Jola recipe in Kannada | ಬೆಣ್ಣೆ ಜೋಳ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1 ಜೋಳ
- 1 ಟೇಬಲ್ ಚಮಚ ಬೆಣ್ಣೆ
- 1/4 ಟೀಸ್ಪೂನ್ ಚಾಟ್ ಮಸಾಲಾ
- ದೊಡ್ಡ ಚಿಟಿಕೆ ಕಾಳು ಮೆಣಸಿನ ಪುಡಿ (ನಿಮ್ಮ ಖಾರಕ್ಕೆ ತಕ್ಕಂತೆ ಬದಲಾಯಿಸಿ)
- 1/4 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಂತೆ
ಬೆಣ್ಣೆ ಜೋಳ ಮಾಡುವ ವಿಧಾನ:
- ಜೋಳದ ಸಿಪ್ಪೆ ಸುಲಿದು ತೊಳೆಯಿರಿ.
- ಆಮೇಲೆ ಒಂದು ಚಾಕುವಿನ ಸಹಾಯದಿಂದ ಜೋಳದ ಕಾಳುಗಳನ್ನು ಹೆರೆದು ತೆಗೆಯಿರಿ.
- ಈಗ ಜೋಳವನ್ನು ಆವಿಯಲ್ಲಿ ಅಥವಾ ಕುಕ್ಕರ್ ನಲ್ಲಿ ಅಥವಾ ಓವೆನ್ ನಲ್ಲಿ ಬೇಯಿಸಿ. ಕುಕ್ಕರ್ನಲ್ಲಿ ಬೇಯಿಸಿದರೆ, ನೀರನ್ನು ಸಂಪೂರ್ಣ ಬಸಿದು ತೆಗೆಯಿರಿ.
- ನಂತ್ರ ಬೇಯಿಸಿದ ಜೋಳಕ್ಕೆ ಬಿಸಿ ಇರುವಾಗಲೇ ಬೆಣ್ಣೆ, ಉಪ್ಪು, ಕಾಳುಮೆಣಸಿನ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ.
- ಚೆನ್ನಾಗಿ ಕಲಸಿ, ಬಿಸಿ ಇರುವಾಗಲೇ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ