ತಂಬುಳಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ತಂಬುಳಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಫೆಬ್ರವರಿ 27, 2023

Nellikai tambli recipe in Kannada | ನೆಲ್ಲಿಕಾಯಿ ತಂಬ್ಳಿ ಮಾಡುವ ವಿಧಾನ

 

Nellikai tambli recipe in Kannada

Nellikai tambli recipe in Kannada |ನೆಲ್ಲಿಕಾಯಿ ತಂಬ್ಳಿ ಮಾಡುವ ವಿಧಾನ

ನೆಲ್ಲಿಕಾಯಿ ತಂಬ್ಳಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1.  2 ನೆಲ್ಲಿಕಾಯಿ
  2. 1/4 ಕಪ್ ತೆಂಗಿನ ತುರಿ
  3. 1 - 2 ಹಸಿ ಮೆಣಸಿನಕಾಯಿ
  4. 1/4 - 1/2 ಕಪ್ ಮೊಸರು ಅಥವಾ ಮಜ್ಜಿಗೆ
  5. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. ಸ್ವಲ್ಪ ಕರಿಬೇವು
  4. 1 ಟೀಸ್ಪೂನ್ ಅಡುಗೆ ಎಣ್ಣೆ

ನೆಲ್ಲಿಕಾಯಿ ತಂಬ್ಳಿ ಮಾಡುವ ವಿಧಾನ:

  1. ನೆಲ್ಲಿಕಾಯಿ ತೊಳೆದು, ಬೀಜ ತೆಗೆದು, ಸಣ್ಣ ಚೂರುಗಳನ್ನಾಗಿ ಮಾಡಿಕೊಳ್ಳಿ. 
  2. ನಂತರ ಒಂದು ಮಿಕ್ಸಿ ಜಾರ್ನಲ್ಲಿ ಕತ್ತರಿಸಿದ ನೆಲ್ಲಿಕಾಯಿ, ಹಸಿ ಮೆಣಸಿನಕಾಯಿ ಮತ್ತು ತೆಂಗಿನತುರಿ ತೆಗೆದುಕೊಳ್ಳಿ. 
  3. ರುಚಿಗೆ ತಕ್ಕಂತೆ ನೀರು ಸೇರಿಸಿ. 
  4. , ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. 
  5.  ಕೊನೆಯಲ್ಲಿ ಮೊಸರು ಅಥವಾ ಮಜ್ಜಿಗೆ ಸೇರಿಸಿ ಒಂದೆರಡು ಸುತ್ತು ಅರೆಯಿರಿ. 
  6. ಒಂದು ಪಾತ್ರೆಗೆ ಬಗ್ಗಿಸಿ. 
  7. ಸಾಸಿವೆ, ಕರಿಬೇವು ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. 
  8. ಬಿಸಿ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಏಪ್ರಿಲ್ 8, 2022

Southekayi sasive recipe in kannada | ಸೌತೆಕಾಯಿ ಸಾಸಿವೆ ಮಾಡುವ ವಿಧಾನ

 

Southekayi sasive recipe in kannada

Southekayi sasive recipe in kannada | ಸೌತೆಕಾಯಿ ಸಾಸಿವೆ (ಹಸಿಗೊಜ್ಜು) ಮಾಡುವ ವಿಧಾನ

ಸೌತೆಕಾಯಿ ಸಾಸಿವೆ ವಿಡಿಯೋ

ಬೇಕಾಗುವ ಪದಾರ್ಥಗಳು - ವಿಧಾನ ೧: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸೌತೆಕಾಯಿ
  2. 1 - 2 ಒಣಮೆಣಸಿನಕಾಯಿ
  3. 1/2 ಕಪ್ ತೆಂಗಿನ ತುರಿ 
  4. 1/2 ಟೀಸ್ಪೂನ್ ಸಾಸಿವೆ
  5. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 

ಬೇಕಾಗುವ ಪದಾರ್ಥಗಳು - ವಿಧಾನ ೨: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಸೌತೆಕಾಯಿ 
  2. 1/4 ಕಪ್ ಮೊಸರು
  3. 1 - 2 ಹಸಿ ಮೆಣಸಿನಕಾಯಿ
  4. 1/2 ಕಪ್ ತೆಂಗಿನ ತುರಿ 
  5. 1/4 ಟೀಸ್ಪೂನ್ ಸಾಸಿವೆ
  6. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಚಮಚ ಸಾಸಿವೆ
  2. 1/2 ಕೆಂಪು ಮೆಣಸಿನಕಾಯಿ
  3. 4 -5 ಕರಿಬೇವು
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಸೌತೆಕಾಯಿ ಸಾಸಿವೆ ಮಾಡುವ ವಿಧಾನ - ೧:

  1. ಸೌತೆಕಾಯಿಯನ್ನು ಸಣ್ಣದಾಗಿ ಕೊಚ್ಚಿ ಅಥವಾ ತುರಿದುಕೊಳ್ಳಿ. 
  2. ಮಿಕ್ಸಿ ಜಾರಿನಲ್ಲಿ ತೆಂಗಿನ ತುರಿ, ಒಣಮೆಣಸು ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  3. ತುರಿದ ಅಥವಾ ಕೊಚ್ಚಿದ ಸೌತೆಕಾಯಿ ಹಾಕಿ ಒಂದೆರಡು ಸುತ್ತು ಅರೆಯಿರಿ.
  4. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 
  5. ಎಣ್ಣೆ, ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಸೌತೆಕಾಯಿ ಸಾಸಿವೆ ಮಾಡುವ ವಿಧಾನ - ೨:

  1. ಸೌತೆಕಾಯಿಯನ್ನು ಸಣ್ಣದಾಗಿ ಕೊಚ್ಚಿ ಅಥವಾ ತುರಿದುಕೊಳ್ಳಿ. 
  2. ಮಿಕ್ಸಿ ಜಾರಿನಲ್ಲಿ ತೆಂಗಿನ ತುರಿ, ಹಸಿಮೆಣಸಿನಕಾಯಿ ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  3. ತುರಿದ ಅಥವಾ ಕೊಚ್ಚಿದ ಸೌತೆಕಾಯಿ, ಮೊಸರು ಮತ್ತು ಉಪ್ಪು ಸೇರಿಸಿ. ಒಂದೆರಡು ಸುತ್ತು ಅರೆಯಿರಿ.
  4. ಎಣ್ಣೆ, ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಬುಧವಾರ, ಮಾರ್ಚ್ 30, 2022

Bellulli tambli recipe in Kannada | ಬೆಳ್ಳುಳ್ಳಿ ತಂಬ್ಳಿ ಮಾಡುವ ವಿಧಾನ

 

Bellulli tambli recipe in Kannada

Bellulli tambli recipe in Kannada | ಬೆಳ್ಳುಳ್ಳಿ ತಂಬ್ಳಿ ಮಾಡುವ ವಿಧಾನ

ಬೆಳ್ಳುಳ್ಳಿ ತಂಬ್ಳಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಬೆಳ್ಳುಳ್ಳಿ
  2. 1 - 2 ಒಣ ಮೆಣಸಿನಕಾಯಿ
  3. 1/4 ಕಪ್ ತೆಂಗಿನ ತುರಿ
  4. 1/4 - 1/2 ಕಪ್ ಮೊಸರು ಅಥವಾ ಮಜ್ಜಿಗೆ
  5. 1 ಟೀಸ್ಪೂನ್ ಅಡುಗೆ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. ಸ್ವಲ್ಪ ಕರಿಬೇವು
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಬೆಳ್ಳುಳ್ಳಿ ತಂಬ್ಳಿ ಮಾಡುವ ವಿಧಾನ:

  1. ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಸಣ್ಣ ಚೂರುಗಳನ್ನಾಗಿ ಮಾಡಿಕೊಳ್ಳಿ. 
  2. ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಮೊದಲು ಒಣ ಮೆಣಸಿನಕಾಯಿಯನ್ನು ಹುರಿಯಿರಿ. 
  3. ನಂತರ ಚೂರು ಮಾಡಿದ ಬೆಳ್ಳುಳ್ಳಿಯನ್ನು ಹುರಿಯಿರಿ.
  4. ಒಂದು ಮಿಕ್ಸಿ ಜಾರ್ನಲ್ಲಿ ಹುರಿದ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ತೆಂಗಿನತುರಿ ತೆಗೆದುಕೊಂಡು, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  5.  ಕೊನೆಯಲ್ಲಿ ಉಪ್ಪು ಮತ್ತು ಮೊಸರು ಸೇರಿಸಿ ಒಂದೆರಡು ಸುತ್ತು ಅರೆಯಿರಿ. 
  6. ಒಂದು ಪಾತ್ರೆಗೆ ಬಗ್ಗಿಸಿ. ಸಾಸಿವೆ, ಕರಿಬೇವು ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಬುಧವಾರ, ಏಪ್ರಿಲ್ 8, 2020

Menthe thambli recipe in kannada | ಮೆಂತೆ ತಂಬ್ಳಿ ಮಾಡುವ ವಿಧಾನ

Menthe thambli recipe in kannada

Menthe thambli recipe in kannada | ಮೆಂತೆ ತಂಬ್ಳಿ ಮಾಡುವ ವಿಧಾನ

ಮೆಂತೆ ತಂಬ್ಳಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಒಣಮೆಣಸಿನಕಾಯಿ ಅಥವಾ ಒಂದು ಚಮಚ ಕಾಳು ಮೆಣಸು
  2. ಒಂದು ಚಮಚ ಮೆಂತ್ಯ
  3. ಒಂದು ಚಮಚ ಜೀರಿಗೆ
  4. 1/2 ಕಪ್ ಮೊಸರು
  5. 1/2 ಕಪ್ ತೆಂಗಿನ ತುರಿ 
  6. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 
  7. 1 ಟೀಸ್ಪೂನ್ ತುಪ್ಪ ಅಥವಾ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1 ಟೀಸ್ಪೂನ್ ಅಡುಗೆ ಎಣ್ಣೆ
  3. 1/2 ಚಮಚ ಸಾಸಿವೆ
  4. ಚಿಟಿಕೆ ಇಂಗು
  5. ಸ್ವಲ್ಪ ಕರಿಬೇವು

ಮೆಂತೆ ತಂಬ್ಳಿ ಮಾಡುವ ವಿಧಾನ:

  1. ಒಗ್ಗರಣೆ ಸೌಟು ಅಥವಾ ಸಣ್ಣ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ. 
  2. ಒಣಮೆಣಸಿನಕಾಯಿ (ಅಥವಾ ಕರಿಮೆಣಸು), ಮೆಂತ್ಯ ಮತ್ತು ಜೀರಿಗೆ ಸೇರಿಸಿ ಮಧ್ಯಮ ಉರಿಯಲ್ಲಿ ಜೀರಿಗೆ ಚಟಪಟ ಅನ್ನುವವರೆಗೆ ಹುರಿಯಿರಿ. 
  3. ನಂತರ ಮಿಕ್ಸಿಯಲ್ಲಿ ಹುರಿದ ಪದಾರ್ಥಗಳನ್ನು ತೆಗೆದುಕೊಳ್ಳಿ. 
  4. ಅದಕ್ಕೆ ತೆಂಗಿನ ತುರಿ ಸೇರಿಸಿ.
  5. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.
  6. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  7. ಮೊಸರನ್ನು ಸೇರಿಸಿ, ಇನ್ನೊಂದು ಸುತ್ತು ಅರೆಯಿರಿ.
  8. ನಂತ್ರ ಒಂದು ಬೌಲ್ ನಲ್ಲಿ ಅರೆದ ಮಿಶ್ರಣ ಹಾಕಿ. ಅಗತ್ಯವಿದ್ದಷ್ಟು ನೀರು ಸೇರಿಸಿ.  ತಂಬ್ಳಿ ಸ್ವಲ್ಪ ನೀರಾಗಿರಬೇಕು. 
  9. ಎಣ್ಣೆ, ಮೆಣಸಿನಕಾಯಿ, ಇಂಗು, ಕರಿಬೇವು  ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. 
  10. ಬಿಸಿಯಾದ ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಬಡಿಸಿ.

ಗುರುವಾರ, ಏಪ್ರಿಲ್ 25, 2019

Tomato sasive recipe in kannada | ಟೊಮೇಟೊ ಸಾಸಿವೆ ಮಾಡುವ ವಿಧಾನ

Tomato sasive recipe in kannada

Tomato sasive recipe in kannada | ಟೊಮೇಟೊ ಸಾಸಿವೆ ಮಾಡುವ ವಿಧಾನ

ಟೊಮೇಟೊ ಸಾಸಿವೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ದೊಡ್ಡ ಗಾತ್ರದ ಟೊಮೇಟೊ ಹಣ್ಣು 
  2. 1/4 - 1/2 ಕಪ್ ಮೊಸರು
  3. 2 ಒಣಮೆಣಸಿನಕಾಯಿ
  4. 1/2 ಕಪ್ ತೆಂಗಿನ ತುರಿ 
  5. 1/2 ಟೀಸ್ಪೂನ್ ಸಾಸಿವೆ
  6. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 4 -5 ಕರಿಬೇವು
  4. ಸ್ವಲ್ಪ ಉದ್ದಿನಬೇಳೆ
  5. 2 ಟೀಸ್ಪೂನ್ ಅಡುಗೆ ಎಣ್ಣೆ

ಟೊಮೇಟೊ ಸಾಸಿವೆ ಮಾಡುವ ವಿಧಾನ:

  1. ಸಣ್ಣಗೆ ಕತ್ತರಿಸಿದ ಟೊಮ್ಯಾಟೊವನ್ನು ಒಂದು ಬೌಲ್ ನಲ್ಲಿ ತೆಗೆದುಕೊಳ್ಳಿ.
  2. ಅದಕ್ಕೆ ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ಹಿಸುಕಿ ಕಲಸಿ. 
  3. ಮೊಸರನ್ನು ಸೇರಿಸಿ, ಮಗುಚಿ ಪಕ್ಕಕ್ಕಿಡಿ.
  4. ಮಿಕ್ಸಿ ಜಾರಿನಲ್ಲಿ ತೆಂಗಿನ ತುರಿ, ಒಣಮೆಣಸು ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  5. ಅರೆದ ತೆಂಗಿನಕಾಯಿ-ಮೆಣಸು-ಸಾಸಿವೆಯನ್ನು ಹಿಸುಕಿದ ಟೊಮೇಟೊ-ಮೊಸರು ಮಿಶ್ರಣಕ್ಕೆ ಸೇರಿಸಿ. ಚೆನ್ನಗಿ ಕಲಸಿ.
  6. ಎಣ್ಣೆ, ಮೆಣಸಿನಕಾಯಿ, ಕರಿಬೇವು, ಉದ್ದಿನಬೇಳೆ ಮತ್ತು ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಗುರುವಾರ, ಸೆಪ್ಟೆಂಬರ್ 29, 2016

Hasi menthe thambli recipe in Kannada | ಹಸಿ ಮೆಂತೆ ತಂಬ್ಳಿ ಮಾಡುವ ವಿಧಾನ

Hasi menthe thambli recipe in Kannada

Hasi menthe thambli recipe in Kannada | ಹಸಿ ಮೆಂತೆ ತಂಬ್ಳಿ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಟೀಸ್ಪೂನ್ ಮೆಂತೆ
  2. 1/4 ಕಪ್ ತೆಂಗಿನತುರಿ
  3. 1 ಕಪ್ ಮೊಸರು ಅಥವಾ ಮಜ್ಜಿಗೆ 
  4. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ
  3. 1/4 ಟೀಸ್ಪೂನ್ ಸಾಸಿವೆ

ಹಸಿ ಮೆಂತೆ ತಂಬ್ಳಿ ಮಾಡುವ ವಿಧಾನ:

  1. ಮೆಂತೆಯನ್ನು ತೊಳೆದು 4 ಘಂಟೆಗಳ ಕಾಲ ನೆನೆಸಿಡಿ. 
  2. ನಂತರ ನೆನೆಸಿದ ಮೆಂತೆಯನ್ನು ತೆಂಗಿನತುರಿಯೊಂದಿಗೆ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  3. ಅರೆದ ಮೆಂತೆಯನ್ನು ಒಂದು ಬಟ್ಟಲಿಗೆ ಹಾಕಿ. ಮಜ್ಜಿಗೆ ಅಥವಾ ಮೊಸರನ್ನು ಹಾಕಿ ಕಲಸಿ. 
  4. ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. ನಾನು 1 ಕಪ್ ನಷ್ಟು ಸೇರಿಸುತ್ತೇನೆ. 
  5. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ. ಅಥವಾ ತೆಳ್ಳಗೆ ಮಾಡಿ ಕುಡಿಯಿರಿ.

ಸೋಮವಾರ, ಜುಲೈ 11, 2016

Hasi majjige recipe in Kannada | ಹಸಿ ಮಜ್ಜಿಗೆ ಮಾಡುವ ವಿಧಾನ

Hasi majjige recipe in Kannada

Hasi majjige recipe in Kannada | ಹಸಿ ಮಜ್ಜಿಗೆ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಟೇಬಲ್ ಚಮಚ ಹುರಿಗಡಲೆ
  2. 1/2 ಚಮಚ ಸಾಸಿವೆ 
  3. 1 - 2 ಹಸಿರು ಮೆಣಸಿನಕಾಯಿ 
  4. 1/4 " ಉದ್ದ ಶುಂಠಿ 
  5. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು 
  6. 1/4 ಕಪ್ ತೆಂಗಿನ ತುರಿ 
  7. 1 ಕಪ್ ಮೊಸರು
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ
  2. 4 - 5 ಕರಿಬೇವಿನ ಎಲೆ
  3. ಒಂದು ಚಿಟಿಕೆ ಇಂಗು
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಹಸಿ ಮಜ್ಜಿಗೆ ಮಾಡುವ ವಿಧಾನ:

  1. ಒಂದು ಮಿಕ್ಸಿ ಜಾರಿಗೆ ಹುರಿಗಡಲೆ, ಸಾಸಿವೆ, ಹಸಿರು ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  2. ಉಪ್ಪು ಮತ್ತು ಮೊಸರು ಸೇರಿಸಿ. 
  3. ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ.

ಸೋಮವಾರ, ಮೇ 9, 2016

Kothambari soppu thambuli in kannada | ಕೊತ್ತಂಬರಿ ಸೊಪ್ಪಿನ ತಂಬುಳಿ ಮಾಡುವ ವಿಧಾನ

Kothambari soppu thambuli in kannada

Kothambari soppu thambuli in kannada | ಕೊತ್ತಂಬರಿ ಸೊಪ್ಪಿನ ತಂಬುಳಿ ಮಾಡುವ ವಿಧಾನ

ಕೊತ್ತಂಬರಿ ಸೊಪ್ಪಿನ ತಂಬುಳಿ ರುಚಿಕರ ಮತ್ತು ಒಂದು ವಿಶಿಷ್ಟ ಸ್ವಾದವನ್ನು ಹೊಂದಿದ ಅಡುಗೆಯಾಗಿದ್ದು ಅನ್ನದೊಂದಿಗೆ ಬಹಳ ಚೆನ್ನಾಗಿರುತ್ತದೆ. ತಾಜಾ ಕೊತ್ತಂಬರಿ ಸೊಪ್ಪು ಸಿಕ್ಕಿದಾಗ ಒಮ್ಮೆ ಮಾಡಿ ಸವಿಯಲು ಮರೆಯದಿರಿ.

ಕೊತ್ತಂಬರಿ ಸೊಪ್ಪು ತಂಬ್ಳಿ ವಿಡಿಯೋ


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 2 ಇಬ್ಬರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 ಸಣ್ಣ ಕಟ್ಟು ಕೊತ್ತಂಬರಿ ಸೊಪ್ಪು
  2. 1/2 ಟೀಸ್ಪೂನ್ ಜೀರಿಗೆ
  3. 1 ಹಸಿರು ಮೆಣಸಿನಕಾಯಿ
  4. 1/2 ಕಪ್ ತೆಂಗಿನತುರಿ
  5. 1 ಕಪ್ ಮೊಸರು
  6. 1 ಒಣ ಮೆಣಸಿನಕಾಯಿ
  7. 2 ಟೀಸ್ಪೂನ್ ತುಪ್ಪ ಅಥವಾ ಅಡುಗೆ ಎಣ್ಣೆ
  8. 1/4 ಟೀಸ್ಪೂನ್ ಸಾಸಿವೆ
  9. ಉಪ್ಪು ರುಚಿಗೆ ತಕ್ಕಷ್ಟು.

ಕೊತ್ತಂಬರಿ ಸೊಪ್ಪಿನ ತಂಬುಳಿ ಮಾಡುವ ವಿಧಾನ:

  1. ಕೊತ್ತಂಬರಿ ಸೊಪ್ಪನ್ನು ಆಯ್ದು ಸ್ವಚ್ಛ ಮಾಡಿಕೊಳ್ಳಿ. 
  2. ಸಣ್ಣದಾಗಿ ಕತ್ತರಿಸಿ. ಹಸಿರುಮೆಣಸಿನ ಕಾಯಿಯನ್ನೂ ಕತ್ತರಿಸಿ. 
  3. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆಯನ್ನು ಹುರಿಯಿರಿ. 
  4. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಸೊಪ್ಪು ಮತ್ತು ಹಸಿರುಮೆಣಸಿನ ಕಾಯಿಯನ್ನು ಹಾಕಿ.
  5. ಸೊಪ್ಪು ಬಾಡಿದ ಕೂಡಲೇ ಸ್ಟೋವ್ ಆಫ್ ಮಾಡಿ.
  6. ಹುರಿದ ಸೊಪ್ಪು, ಹಸಿರುಮೆಣಸಿನಕಾಯಿ ಮತ್ತು ಜೀರಿಗೆಯನ್ನು ಮಿಕ್ಸಿ ಜಾರಿಗೆ ಹಾಕಿ. ತೆಂಗಿನ ತುರಿಯನ್ನು ಸೇರಿಸಿ. 
  7. ನುಣ್ಣಗೆ ಅರೆಯಿರಿ. 
  8. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ. 
  9. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

Related Posts Plugin for WordPress, Blogger...