Vegetable salad recipe in Kannada | ತರಕಾರಿ ಸಾಲಡ್ ಮಾಡುವ ವಿಧಾನ
ತರಕಾರಿ ಸಲಾಡ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4 ಕಪ್ ಕಾಬುಲ್ ಕಡ್ಲೆ
- 1/4 ಕಪ್ ಸಣ್ಣದಾಗಿ ಹೆಚ್ಚಿದ ಈರುಳ್ಳಿ
- 1/4 ಕಪ್ ಸಣ್ಣದಾಗಿ ಹೆಚ್ಚಿದ ಟೊಮೆಟೊ
- 1/4 ಕಪ್ ತುರಿದ ಕ್ಯಾರೆಟ್
- 1/4 ಕಪ್ ತುರಿದ ಮೂಲಂಗಿ
- 1/4 ಕಪ್ ಸಣ್ಣದಾಗಿ ಹೆಚ್ಚಿದ ಸೌತೆಕಾಯಿ
- 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- 1 ಟೇಬಲ್ ಚಮಚ ಹುರಿದ ಎಳ್ಳು
- 1/2 - 1 ಟೀಸ್ಪೂನ್ ಕರಿಮೆಣಸಿನಪುಡಿ
- 1 - 2 ಟೀಸ್ಪೂನ್ ನಿಂಬೆರಸ
- ಉಪ್ಪು ರುಚಿಗೆ ತಕ್ಕಷ್ಟು
- ಒಂದು ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ
ತರಕಾರಿ ಸಾಲಡ್ ಮಾಡುವ ವಿಧಾನ:
- ಕಡ್ಲೆಯನ್ನು 7 - 8 ಘಂಟೆಗಳ ಕಾಲ ನೆನೆಸಿ.
- ನೆನೆಸಿದ ನಂತ್ರ ಸ್ವಲ್ಪ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಮೆತ್ತಗೆ ಬೇಯಿಸಿಕೊಳ್ಳಿ.
- ಒಂದು ಪಾತ್ರೆಯಲ್ಲಿ ಹೆಚ್ಚಿದ ಈರುಳ್ಳಿ, ಹೆಚ್ಚಿದ ಟೊಮೆಟೊ, ತುರಿದ ಮೂಲಂಗಿ ಮತ್ತು ತುರಿದ ಕ್ಯಾರೆಟ್ ತೆಗೆದುಕೊಳ್ಳಿ.
- ಬೇಯಿಸಿದ ಕಡ್ಲೆ ಸೇರಿಸಿ.
- ಹುರಿದ ಎಳ್ಳು ಉದುರಿಸಿ.
- ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ.
- ರುಚಿಗೆ ತಕ್ಕಂತೆ ಉಪ್ಪು ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿ.
- ನಿಂಬೆರಸವನ್ನು ಸೇರಿಸಿ.
- ಕೊನೆಯಲ್ಲಿ ಒಂದು ಚಮಚ ಎಣ್ಣೆ ಸೇರಿಸಿ ಕಲಸಿ.
- ಸವಿದು ಆನಂದಿಸಿ. ಇದನ್ನು ಕೂಡಲೇ ಅಥವಾ ಸ್ವಲ್ಪ ಹೊತ್ತು ಬಿಟ್ಟು ತಿನ್ನಬಹುದು. ಈ ಸಲಾಡ್ ಆರೋಗ್ಯಕ್ಕೆ ಮತ್ತು ದೇಹದ ತೂಕ ಕಾಪಾಡಲು ಬಲು ಸಹಾಯಕಾರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ