ಮಂಗಳವಾರ, ಮೇ 31, 2016

Alasande kalu saaru recipe in kannada | ಅಲಸಂದೆ ಕಾಳು ಸಾರು ಮಾಡುವ ವಿಧಾನ

Alasande kalu saaru recipe in kannada

Alasande kalu saaru recipe | ಅಲಸಂದೆ ಕಾಳು ಸಾರು ಮಾಡುವ ವಿಧಾನ 



ತಯಾರಿ ಸಮಯ: 7 - 8 ಘಂಟೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಅಲಸಂದೆ ಕಾಳು / ಹೆಸರು ಕಾಳು / ಅವಡೆ ಕಾಳು
  2. 1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  3. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 4 - 6 ಕೆಂಪು ಮೆಣಸಿನಕಾಯಿ 
  2. 10 ಎಸಳು ಬೆಳ್ಳುಳ್ಳಿ
  3. 4 - 5 ಕರಿಬೇವಿನ ಎಲೆ
  4. 6 ಚಮಚ ಅಡುಗೆ ಎಣ್ಣೆ 

ಅಲಸಂದೆ ಕಾಳು ಸಾರು ಮಾಡುವ ವಿಧಾನ:

  1. ಅಲಸಂದೆ ಕಾಳನ್ನು 7 - 8 ಘಂಟೆಗಳ ಕಾಲ ನೀರಿನಲ್ಲಿ ನೆನೆಸಿ.
  2. ನೆನೆಸಿದ ಕಾಳನ್ನು ಮೆತ್ತಗೆ ಬೇಯಿಸಿಕೊಳ್ಳಿ. ನಾನು ಕುಕ್ಕರ್ ನಲ್ಲಿ 4 - 5 ವಿಷಲ್ ಮಾಡುತ್ತೇನೆ. ಬೇಯಿಸುವಾಗ ಉಪ್ಪು ಸೇರಿಸಬೇಡಿ. 
  3. ಬೇಯಿಸಿದ ಕಾಳನ್ನು ಸೌಟಿನ ಹಿಂಭಾಗ ಬಳಸಿ ಸ್ವಲ್ಪ ಮಸೆಯಿರಿ ಅಥವಾ ಮ್ಯಾಶ್ ಮಾಡಿಕೊಳ್ಳಿ.
  4. ಹುಣಿಸೆಹಣ್ಣಿನ ರಸ, ಉಪ್ಪು ಸೇರಿಸಿ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ  ಕುದಿಸಿ. 
  5. ಅನ್ನದ ಜೊತೆ ಬಡಿಸ ಬೇಕಾದಲ್ಲಿ ಹೆಚ್ಚು ನೀರು ಸೇರಿಸಿ. ಒಂದು ವೇಳೆ ಚಪಾತಿ ಜೊತೆ ಬಡಿಸುತ್ತೀರಾದರೆ  ಸ್ವಲ್ಪ ನೀರು ಸೇರಿಸಿ. 
  6. ಒಂದು ಸಣ್ಣ ಬಾಣಲೆಯಲ್ಲಿ ಬೆಳ್ಳುಳ್ಳಿ , ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಯ ಒಗ್ಗರಣೆ ತಯಾರಿಸಿ. 
  7. ಕುದಿಸಿದ ಸಾರು ಅಥವಾ ರಸಂ ಗೆ ಸೇರಿಸಿ, ಮಗುಚಿ ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ. 

ಸೋಮವಾರ, ಮೇ 16, 2016

Mango ice candy in Kannada | ಮಾವಿನ ಹಣ್ಣಿನ ಐಸ್ ಕ್ಯಾಂಡಿ ಮಾಡುವ ವಿಧಾನ

Mango ice candy recipe in Kannada

Mango ice candy in Kannada | ಮಾವಿನ ಹಣ್ಣಿನ ಐಸ್ ಕ್ಯಾಂಡಿ ಮಾಡುವ ವಿಧಾನ 

ತಯಾರಿ ಸಮಯ: 10 ನಿಮಿಷ
ಶೀಥಲಿಕರಣ ಸಮಯ : 2 - 3 ಘಂಟೆ
ಪ್ರಮಾಣ : 4 ಜನರಿಗೆ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕತ್ತರಿಸಿದ ಮಾವಿನ ಹಣ್ಣು 
  2. 1/4 ಕಪ್ ಕುದಿಸಿ ತಂಪು ಮಾಡಿದ ಹಾಲು 
  3. 1/4 ಕಪ್ ತಂಪು ಮಾಡಿದ ನೀರು 
  4. 10 ಚಮಚ ಸಕ್ಕರೆ (ಅಥವಾ ರುಚಿಗೆ ತಕ್ಕಷ್ಟು)
  5. ಐಸ್ ಕ್ಯಾಂಡಿ ಅಚ್ಚು ಅಥವಾ ಲೋಟ

ಮಾವಿನ ಹಣ್ಣಿನ ಐಸ್ ಕ್ಯಾಂಡಿ ಮಾಡುವ ವಿಧಾನ:

  1. ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. 
  2. ಮಿಕ್ಸಿ ಜಾರಿಗೆ ಕತ್ತರಿಸಿದ ಮಾವಿನ ಹಣ್ಣು, ಹಾಲು, ನೀರು ಮತ್ತು ಸಕ್ಕರೆ ಹಾಕಿ ನುಣ್ಣಗೆ ಅರೆಯಿರಿ. 
  3. ಅರೆದ ಮಿಶ್ರಣವನ್ನು ಐಸ್ ಕ್ಯಾಂಡಿ ಅಚ್ಚಿಗೆ ಹಾಕಿ ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ. 
  4. ಐಸ್ ಕ್ಯಾಂಡಿ ಅಚ್ಚು ಇಲ್ಲದಿದ್ದಲ್ಲಿ ಸಣ್ಣ ಪೇಪರ್ ಕಪ್ ಅಥವಾ ಸ್ಟೀಲ್ ಲೋಟಕ್ಕೆ ಹಾಕಿ, ಐಸ್ ಕ್ಯಾಂಡಿ ಕಡ್ಡಿಯನ್ನು ಇಟ್ಟು, ನಂತರ ಫ್ರೀಜರ್ ನಲ್ಲಿಟ್ಟು ಗಟ್ಟಿಯಾಗಲು ಬಿಡಿ. 
  5. ಗಟ್ಟಿಯಾದ ನಂತರ, ಅಚ್ಚು ಅಥವಾ ಲೋಟವನ್ನು ಕೆಲವು  ಸೆಕೆಂಡ್ ಗಳ ಕಾಲ ನೀರಿನಲ್ಲಿಡಿ ಅಥವಾ ನಲ್ಲಿ(ಟ್ಯಾಪ್) ನೀರಿನಡಿ ಹಿಡಿಯಿರಿ. ಆಮೇಲೆ ಐಸ್ ಕ್ಯಾಂಡಿಯನ್ನು ಜಾಗ್ರತೆಯಿಂದ ಹೊರ ತೆಗೆದು ಸವಿಯಿರಿ. 

ಶನಿವಾರ, ಮೇ 14, 2016

Vangi bath recipe in kannada | ವಾಂಗಿ ಬಾತ್ ಮಾಡುವ ವಿಧಾನ

Vangi bath recipe in kannada | ವಾಂಗಿ ಬಾತ್ ಮಾಡುವ ವಿಧಾನ

ವಾಂಗಿ ಬಾತ್ ವಿಡಿಯೋ



ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 3 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಎಳೆ ಹಸಿರು ಉದ್ದದ ಬದನೆಕಾಯಿ
  2. 1 ಕಪ್ ಸೋನಾ ಮಸೂರಿ ಅಥವಾ ಉತ್ತಮ ಗುಣಮಟ್ಟದ ಅಕ್ಕಿ
  3. 1/2 ಚಮಚ ಸಾಸಿವೆ
  4. 2 ಟೀಸ್ಪೂನ್ ಕಡ್ಲೇಬೇಳೆ 
  5. 2 ಟೀಸ್ಪೂನ್ ಉದ್ದಿನ ಬೇಳೆ
  6. 5 - 6 ಗೋಡಂಬಿ ಅಥವಾ 2 ಟೇಬಲ್ ಸ್ಪೂನ್ ನೆಲಗಡಲೆ ಬೀಜ
  7. 5 - 6 ಕರಿಬೇವಿನ ಎಲೆ 
  8. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  9. 3 - 4 ಚಮಚ ವಾಂಗಿ ಬಾತ್ ಪುಡಿ
  10. 1/4 ಟೀಸ್ಪೂನ್ ಅರಿಶಿನ ಪುಡಿ
  11.  ಉಪ್ಪು ರುಚಿಗೆ ತಕ್ಕಷ್ಟು
  12. 8 ಟೀಸ್ಪೂನ್ ಅಡುಗೆ ಎಣ್ಣೆ

ವಾಂಗಿ ಬಾತ್ ಮಾಡುವ ವಿಧಾನ:

  1. ಮೊದಲಿಗೆ ಅನ್ನ ಮಾಡಿ ತೆಗೆದಿಟ್ಟು ಕೊಳ್ಳಿ. 
  2. ಬದನೆಕಾಯಿಯನ್ನು 2 "ತುಂಡುಗಳಾಗಿ ಕತ್ತರಿಸಿ ಉದ್ದವಾಗಿ ಸೀಳಿ. ಮತ್ತು ಒಳ್ಳೆಯ ನೀರಿನಲ್ಲಿ ನೆನೆಸಿಡಿ. 
  3. ಒಂದು ಬಾಣಲೆಯನ್ನು ಬಿಸಿ ಮಾಡಿ. 8 ಚಮಚ ಅಡುಗೆ ಎಣ್ಣೆ ಹಾಕಿ
  4. ಸಾಸಿವೆ, ಕಡ್ಲೇಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಸೇರಿಸಿ ಒಗ್ಗರಣೆ ಮಾಡಿ. 
  5. ಸಾಸಿವೆ ಸಿಡಿಯುವವರೆಗೆ, ಬೇಳೆಗಳು ಕಂದು ಬಣ್ಣ ಬರುವ ತನಕ ಹುರಿಯಿರಿ. 
  6. ಕರಿಬೇವು ಹಾಕಿ, ಉರಿ ಕಡಿಮೆ ಮಾಡಿ.
  7. ಕತ್ತರಿಸಿ ನೀರಿನಲ್ಲಿ ನೆನೆಸಿಟ್ಟ ಬದನೆಕಾಯಿಯನ್ನು ನೀರನ್ನು ಹಿಂಡಿ ತೆಗೆದು ಸೇರಿಸಿ. 1 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ. 
  8. ಅರಿಶಿನ ಪುಡಿ ಹಾಕಿ. ಪುನಃ 2 ನಿಮಿಷ ಹುರಿಯಿರಿ. 
  9. ಉಪ್ಪು ಮತ್ತು ಹುಣಿಸೆಹಣ್ಣಿನ ರಸ ಸೇರಿಸಿ. 
  10. ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ. 
  11. ನಂತರ 3 - 4 ಚಮಚ ವಾಂಗಿ ಬಾತ್ ಪುಡಿ ಸೇರಿಸಿ. ಒಂದೆರಡು ನಿಮಿಷ ಮಗುಚಿ. ಸ್ಟವ್ ಆಫ್ ಮಾಡಿ. 
  12. ಮೊದಲೇ ಬೇಯಿಸಿಟ್ಟ ಅನ್ನ ಸೇರಿಸಿ, ಮುದ್ದೆಯಾಗದಂತೆ ಕಲಸಿ. 
  13. ಸಲಾಡ್ ಅಥವಾ ಮೊಸರನ್ನ ದೊಂದಿಗೆ ಬಡಿಸಿ.

ಶುಕ್ರವಾರ, ಮೇ 13, 2016

Vangi bath powder recipe in kannada | ವಾಂಗಿ ಬಾತ್ ಪುಡಿ ಮಾಡುವ ವಿಧಾನ

Vangi bath powder recipe in kannada

Vangi bath powder recipe in kannada | ವಾಂಗಿ ಬಾತ್ ಪುಡಿ ಮಾಡುವ ವಿಧಾನ


ತಯಾರಿ ಸಮಯ:  10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 1 ಕಪ್

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 15 - 20 ಒಣ ಮೆಣಸಿನಕಾಯಿ (ಮಧ್ಯಮ ಖಾರ)
  2. 1/4 ಕಪ್ ಕಡಲೆಬೇಳೆ 
  3. 1/4 ಕಪ್ ಉದ್ದಿನ ಬೇಳೆ 
  4. 1/4 ಕಪ್ ಕೊತ್ತಂಬರಿ ಬೀಜ
  5. 1/2 - 1 ಕಪ್ ಒಣ ಕೊಬ್ಬರಿ ತುರಿದಿದ್ದು
  6. 4 - 5 1 " ಉದ್ದದ  ದಾಲ್ಚಿನ್ನಿ ಅಥವಾ ಚಕ್ಕೆ 
  7. 8 - 10 ಲವಂಗ
  8. 1 ಮರಾಟಿ ಮೊಗ್ಗು 
  9. 1 ಏಲಕ್ಕಿ (ಬೇಕಾದಲ್ಲಿ)
  10. 2 ಟೀಸ್ಪೂನ್ ಗಸಗಸೆ ಬೀಜಗಳು (ಬೇಕಾದಲ್ಲಿ)
  11. 1/2 ಟೀಸ್ಪೂನ್ ಅಡುಗೆ ಎಣ್ಣೆ

ವಾಂಗಿ ಬಾತ್ ಪುಡಿ ಮಾಡುವ ವಿಧಾನ:

  1. ಒಂದು ಬಾಣಲೆಯನ್ನು ಬಿಸಿ ಮಾಡಿ. 1/2 ಚಮಚ ಅಡುಗೆ ಎಣ್ಣೆ ಹಾಕಿ ಒಣ ಮೆಣಸಿನಕಾಯಿಗಳನ್ನು ಹುರಿದು ತೆಗೆದಿಡಿ.
  2. ನಂತರ ಕಡಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
  3. ನಂತರ ಉದ್ದಿನ ಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
  4. ನಂತರ ಕೊತ್ತುಂಬರಿ ಬೀಜವನ್ನು ಘಮ್ಮನೆ ಸುವಾಸನೆ ಬರುವವರೆಗೆ ಹುರಿಯಿರಿ.
  5. ಕೂಡಲೇ ಅದಕ್ಕೆ ದಾಲ್ಚಿನ್ನಿ (ಚಕ್ಕೆ), ಲವಂಗ, ಏಲಕ್ಕಿ, ಮರಾಟಿ ಮೊಗ್ಗು ಮತ್ತು ಗಸಗಸೆ ಬೀಜಗಳನ್ನು ಸೇರಿಸಿ ಕೆಲವು ಸೆಕೆಂಡ್ಗಳ ಕಾಲ ಹುರಿಯಿರಿ. 
  6. ಹಾಗು ಹುರಿದಿಟ್ಟ ಎಲ್ಲ ಪದಾರ್ಥಗಳನ್ನು ಸೇರಿಸಿ. ಮತ್ತೊಮ್ಮೆ ಕೆಲವು ಸೆಕೆಂಡುಗಳ ಕಾಲ ಹುರಿದು ತೆಗೆದಿಡಿ. 
  7. ನಂತರ ಕೊಬ್ಬರಿಯನ್ನು ಕೆಲವು ಸೆಕೆಂಡುಗಳ ಕಾಲ ಹುರಿದು ತೆಗೆದಿಡಿ. 
  8. ಹುರಿದ ಪದಾರ್ಥಗಳು ತಣ್ಣಗೆ ಆದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 


ಗುರುವಾರ, ಮೇ 12, 2016

Davanagere benne dose in kannada | ದಾವಣಗೆರೆ ಬೆಣ್ಣೆ ದೋಸೆ ಮಾಡುವ ವಿಧಾನ

Davanagere benne dose in kannada

Davanagere benne dose in kannada | ದಾವಣಗೆರೆ ಬೆಣ್ಣೆ ದೋಸೆ ಮಾಡುವ ವಿಧಾನ 


ತಯಾರಿ ಸಮಯ: 15 ಗಂಟೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ದೋಸೆ ಅಕ್ಕಿ
  2. 1/2 ಕಪ್ ಉದ್ದಿನ ಬೇಳೆ
  3. 2 - 3 ಕಪ್ ಮಂಡಕ್ಕಿ
  4. 1 ಟೀಸ್ಪೂನ್ ಮೆಂತ್ಯ
  5. 2 ಟೀಸ್ಪೂನ್ ಮೈದಾ ಹಿಟ್ಟು
  6. 1 ಟೀಸ್ಪೂನ್ ಸಕ್ಕರೆ 
  7. 1/4 ಟೀಸ್ಪೂನ್ ಅಡುಗೆ ಸೋಡಾ 
  8. 1/4 ಕಪ್ ಬೆಣ್ಣೆ 
  9. ಉಪ್ಪು ರುಚಿಗೆ ತಕ್ಕಷ್ಟು.

ದಾವಣಗೆರೆ ಬೆಣ್ಣೆ ದೋಸೆ ಮಾಡುವ ವಿಧಾನ:

  1. ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ತೊಳೆದು ಒಳ್ಳೆಯ ಕುಡಿಯುವ ನೀರಿನಲ್ಲಿ 5-6 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಮಂಡಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿ. 
  3. ಈಗ ಮಿಕ್ಸಿ ಜಾರ್ ಗೆ, ನೆನೆಸಿ ನೀರು ಬಗ್ಗಿಸಿದ ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತೆಯನ್ನು ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ರುಬ್ಬಿರಿ. ನಯವಾದ ದೋಸೆ ಹಿಟ್ಟು ತಯಾರಾಗುವವರೆಗೆ ರುಬ್ಬಿ, ಹಿಟ್ಟನ್ನು ಒಂದು ದೊಡ್ಡ ಪಾತ್ರೆಗೆ ಬಗ್ಗಿಸಿ.
  4. ನಂತರ ನೆನೆಸಿದ ಮಂಡಕ್ಕಿಯನ್ನು ಅರೆದು ಅದೇ ಪಾತ್ರೆಗೆ ಸೇರಿಸಿ. ಚಳಿ ಪ್ರದೇಶವಾದಲ್ಲಿ ಮೈದಾ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕಲಸಿ ಹಿಟ್ಟು ಹುದುಗುವ ಮೊದಲೇ ಸೇರಿಸಿ. 
  5. ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, ಹಿಟ್ಟು ಹುದುಗಲು 7-8 ಘಂಟೆ ಕಾಲ ಬಿಡಿ.
  6. 7-8 ಘಂಟೆಯ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  7. ಒಂದು ಸಣ್ಣ ಬಟ್ಟಲಿನಲ್ಲಿ ಸೋಡಾ, ಸಕ್ಕರೆ ಮತ್ತು ಮೈದಾ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಕಲಸಿ ಸೇರಿಸಿ. ಚೆನ್ನಾಗಿ ಕಲಸಿ . ದಾವಣಗೆರೆ ಬೆಣ್ಣೆ ದೋಸೆಯ ಹಿಟ್ಟು ತಯಾರಾಯಿತು. 
  8. ದೋಸೆ ಹೆಂಚನ್ನು ಬಿಸಿಮಾಡಿ ಕೊಳ್ಳಿ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ. ಹೆಚ್ಚು ಹರಡ ಬೇಡಿ. ಹಾಗು ಮುಚ್ಚಳ ಮುಚ್ಚ ಬೇಕಾಗಿಲ್ಲ. 
  9. 5 ಸೆಕೆಂಡುಗಳ ನಂತರ ಸಣ್ಣ ಸಣ್ಣ ಬೆಣ್ಣೆಯ ತುಣುಕುಗಳನ್ನು ದೋಸೆಯ ಮೇಲೆ ಅಲ್ಲಲ್ಲಿ ಧಾರಾಳವಾಗಿ ಹಾಕಿ. 
  10. ದೋಸೆಯ ಅಂಚು ಹೊಂಬಣ್ಣಕ್ಕೆ ತಿರುಗಿದ ಕೂಡಲೇ ದೋಸೆಯನ್ನು ತೆಗೆಯಿರಿ. ಬೇಕಾದಲ್ಲಿ ಇನ್ನೊಂದು ಬದಿ ಒಂದೈದು ಸೆಕೆಂಡ್ ಗಳ ಕಾಲ ಬೇಯಿಸಿ.

Kayi chutney for davangere benne dose in Kannada | ದಾವಣಗೆರೆ ಬೆಣ್ಣೆ ದೋಸೆಯ ಕಾಯಿ ಚಟ್ನಿ

Kayi chutney for davangere benne dose in Kannada

Kayi chutney for davangere benne dose in Kannada | ದಾವಣಗೆರೆ ಬೆಣ್ಣೆ ದೋಸೆಯ ಕಾಯಿ ಚಟ್ನಿ


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 4 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ತೆಂಗಿನ ತುರಿ 
  2. 4 - 6 ಹಸಿರು ಮೆಣಸಿನಕಾಯಿ 
  3. ಒಂದು ಸಣ್ಣ ಗೋಲಿ ಗಾತ್ರದ ಹುಣಿಸೆ ಹಣ್ಣು 
  4. ಉಪ್ಪು ರುಚಿಗೆ ತಕ್ಕಷ್ಟು 

ದಾವಣಗೆರೆ ಬೆಣ್ಣೆ ದೋಸೆಯ ಕಾಯಿ ಚಟ್ನಿ ಮಾಡುವ ವಿಧಾನ:

  1. ತೆಂಗಿನ ತುರಿ, ಹುಣಿಸೆ ಹಣ್ಣು ಮತ್ತು ಹಸಿರುಮೆಣಸಿನ ಕಾಯಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  2. ಒಂದು ಬಟ್ಟಲಿಗೆ ತೆಗೆದು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ. ಬೆಣ್ಣೆ ದೋಸೆಯೊಂದಿಗೆ ಬಡಿಸಿ. 


Alugadde palya for davangere benne dose in Kannada | ದಾವಣಗೆರೆ ಬೆಣ್ಣೆ ದೋಸೆಯ ಆಲೂಗಡ್ಡೆ ಪಲ್ಯ

Alugadde palya for davangere benne dose in Kannada | ದಾವಣಗೆರೆ ಬೆಣ್ಣೆ ದೋಸೆಯ ಆಲೂಗಡ್ಡೆ ಪಲ್ಯ 


ತಯಾರಿ ಸಮಯ: 20 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ: 4 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಆಲೂಗಡ್ಡೆ
  2. 1 ಈರುಳ್ಳಿ 
  3. 1 - 2 ಹಸಿರು ಮೆಣಸಿನಕಾಯಿ
  4. 4 - 5 ಕರಿಬೇವಿನ ಎಲೆ 
  5. 4 ಚಮಚ ಅಡುಗೆ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು.


ದಾವಣಗೆರೆ ಬೆಣ್ಣೆ ದೋಸೆಯ ಆಲೂಗಡ್ಡೆ ಪಲ್ಯ ಮಾಡುವ ವಿಧಾನ:

  1. ಆಲೂಗಡ್ಡೆಯನ್ನು ತೊಳೆದು, ಬೇಯಿಸಿ, ಸಿಪ್ಪೆ ತೆಗೆದು ಪುಡಿ ಮಾಡಿಟ್ಟು ಕೊಳ್ಳಿ. 
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ ಹುರಿಯಿರಿ. 
  3. ನಂತರ ಪುಡಿ ಮಾಡಿದ ಆಲೂಗಡ್ಡೆ ಹಾಕಿ, ಉಪ್ಪು ಹಾಕಿ ಕಲಸಿ. ಬೆಣ್ಣೆ ದೋಸೆಯೊಂದಿಗೆ ಬಡಿಸಿ. 







ಸೋಮವಾರ, ಮೇ 9, 2016

Kothambari soppu thambuli in kannada | ಕೊತ್ತಂಬರಿ ಸೊಪ್ಪಿನ ತಂಬುಳಿ ಮಾಡುವ ವಿಧಾನ

Kothambari soppu thambuli in kannada

Kothambari soppu thambuli in kannada | ಕೊತ್ತಂಬರಿ ಸೊಪ್ಪಿನ ತಂಬುಳಿ ಮಾಡುವ ವಿಧಾನ

ಕೊತ್ತಂಬರಿ ಸೊಪ್ಪಿನ ತಂಬುಳಿ ರುಚಿಕರ ಮತ್ತು ಒಂದು ವಿಶಿಷ್ಟ ಸ್ವಾದವನ್ನು ಹೊಂದಿದ ಅಡುಗೆಯಾಗಿದ್ದು ಅನ್ನದೊಂದಿಗೆ ಬಹಳ ಚೆನ್ನಾಗಿರುತ್ತದೆ. ತಾಜಾ ಕೊತ್ತಂಬರಿ ಸೊಪ್ಪು ಸಿಕ್ಕಿದಾಗ ಒಮ್ಮೆ ಮಾಡಿ ಸವಿಯಲು ಮರೆಯದಿರಿ.

ಕೊತ್ತಂಬರಿ ಸೊಪ್ಪು ತಂಬ್ಳಿ ವಿಡಿಯೋ


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 2 ಇಬ್ಬರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 ಸಣ್ಣ ಕಟ್ಟು ಕೊತ್ತಂಬರಿ ಸೊಪ್ಪು
  2. 1/2 ಟೀಸ್ಪೂನ್ ಜೀರಿಗೆ
  3. 1 ಹಸಿರು ಮೆಣಸಿನಕಾಯಿ
  4. 1/2 ಕಪ್ ತೆಂಗಿನತುರಿ
  5. 1 ಕಪ್ ಮೊಸರು
  6. 1 ಒಣ ಮೆಣಸಿನಕಾಯಿ
  7. 2 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ
  8. 1/4 ಟೀಸ್ಪೂನ್ ಸಾಸಿವೆ
  9. ಉಪ್ಪು ರುಚಿಗೆ ತಕ್ಕಷ್ಟು.

ಕೊತ್ತಂಬರಿ ಸೊಪ್ಪಿನ ತಂಬುಳಿ ಮಾಡುವ ವಿಧಾನ:

  1. ಕೊತ್ತಂಬರಿ ಸೊಪ್ಪನ್ನು ಆಯ್ದು ಸ್ವಚ್ಛ ಮಾಡಿಕೊಳ್ಳಿ. 
  2. ಸಣ್ಣದಾಗಿ ಕತ್ತರಿಸಿ. ಹಸಿರುಮೆಣಸಿನ ಕಾಯಿಯನ್ನೂ ಕತ್ತರಿಸಿ. 
  3. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆಯನ್ನು ಹುರಿಯಿರಿ. 
  4. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಸೊಪ್ಪು ಮತ್ತು ಹಸಿರುಮೆಣಸಿನ ಕಾಯಿಯನ್ನು ಹಾಕಿ.
  5. ಸೊಪ್ಪು ಬಾಡಿದ ಕೂಡಲೇ ಸ್ಟೋವ್ ಆಫ್ ಮಾಡಿ.
  6. ಹುರಿದ ಸೊಪ್ಪು, ಹಸಿರುಮೆಣಸಿನಕಾಯಿ ಮತ್ತು ಜೀರಿಗೆಯನ್ನು ಮಿಕ್ಸಿ ಜಾರಿಗೆ ಹಾಕಿ. ತೆಂಗಿನ ತುರಿಯನ್ನು ಸೇರಿಸಿ. 
  7. ನುಣ್ಣಗೆ ಅರೆಯಿರಿ. 
  8. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ. 
  9. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಮೇ 6, 2016

Boodu kumbalakai majjige huli in Kannada | ಬೂದು ಕುಂಬಳಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ

 Boodu kumbalakai majjige huli in Kannada

 Boodu kumbalakai majjige huli in Kannada | ಬೂದು ಕುಂಬಳಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ 


ಇದೊಂದು ಬಹಳ ರುಚಿಕರವಾದ, ಅಷ್ಟೇನೂ ಖಾರ ಅಥವಾ ಮಸಾಲೆ ಹೊಂದಿರದ ಹುಳಿ ಅಥವಾ ಸಾಂಬಾರ್ ಆಗಿದ್ದು ಮಜ್ಜಿಗೆ ಹುಳಿ, ಹುಳಿಶಾಕ, ಪಳದ್ಯ ಎಂಬ ಹೆಸರಿನಿಂದ ಕರೆಯುತ್ತಾರೆ. 
ಮಜ್ಜಿಗೆ ಹುಳಿಯನ್ನು ಬೇರೆ ಬೇರೆ ರೀತಿಯಲ್ಲಿ ತಯಾರಿಸುತ್ತಾರೆ. ಕರ್ನಾಟಕದ ಕೆಲ ಭಾಗಗಳಲ್ಲಿ ಕಡ್ಲೇಬೇಳೆ ಹಾಕಿ ಮಜ್ಜಿಗೆ ಹುಳಿ ತಯಾರಿಸುವುದು ರೂಢಿಯಲ್ಲಿದೆ. ಆದರೆ ಈ ಮಜ್ಜಿಗೆ ಹುಳಿಗೆ ಕಡಲೆಬೇಳೆ ಹಾಕುವುದಿಲ್ಲ. ಮತ್ತು ಈ ರೀತಿಯ ಮಜ್ಜಿಗೆ ಹುಳಿ  ಮಲೆನಾಡು ಪ್ರದೇಶದಲ್ಲಿ ಮಾಡುತ್ತಾರೆ. ನಮ್ಮ ಮನೆಯಲ್ಲಿ ಇದು ಎಲ್ಲರ ಅಚ್ಚುಮೆಚ್ಚಿನ ಅಡುಗೆ..ನೀವು ಒಮ್ಮೆ ಮಾಡಿ ನೋಡಿ.
ಮಜ್ಜಿಗೆ ಹುಳಿ ವಿಡಿಯೋ


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 kg ಬೂದು ಕುಂಬಳಕಾಯಿ
  2. 1 - 2 ಹಸಿರು  ಮೆಣಸಿನಕಾಯಿ
  3. 1/4 ಕಪ್ ಹುಳಿಮಜ್ಜಿಗೆ ಅಥವಾ 1/2 ಕಪ್ ಮಜ್ಜಿಗೆ 
  4. 1 ಟೀಸ್ಪೂನ್ ಅಕ್ಕಿ 
  5. 1/4 ಟೀಸ್ಪೂನ್ ಜೀರಿಗೆ 
  6. 1/4 ಟೀಸ್ಪೂನ್ ಸಾಸಿವೆ 
  7. 1 ಕಪ್ ತೆಂಗಿನ ತುರಿ 
  8. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 5 - 6 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಬೂದು ಕುಂಬಳಕಾಯಿ ಮಜ್ಜಿಗೆ ಹುಳಿ ಮಾಡುವ ವಿಧಾನ:


  1. ಬೂದು ಕುಂಬಳಕಾಯಿಯನ್ನು ತೊಳೆದು ಉದ್ದುದ್ದವಾಗಿ ಕತ್ತರಿಸಿ. ಸಿಪ್ಪೆ ಮತ್ತು ತಿರುಳನ್ನು ತೆಗೆದು 2cm ಉದ್ದದ ತುಂಡುಗಳಾಗಿ ಕತ್ತರಿಸಿ. ನಂತರ ಕುಕ್ಕರ್ ನಲ್ಲಿ ಸೀಳಿದ ಹಸಿರು ಮೆಣಸಿನಕಾಯಿ, ಕತ್ತರಿಸಿದ ಕುಂಬಳಕಾಯಿ, ಸ್ವಲ್ಪ ಉಪ್ಪು ಮತ್ತು ಒಂದು ಕಪ್ ನೀರು ಹಾಕಿ ಬೇಯಿಸಿಕೊಳ್ಳಿ. 
  2. ಮಸಾಲೆ ಅರೆಯಲು ತೆಂಗಿನತುರಿ , 1/4 ಟೀಸ್ಪೂನ್ ಸಾಸಿವೆ, 1/4 ಟೀಸ್ಪೂನ್ ಜೀರಿಗೆ ಮತ್ತು 1 ಟೀಸ್ಪೂನ್ ತೊಳೆದ ಅಕ್ಕಿ ತೆಗೆದುಕೊಳ್ಳಿ. 
  3. ಹಾಗೂ ಮಿಕ್ಸಿ ಜಾರಿನಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಿ.
  4. ರುಬ್ಬಿದ ಮಸಾಲೆಯನ್ನು ಬೇಯಿಸಿದ ಕುಂಬಳಕಾಯಿಗೆ ಸೇರಿಸಿ.
  5. ನಿಮ್ಮ ರುಚಿ ಪ್ರಕಾರ ಉಪ್ಪು ಸೇರಿಸಿ.
  6. ಚೆನ್ನಾಗಿ ಕಲಸಿ, ಕುದಿಯಲು ಇಡಿ. ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಆಫ್ ಮಾಡಿ.
  7. ಸ್ಟವ್ ಆಫ್ ಮಾಡಿದ ನಂತರ ಮೊಸರು ಅಥವಾ ಮಜ್ಜಿಗೆ ಸೇರಿಸಿ ಕಲಸಿ. 
  8. ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಬಿಸಿ ಅನ್ನದೊಂದಿಗೆ ಬಡಿಸಿ. 



ಬುಧವಾರ, ಮೇ 4, 2016

Tomato salad or bajji recipe in kannada | ಟೊಮೇಟೊ ಸಲಾಡ್ ಅಥವಾ ಬಜ್ಜಿ ಮಾಡುವ ವಿಧಾನ

Tomato salad or bajji recipe in kannada

Tomato salad or bajji recipe in kannada | ಟೊಮೇಟೊ ಸಲಾಡ್ ಅಥವಾ ಬಜ್ಜಿ ಮಾಡುವ ವಿಧಾನ 

ಅತ್ಯಂತ ಸರಳ ಮತ್ತು ರುಚಿಕರ ಸಲಾಡ್ ಅಥವಾ ಟೊಮೇಟೊ ಬಜ್ಜಿ ಮಾಡುವ ವಿಧಾನ ಇಲ್ಲಿದೆ. ಇದನ್ನು ಅಣ್ಣ ಅಥವಾ ಚಪಾತಿಯೊಂದಿಗೆ ಸವಿಯಬಹುದು. ಯಾರು ಬೇಕಾದರೂ, ಅತ್ಯಂತ ಕಡಿಮೆ ಪದಾರ್ಥಗಳನ್ನು ಉಪಯೋಗಿಸಿಕೊಂಡು ಮಾಡಬಹುದಾದ ಅಡುಗೆಯಾಗಿದ್ದು, ಒಮ್ಮೆಯಾದರೂ ಮಾಡಿ ರುಚಿ ನೋಡಲು ಮರೆಯದಿರಿ.

ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : 2 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ಈರುಳ್ಳಿ
  2. 2 ದೊಡ್ಡ ಟೊಮ್ಯಾಟೊ
  3. 1 ಟೇಬಲ್ ಚಮಚ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
  4. 0.5 - 1 ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ
  5. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಚಮಚ ಸಾಸಿವೆ
  2. 1 ಒಣ ಮೆಣಸಿನಕಾಯಿ
  3. 2 ಟೀಸ್ಪೂನ್ ಅಡುಗೆ ಎಣ್ಣೆ

ಟೊಮೇಟೊ ಸಲಾಡ್ ಅಥವಾ ಬಜ್ಜಿ ಮಾಡುವ ವಿಧಾನ:

  1. ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. 
  2. ಅದಕ್ಕೆ ಸಣ್ಣಗೆ ಹೆಚ್ಚಿದ ಟೊಮೇಟೊ ಸೇರಿಸಿ. 
  3. ನಂತರ ಸಣ್ಣಗೆ ಹೆಚ್ಚಿದ ಹಸಿರುಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಹಾಕಿ. 
  4. ಚೆನ್ನಾಗಿ ಕಲಸಿ. ಎಣ್ಣೆ, ಸಾಸಿವೆ ಮತ್ತು ಒಣಮೆಣಸಿನ  ಕಾಯಿಯ ಒಗ್ಗರಣೆ ಕೊಡಿ. ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ. ಹಾಗೇ ಬೇಕಾದರೂ ಸವಿಯಬಹುದು. 

ಮಂಗಳವಾರ, ಮೇ 3, 2016

Rave or sajjige rotti recipe in Kannada | ರವೆ ಅಥವಾ ಸಜ್ಜಿಗೆ ರೊಟ್ಟಿ ಮಾಡುವ ವಿಧಾನ

Rave or sajjige rotti recipe in Kannada

Rave or sajjige rotti recipe in Kannada | ರವೆ ಅಥವಾ  ಸಜ್ಜಿಗೆ ರೊಟ್ಟಿ ಮಾಡುವ ವಿಧಾನ 

ರವೆ ಅಥವಾ  ಸಜ್ಜಿಗೆ ರೊಟ್ಟಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಈ ರೀತಿಯ ರವೆ ರೊಟ್ಟಿಯನ್ನು ಮಂಗಳೂರು ಪ್ರದೇಶದಲ್ಲಿ ತಯಾರಿಸಲಾಗುತ್ತದೆ. ಅಲ್ಲಿ ರವೆಯನ್ನು ಸಜ್ಜಿಗೆ ಎಂದೂ, ತವಾದ ಮೇಲೆ ಹರಡಿ ಮಾಡುವ ತಿಂಡಿಯನ್ನು ರೊಟ್ಟಿಯೆಂದು ಕರೆಯುವ ಕಾರಣ ಈ ತಿಂಡಿಯನ್ನು ಸಜ್ಜಿಗೆ ರೊಟ್ಟಿ ಎಂದು ಕರೆಯುತ್ತಾರೆ. ಈ ಅಡುಗೆಯ ವೀಡಿಯೊ ಮಾಡಿದ್ದೇನೆ. ನೋಡಿ ಆನಂದಿಸಿ.



ತಯಾರಿ ಸಮಯ: 30 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ : 3 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಸಣ್ಣ ರವೆ / ಸಜ್ಜಿಗೆ
  2. 0.5 ಕಪ್ ಮೊಸರು (ಸ್ವಲ್ಪ ಹುಳಿ ಇದ್ದರೆ ಒಳ್ಳೆಯದು )
  3. 1 ಟೀಸ್ಪೂನ್ ಮೈದಾ ಹಿಟ್ಟು
  4. 1.5 ಟೀಸ್ಪೂನ್ ಅಕ್ಕಿ ಹಿಟ್ಟು
  5. 1.5 ಕಪ್ ನೀರು
  6. 2 ಟೇಬಲ್ ಚಮಚ ತೆಂಗಿನ ತುರಿ
  7. 1 - 2 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ
  8. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  9. 0.25 ಟೀಸ್ಪೂನ್ ಇಂಗು
  10. 1/4 ಟೀಸ್ಪೂನ್ ಅರಿಶಿನ ಪುಡಿ ( ಬೇಕಾದಲ್ಲಿ - ನಾನು ಬಳಸಲಿಲ್ಲ)
  11. ಸಾಸಿವೆ ಮತ್ತು ಮಜ್ಜಿಗೆ ಮೆಣಸಿನ ಒಗ್ಗರಣೆ (ಬೇಕಾದಲ್ಲಿ- ನಾನು ಬಳಸಲಿಲ್ಲ)
  12. ತೆಂಗಿನ ಎಣ್ಣೆ / ತುಪ್ಪ ( ದೋಸೆ ಮಾಡುವ ಸಂದರ್ಭದಲ್ಲಿ ಬಳಸಲು)
  13. ಉಪ್ಪು ರುಚಿಗೆ ತಕ್ಕಷ್ಟು

ರವೆ ಅಥವಾ  ಸಜ್ಜಿಗೆ ರೊಟ್ಟಿ ಮಾಡುವ ವಿಧಾನ:

  1. ದೊಡ್ಡ ಬಟ್ಟಲಿನಲ್ಲಿ ರವೆ, ಮೈದಾ ಮತ್ತು ಅಕ್ಕಿ ಹಿಟ್ಟು ತೆಗೆದುಕೊಳ್ಳಿ.
  2. ಮೊಸರು ಮತ್ತು ನೀರು ಸೇರಿಸಿ. 
  3. ಚೆನ್ನಾಗಿ ಕಲಸಿ, 15 - 20 ನಿಮಿಷ ನೆನೆಯಲು ಬಿಡಿ. 
  4. ನಂತರ ತುರಿದ ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು , ಉಪ್ಪು, ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಇಂಗು ಸೇರಿಸಿ. 
  5. ಚೆನ್ನಾಗಿ ಕಲಸಿ. ಹಿಟ್ಟು  ದಪ ದಪನೆ ಬೀಳುವಂತೆ ಇರಬೇಕು. ಬೇಕಾದಲ್ಲಿ ನೀರು ಸೇರಿಸಿ. 
  6. ದೋಸೆ ಕಲ್ಲು ಅಥವಾ ನಾನ್-ಸ್ಟಿಕ್ ತವ ಬಿಸಿ ಮಾಡಿ. ಬಿಸಿ ಪ್ಯಾನ್ ಮೇಲೆ ಒಂದು ಸೌಟು ಹಿಟ್ಟು ಸುರಿದು ವೃತ್ತಾಕಾರವಾಗಿ ಕೈಗಳಿಂದ ಹರಡಿ. ಈ ಹಂತದಲ್ಲಿ ಸ್ವಲ್ಪ ಶೀಘ್ರವಾಗಿರಲು ಮರೆಯದಿರಿ. 
  7. ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. 
  8. ಎರಡೂ ಬದಿ ಕಾಯಿಸಿ. ತೆಂಗಿನ ಚಟ್ನಿ ಮತ್ತು ಬೆಣ್ಣೆಯೊಂದಿಗೆ ಬಡಿಸಿ.

ಸೋಮವಾರ, ಮೇ 2, 2016

soft idli using idli rave in Kannada | ಇಡ್ಲಿ ರವೆ ಉಪಯೋಗಿಸಿ ಇಡ್ಲಿ ಮಾಡುವ ವಿಧಾನ


idli recipe using idli rave in kannada

soft idli using idli rave in Kannada | ಇಡ್ಲಿ ರವೆ ಉಪಯೋಗಿಸಿ ಇಡ್ಲಿ ಮಾಡುವ ವಿಧಾನ 


ಇಡ್ಲಿ ರವೆ ಉಪಯೋಗಿಸಿ ಮೃದುವಾದ ಇಡ್ಲಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ನಮ್ಮಲ್ಲಿ ಬಹುತೇಕ ಎಲ್ಲರೂ ಅವರದೇ ಆದ ವಿಧಾನದಲ್ಲಿ ಮೃದು ಮತ್ತು ರುಚಿಕರ ಇಡ್ಲಿ ತಯಾರಿಸುತ್ತಾರೆ. ನಾನು ಮಾಡುವ ವಿಧಾನವನ್ನು ಕೆಲ ಸಲಹೆಗಳನ್ನು ಇಲ್ಲಿ ವಿವರಿಸಿದ್ದೇನೆ. ಕೆಳಗೆ ತಿಳಿಸಿರುವ ಅಳತೆ ಹವಾಮಾನ ಮತ್ತು ಅರೆಯಲು ಮಿಕ್ಸಿ ಅಥವಾ ಗ್ರೈಂಡರ್ ಎಂಬುದರ ಮೇಲೆ ಅವಲಂಬಿತವಾಗಿದೆ.

ತಯಾರಿ ಸಮಯ: 14 - 15 ಘಂಟೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 30 - 40 ಇಡ್ಲಿಗಳು

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಇಡ್ಲಿ ರವಾ 
  2. 1/2 - 3/4 ಕಪ್ ಉದ್ದಿನ ಬೇಳೆ 
  3. 1/4 - 1/2 ಟೀಸ್ಪೂನ್ ಮೆಂತ್ಯ 
  4. 0 - 1/2 ಕಪ್ ಅವಲಕ್ಕಿ 
  5. ಉಪ್ಪು ನಿಮ್ಮ ರುಚಿ ಪ್ರಕಾರ

ಇಡ್ಲಿ ರವೆ ಉಪಯೋಗಿಸಿ ಇಡ್ಲಿ ಮಾಡುವ ವಿಧಾನ:

  1. ಉದ್ದಿನಬೇಳೆ ಮತ್ತು ಮೆಂತ್ಯವನ್ನು ತೊಳೆದು ಒಳ್ಳೆಯ ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಸಿಡಿ. ಉತ್ತಮ ಫಲಿತಾಂಶಕ್ಕಾಗಿ ಇಡೀ ಉದ್ದಿನ ಬೇಳೆ ಬಳಸಿ.
  2. ಅವಲಕ್ಕಿಯನ್ನು ಬಳಸುತ್ತೀರಾದರೆ ಅದನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ. ನಾನು ಗ್ರೈಂಡರ್ ಬಳಸುವುದರಿಂದ ಅವಲಕ್ಕಿ ಸೇರಿಸುವುದಿಲ್ಲ. 
  3. 4 - 5 ಗಂಟೆಗಳ ನಂತರ ನೆನೆಸಿಟ್ಟ ಬೇಳೆಯ ನೀರನ್ನು ಬಸಿದು ಪಕ್ಕಕ್ಕಿಡಿ. ಅರೆಯುವಾಗ ಈ ನೀರು ಉಪಯೋಗಿಸಿದಲ್ಲಿ ಹಿಟ್ಟು ಚೆನ್ನಾಗಿ ಹುದುಗಲು ಸಹಾಯವಾಗುತ್ತದೆ.
  4. ಈಗ ಗ್ರೈಂಡರ್ ಗೆ ನೆನೆಸಿದ ಉದ್ದಿನಬೇಳೆ, ಮೆಂತ್ಯ ಮತ್ತು ಅವಲಕ್ಕಿ (ಬಳಸುತ್ತೀರಾದಲ್ಲಿ) ಹಾಕಿ.
  5. ಏತನ್ಮಧ್ಯೆ, ಇಡ್ಲಿ ರವೆಗೆ ಬೆಚ್ಚಗಿನ ನೀರು ಹಾಕಿ ನೀರನ್ನು ಸಂಪೂರ್ಣವಾಗಿ ಬಸಿದು ಪಕ್ಕಕ್ಕೆ ಹೊಂದಿಸಿ.
  6. ಈಗ ಗ್ರೈಂಡರ್ ನಲ್ಲಿರುವ ಬೇಳೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುವ ಮೂಲಕ ನಯವಾಗಿ ಅರೆಯಿರಿ. ಅರೆಯಲು ಬೇಳೆ ನೆನೆಸಿದ ನೀರು ಉಪಯೋಗಿಸಿ. ಮಿಕ್ಸರ್ ಗ್ರೈಂಡರ್ನಲ್ಲಿ ರುಬ್ಬುವ ಸಂದರ್ಭದಲ್ಲಿ ತಣ್ಣೀರು ಸೇರಿಸಲು ಪ್ರಯತ್ನಿಸಿ. ಏಕೆಂದರೆ ಮಿಕ್ಸಿಯಲ್ಲಿ ಅರೆಯುವಾಗ ಹಿಟ್ಟು ಬಿಸಿಯಾಗುತ್ತದೆ.  ಆಗ ಹಿಟ್ಟು ಚೆನ್ನಾಗಿ ಹುದುಗುವುದಿಲ್ಲ.
  7. ಉದ್ದಿನ ಬೇಳೆ ಅರೆದು ಮುಗಿಯುವ ಸಂದರ್ಭದಲ್ಲಿ ತೊಳೆದಿಟ್ಟ ಇಡ್ಲಿ ರವಾ ಸೇರಿಸಿ,  5 ನಿಮಿಷ ರುಬ್ಬುವುದನ್ನು ಮುಂದುವರೆಸಿ. ಬೇಕೆನಿಸಿದರೆ ನೀರು ಸೇರಿಸಿ. ಇಡ್ಲಿ ಹಿಟ್ಟು ಸೌಟಿನಿಂದ ದಪ-ದಪನೆ ಬೀಳುವಷ್ಟು ಗಟ್ಟಿಯಾಗಿರಬೇಕು. ನೀವು ಮಿಕ್ಸರ್ ಗ್ರೈಂಡರ್ ಬಳಸುತ್ತಿದ್ದರೆ, ತೊಳೆದಿಟ್ಟ ಇಡ್ಲಿ ರವಾ ಇರುವ ಪಾತ್ರೆ ಗೆ ಅರೆದ ಉದ್ದಿನ ಹಿಟ್ಟನ್ನು ಹಾಕಿ, ನಂತರ ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ.
  8. ಒಂದು ದೊಡ್ಡ ಪಾತ್ರೆಯಲ್ಲಿ ಚೆನ್ನಾಗಿ ಕಲಸಿದ ಹಿಟ್ಟನ್ನು ಅಥವಾ ಗ್ರೈಂಡರ್ ನಲ್ಲಿ ಅರೆದ ಹಿಟ್ಟನ್ನು ಸುರಿಯಿರಿ.
  9. ಮುಚ್ಚಳವನ್ನು ಮುಚ್ಚಿ ಮತ್ತು 7 - 8 ಗಂಟೆಗಳ ಕಾಲ ಹುದುಗಲು ಬಿಡಿ.   
  10. ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  11. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
  12. 10 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ.  
Related Posts Plugin for WordPress, Blogger...