Hesarubele-carrot kosambari recipe Kannada | ಹೆಸರುಬೇಳೆ - ಕ್ಯಾರೆಟ್ ಕೋಸಂಬರಿ
ಹೆಸರುಬೇಳೆ ಮತ್ತು ಕ್ಯಾರೆಟ್ ಕೋಸಂಬರಿಯಲ್ಲಿ ನೆನೆಸಿದ ಹೆಸರುಬೇಳೆ ಮತ್ತು ತುರಿದ ಕ್ಯಾರೆಟ್ ಮುಖ್ಯ ಪದಾರ್ಥಗಳಾಗಿವೆ. ಕೋಸಂಬರಿ ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳಲ್ಲೊಂದಾಗಿದೆ ಹಾಗೂ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಈ ಅಡುಗೆ ಚಾಲ್ತಿಯಲ್ಲಿದೆ. ಶುಭ ಸಮಾರಂಭಗಳಲ್ಲಿ, ಅತಿಥಿಗಳು ಬಂದಾಗ, ಸುಲಭವಾಗಿ ಮಾಡಬಲ್ಲ ವಿಶೇಷ ಅಡುಗೆ ಇದಾಗಿದೆ.
ತಯಾರಿ ಸಮಯ: 2 ಗಂಟೆ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : ಇಬ್ಬರಿಗೆ
ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 1/2 ಕಪ್ ಹೆಸರುಬೇಳೆ
- 1 ತುರಿದ ಕ್ಯಾರೆಟ್
- 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
- 2 ಟೇಬಲ್ ಸ್ಪೂನ್ ತೆಂಗಿನತುರಿ
- 1/2 ಟೀಸ್ಪೂನ್ ನಿಂಬೇ ರಸ
- 1 ಹಸಿಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು (ಬೇಕಾದಲ್ಲಿ)
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1/4 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಅಡುಗೆ ಎಣ್ಣೆ
ಮಾಡುವ ವಿಧಾನ:
- ಹೆಸರುಬೇಳೆಯನ್ನು 2-3 ಗಂಟೆಗಳ ಕಾಲ ನೆನೆಸಿ. ಕ್ಯಾರೆಟ್, ತೆಂಗಿನತುರಿ, ಹಸಿಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪಿನಂತ ಪದಾರ್ಥಗಳನ್ನು ಸಿದ್ಧ ಮಾಡಿಟ್ಟುಕೊಳ್ಳಿ.
- ಈಗ ಒಂದು ಬೌಲ್ ತೆಗೆದುಕೊಂಡು, ಸಿದ್ಧ ಮಾಡಿಟ್ಟುಕೊಂಡ ಎಲ್ಲಾ ಪದಾರ್ಥಗಳನ್ನು ಹಾಕಿ, ಉಪ್ಪು ಮತ್ತು ನಿಂಬೆ ರಸ ಸೇರಿಸಿ ಕಲಸಿ. ನಂತರ ಒಣ ಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಕೊಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ