Kothambari soppu thambuli in kannada | ಕೊತ್ತಂಬರಿ ಸೊಪ್ಪಿನ ತಂಬುಳಿ ಮಾಡುವ ವಿಧಾನ
ಕೊತ್ತಂಬರಿ ಸೊಪ್ಪಿನ ತಂಬುಳಿ ರುಚಿಕರ ಮತ್ತು ಒಂದು ವಿಶಿಷ್ಟ ಸ್ವಾದವನ್ನು ಹೊಂದಿದ ಅಡುಗೆಯಾಗಿದ್ದು ಅನ್ನದೊಂದಿಗೆ ಬಹಳ ಚೆನ್ನಾಗಿರುತ್ತದೆ. ತಾಜಾ ಕೊತ್ತಂಬರಿ ಸೊಪ್ಪು ಸಿಕ್ಕಿದಾಗ ಒಮ್ಮೆ ಮಾಡಿ ಸವಿಯಲು ಮರೆಯದಿರಿ.
ಕೊತ್ತಂಬರಿ ಸೊಪ್ಪು ತಂಬ್ಳಿ ವಿಡಿಯೋ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 2 ಇಬ್ಬರಿಗೆ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 2 ಇಬ್ಬರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 1 ಸಣ್ಣ ಕಟ್ಟು ಕೊತ್ತಂಬರಿ ಸೊಪ್ಪು
- 1/2 ಟೀಸ್ಪೂನ್ ಜೀರಿಗೆ
- 1 ಹಸಿರು ಮೆಣಸಿನಕಾಯಿ
- 1/2 ಕಪ್ ತೆಂಗಿನತುರಿ
- 1 ಕಪ್ ಮೊಸರು
- 1 ಒಣ ಮೆಣಸಿನಕಾಯಿ
- 2 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ
- 1/4 ಟೀಸ್ಪೂನ್ ಸಾಸಿವೆ
- ಉಪ್ಪು ರುಚಿಗೆ ತಕ್ಕಷ್ಟು.
ಕೊತ್ತಂಬರಿ ಸೊಪ್ಪಿನ ತಂಬುಳಿ ಮಾಡುವ ವಿಧಾನ:
- ಕೊತ್ತಂಬರಿ ಸೊಪ್ಪನ್ನು ಆಯ್ದು ಸ್ವಚ್ಛ ಮಾಡಿಕೊಳ್ಳಿ.
- ಸಣ್ಣದಾಗಿ ಕತ್ತರಿಸಿ. ಹಸಿರುಮೆಣಸಿನ ಕಾಯಿಯನ್ನೂ ಕತ್ತರಿಸಿ.
- ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆಯನ್ನು ಹುರಿಯಿರಿ.
- ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಸೊಪ್ಪು ಮತ್ತು ಹಸಿರುಮೆಣಸಿನ ಕಾಯಿಯನ್ನು ಹಾಕಿ.
- ಸೊಪ್ಪು ಬಾಡಿದ ಕೂಡಲೇ ಸ್ಟೋವ್ ಆಫ್ ಮಾಡಿ.
- ಹುರಿದ ಸೊಪ್ಪು, ಹಸಿರುಮೆಣಸಿನಕಾಯಿ ಮತ್ತು ಜೀರಿಗೆಯನ್ನು ಮಿಕ್ಸಿ ಜಾರಿಗೆ ಹಾಕಿ. ತೆಂಗಿನ ತುರಿಯನ್ನು ಸೇರಿಸಿ.
- ನುಣ್ಣಗೆ ಅರೆಯಿರಿ.
- ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ.
- ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ