Alasande kalu saaru recipe | ಅಲಸಂದೆ ಕಾಳು ಸಾರು ಮಾಡುವ ವಿಧಾನ
ತಯಾರಿ ಸಮಯ: 7 - 8 ಘಂಟೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅಲಸಂದೆ ಕಾಳು / ಹೆಸರು ಕಾಳು / ಅವಡೆ ಕಾಳು
- 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 4 - 6 ಕೆಂಪು ಮೆಣಸಿನಕಾಯಿ
- 10 ಎಸಳು ಬೆಳ್ಳುಳ್ಳಿ
- 4 - 5 ಕರಿಬೇವಿನ ಎಲೆ
- 6 ಚಮಚ ಅಡುಗೆ ಎಣ್ಣೆ
ಅಲಸಂದೆ ಕಾಳು ಸಾರು ಮಾಡುವ ವಿಧಾನ:
- ಅಲಸಂದೆ ಕಾಳನ್ನು 7 - 8 ಘಂಟೆಗಳ ಕಾಲ ನೀರಿನಲ್ಲಿ ನೆನೆಸಿ.
- ನೆನೆಸಿದ ಕಾಳನ್ನು ಮೆತ್ತಗೆ ಬೇಯಿಸಿಕೊಳ್ಳಿ. ನಾನು ಕುಕ್ಕರ್ ನಲ್ಲಿ 4 - 5 ವಿಷಲ್ ಮಾಡುತ್ತೇನೆ. ಬೇಯಿಸುವಾಗ ಉಪ್ಪು ಸೇರಿಸಬೇಡಿ.
- ಬೇಯಿಸಿದ ಕಾಳನ್ನು ಸೌಟಿನ ಹಿಂಭಾಗ ಬಳಸಿ ಸ್ವಲ್ಪ ಮಸೆಯಿರಿ ಅಥವಾ ಮ್ಯಾಶ್ ಮಾಡಿಕೊಳ್ಳಿ.
- ಹುಣಿಸೆಹಣ್ಣಿನ ರಸ, ಉಪ್ಪು ಸೇರಿಸಿ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ.
- ಅನ್ನದ ಜೊತೆ ಬಡಿಸ ಬೇಕಾದಲ್ಲಿ ಹೆಚ್ಚು ನೀರು ಸೇರಿಸಿ. ಒಂದು ವೇಳೆ ಚಪಾತಿ ಜೊತೆ ಬಡಿಸುತ್ತೀರಾದರೆ ಸ್ವಲ್ಪ ನೀರು ಸೇರಿಸಿ.
- ಒಂದು ಸಣ್ಣ ಬಾಣಲೆಯಲ್ಲಿ ಬೆಳ್ಳುಳ್ಳಿ , ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ತಯಾರಿಸಿ.
- ಕುದಿಸಿದ ಸಾರು ಅಥವಾ ರಸಂ ಗೆ ಸೇರಿಸಿ, ಮಗುಚಿ ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ