Kadlebele cucumber kosambari recipe in kannada | ಕಡ್ಲೆಬೇಳೆ ಸೌತೆಕಾಯಿ ಕೋಸಂಬರಿ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 4 ಟೇಬಲ್ ಚಮಚ ಕಡ್ಲೆಬೇಳೆ
- 1/2 ಸಣ್ಣಗೆ ಕೊಚ್ಚಿದ ಸೌತೆಕಾಯಿ
- 2 ಟೇಬಲ್ ಚಮಚ ತೆಂಗಿನ ತುರಿ
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
- 1/2 ಹಸಿಮೆಣಸಿನಕಾಯಿ (ಬೇಕಾದಲ್ಲಿ)
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಒಣ ಮೆಣಸಿನಕಾಯಿ
- 1/4 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಅಡುಗೆ ಎಣ್ಣೆ
- ಚಿಟಿಕೆ ಇಂಗು
ಮಾಡುವ ವಿಧಾನ:
- ಕಡ್ಲೆಬೇಳೆಯನ್ನು 2-3 ಗಂಟೆಗಳ ಕಾಲ ನೆನೆಸಿ. ನೆನೆಸುವಾಗ ೧/೪ ಚಮಚದಷ್ಟು ಉಪ್ಪು ಹಾಕಿ ನೆನೆಸಿ.
- ಸೌತೆಕಾಯಿಯನ್ನು ಸಣ್ಣಗೆ ಕೊಚ್ಚಿಟ್ಟುಕೊಳ್ಳಿ.
- ಒಂದು ಬಟ್ಟಲಿನಲ್ಲಿ ನೆನೆಸಿದ ಕಡ್ಲೆಬೇಳೆ, ಕೊಚ್ಚಿದ ಸೌತೆಕಾಯಿ ಮತ್ತು ತೆಂಗಿನ ತುರಿಯನ್ನು ತೆಗೆದು ಕೊಳ್ಳಿ.
- ಸ್ವಲ್ಪ ಉಪ್ಪು ಹಾಕಿ. ಬೇಕಾದಲ್ಲಿ ಹಸಿರುಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
- ನಂತರ ಒಣ ಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ಚೆನ್ನಾಗಿ ಕಲಸಿ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ