ದೊಡ್ಡಪತ್ರೆ ಹಸಿ ಎಲೆಗಳಿಂದ ತಯಾರಿಸಲಾದ ಸರಳ ಮತ್ತು ರುಚಿಕರ ತಂಬುಳಿ ಅಥವಾ ರಾಯಿತ ಇಲ್ಲಿದೆ. ಮೊಸರು ಮತ್ತು ತೆಂಗಿನಕಾಯಿ ಹಾಕಿ ತಯಾರಿಸಬಹುದಾದ ಈ ತಂಬುಳಿಯನ್ನು ಅನ್ನದ ಜೊತೆ ಸವಿಯಲು ಬಲುರುಚಿ. ವಿಶಿಷ್ಟ ರುಚಿ ಹೊಂದಿದ ಈ ಅಡುಗೆಯನ್ನು ಹೇಳಿಕೊಟ್ಟ ಅತ್ತೆಗೆ ಧನ್ಯವಾದಗಳು.
ದೊಡ್ಡಪತ್ರೆ ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಿರುವ ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದ್ದು, ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಸ್ಯದ ಬಗ್ಗೆ ಹೆಚ್ಚಿನ ಮಾಹಿತಿ, ವಿವಿಧ ಹೆಸರುಗಳು, ಔಷಧೀಯ ಗುಣಗಳು ಮತ್ತು ಇನ್ನಿತರ ಅಡುಗೆಗಳನ್ನು ಓದಲು ನಮ್ಮ "ದೊಡ್ಡಪತ್ರೆಯ ಹಲವಾರು ಅಡುಗೆಗಳು" ಪೋಸ್ಟನ್ನು ವೀಕ್ಷಿಸಿ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: ಇಬ್ಬರಿಗೆ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: ಇಬ್ಬರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 15-20 ದೊಡ್ಡಪತ್ರೆ ಎಲೆಗಳು
- 1/2 ಕಪ್ ತೆಂಗಿನತುರಿ
- 1 ಕಪ್ ಮೊಸರು
- 1 ಒಣ ಮೆಣಸಿನಕಾಯಿ
- 1 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ
- 1/4 ಟೀಸ್ಪೂನ್ ಸಾಸಿವೆ
- ಉಪ್ಪು ರುಚಿಗೆ ತಕ್ಕಷ್ಟು.
ದೊಡ್ಡಪತ್ರೆ ಹಸಿ ತಂಬುಳಿ ಮಾಡುವ ವಿಧಾನ:
- ದೊಡ್ಡಪತ್ರೆ ಎಲೆಗಳನ್ನು ತೊಳೆದು, ನೀರಾರಸಿ, ಸಣ್ಣಗೆ ಕತ್ತರಿಸಿ. ಕತ್ತರಿಸಿದ ಎಲೆಗಳನ್ನು ಒಂದು ಪಾತ್ರೆಗೆ ಹಾಕಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ, 5 ನಿಮಿಷಗಳ ಕಾಲ ಹಾಗೆ ಬಿಡಿ.
- ತೆಂಗಿನಕಾಯಿಯನ್ನು ಅರೆದು ಅದೇ ಪಾತ್ರೆಗೆ ಹಾಕಿ. ಮೊಸರು ಮತ್ತು ನೀರು ಸೇರಿಸಿ ಮಗುಚಿ. ಒಂದು ಚಮಚ ಎಣ್ಣೆ ಅಥವಾ ತುಪ್ಪದಲ್ಲಿ ಸಾಸಿವೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ