Mango ice candy in Kannada | ಮಾವಿನ ಹಣ್ಣಿನ ಐಸ್ ಕ್ಯಾಂಡಿ ಮಾಡುವ ವಿಧಾನ
ತಯಾರಿ ಸಮಯ: 10 ನಿಮಿಷ
ಶೀಥಲಿಕರಣ ಸಮಯ : 2 - 3 ಘಂಟೆ
ಪ್ರಮಾಣ : 4 ಜನರಿಗೆ
ಶೀಥಲಿಕರಣ ಸಮಯ : 2 - 3 ಘಂಟೆ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಕತ್ತರಿಸಿದ ಮಾವಿನ ಹಣ್ಣು
- 1/4 ಕಪ್ ಕುದಿಸಿ ತಂಪು ಮಾಡಿದ ಹಾಲು
- 1/4 ಕಪ್ ತಂಪು ಮಾಡಿದ ನೀರು
- 10 ಚಮಚ ಸಕ್ಕರೆ (ಅಥವಾ ರುಚಿಗೆ ತಕ್ಕಷ್ಟು)
- ಐಸ್ ಕ್ಯಾಂಡಿ ಅಚ್ಚು ಅಥವಾ ಲೋಟ
ಮಾವಿನ ಹಣ್ಣಿನ ಐಸ್ ಕ್ಯಾಂಡಿ ಮಾಡುವ ವಿಧಾನ:
- ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ.
- ಮಿಕ್ಸಿ ಜಾರಿಗೆ ಕತ್ತರಿಸಿದ ಮಾವಿನ ಹಣ್ಣು, ಹಾಲು, ನೀರು ಮತ್ತು ಸಕ್ಕರೆ ಹಾಕಿ ನುಣ್ಣಗೆ ಅರೆಯಿರಿ.
- ಅರೆದ ಮಿಶ್ರಣವನ್ನು ಐಸ್ ಕ್ಯಾಂಡಿ ಅಚ್ಚಿಗೆ ಹಾಕಿ ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ.
- ಐಸ್ ಕ್ಯಾಂಡಿ ಅಚ್ಚು ಇಲ್ಲದಿದ್ದಲ್ಲಿ ಸಣ್ಣ ಪೇಪರ್ ಕಪ್ ಅಥವಾ ಸ್ಟೀಲ್ ಲೋಟಕ್ಕೆ ಹಾಕಿ, ಐಸ್ ಕ್ಯಾಂಡಿ ಕಡ್ಡಿಯನ್ನು ಇಟ್ಟು, ನಂತರ ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ.
- ಗಟ್ಟಿಯಾದ ನಂತರ, ಅಚ್ಚು ಅಥವಾ ಲೋಟವನ್ನು ಕೆಲವು ಸೆಕೆಂಡ್ ಗಳ ಕಾಲ ನೀರಿನಲ್ಲಿಡಿ ಅಥವಾ ನಲ್ಲಿ(ಟ್ಯಾಪ್) ನೀರಿನಡಿ ಹಿಡಿಯಿರಿ. ಆಮೇಲೆ ಐಸ್ ಕ್ಯಾಂಡಿಯನ್ನು ಜಾಗ್ರತೆಯಿಂದ ಹೊರ ತೆಗೆದು ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ