಆಲೂಗಡ್ಡೆ
- 1 ಈರುಳ್ಳಿ
- 1 - 2 ಹಸಿರು ಮೆಣಸಿನಕಾಯಿ
- 4 - 5 ಕರಿಬೇವಿನ ಎಲೆ
- 4 ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ದಾವಣಗೆರೆ ಬೆಣ್ಣೆ ದೋಸೆಯ ಆಲೂಗಡ್ಡೆ ಪಲ್ಯ ಮಾಡುವ ವಿಧಾನ:
- ಆಲೂಗಡ್ಡೆಯನ್ನು ತೊಳೆದು, ಬೇಯಿಸಿ, ಸಿಪ್ಪೆ ತೆಗೆದು ಪುಡಿ ಮಾಡಿಟ್ಟು ಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಹುರಿಯಿರಿ.
- ನಂತರ ಪುಡಿ ಮಾಡಿದ ಆಲೂಗಡ್ಡೆ ಹಾಕಿ, ಉಪ್ಪು ಹಾಕಿ ಕಲಸಿ. ಬೆಣ್ಣೆ ದೋಸೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ