ಕೋಸಂಬರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೋಸಂಬರಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಮಾರ್ಚ್ 22, 2021

Hesarukalu kosambari recipe in kannada | ಹೆಸರುಕಾಳು ಕೋಸಂಬರಿ ಮಾಡುವ ವಿಧಾನ

 

Hesarukalu kosambari recipe in kannada | ಹೆಸರುಕಾಳು ಕೋಸಂಬರಿ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೊಳಕೆ ಕಟ್ಟಿದ ಹೆಸರುಕಾಳು 
  2. 1/2 ಕಪ್ ತುರಿದ ಕ್ಯಾರಟ್
  3. 1/2 ಕಪ್ ಸಣ್ಣಗೆ ಹೆಚ್ಚಿದ ಸೌತೆಕಾಯಿ
  4. 1/4 ಕಪ್  ಹಸಿ ತೆಂಗಿನ ತುರಿ
  5. ಸ್ವಲ್ಪ ದಾಳಿಂಬೆ ಬೀಜ (ಬೇಕಾದಲ್ಲಿ)
  6. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  7. 1/2 - 1 ಟೀಸ್ಪೂನ್ ನಿಂಬೆರಸ (ಅಥವಾ ಸಣ್ಣಗೆ ಹೆಚ್ಚಿದ ಒಂದು ಟೊಮೇಟೊ)
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಹಸಿಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 2 ಟೀಸ್ಪೂನ್ ಅಡುಗೆ ಎಣ್ಣೆ
  4. ಚಿಟಿಕೆ ಇಂಗು

ಹೆಸರುಕಾಳು ಕೋಸಂಬರಿ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಮೊಳಕೆ ಹೆಸರುಕಾಳು, ತುರಿದ ಕ್ಯಾರಟ್, ಕೊಚ್ಚಿದ ಸೌತೆಕಾಯಿ, ದಾಳಿಂಬೆ ಬೀಜ, ಕೊತ್ತಂಬರಿ ಸೊಪ್ಪು ಮತ್ತು ತೆಂಗಿನ ತುರಿಯನ್ನು ತೆಗೆದು ಕೊಳ್ಳಿ. 
  2. ಸ್ವಲ್ಪ ಉಪ್ಪು ಹಾಕಿ. ಬೇಕಾದಲ್ಲಿ  ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  3. ನಂತರ ಎಣ್ಣೆ, ಹಸಿರುಮೆಣಸಿನಕಾಯಿ, ಇಂಗು  ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ಚೆನ್ನಾಗಿ ಕಲಸಿ ಬಡಿಸಿ.

ಶುಕ್ರವಾರ, ಆಗಸ್ಟ್ 25, 2017

kadlebele cucumber kosambari recipe in kannada | ಕಡ್ಲೆಬೇಳೆ ಸೌತೆಕಾಯಿ ಕೋಸಂಬರಿ

Kadlebele cucumber kosambari recipe in kannada

Kadlebele cucumber kosambari recipe in kannada | ಕಡ್ಲೆಬೇಳೆ ಸೌತೆಕಾಯಿ ಕೋಸಂಬರಿ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 4 ಟೇಬಲ್ ಚಮಚ ಕಡ್ಲೆಬೇಳೆ
  2. 1/2 ಸಣ್ಣಗೆ ಕೊಚ್ಚಿದ ಸೌತೆಕಾಯಿ
  3. 2 ಟೇಬಲ್ ಚಮಚ ತೆಂಗಿನ ತುರಿ
  4. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು (ಬೇಕಾದಲ್ಲಿ)
  5. 1/2 ಹಸಿಮೆಣಸಿನಕಾಯಿ (ಬೇಕಾದಲ್ಲಿ)
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ
  4. ಚಿಟಿಕೆ ಇಂಗು

ಮಾಡುವ ವಿಧಾನ:

  1. ಕಡ್ಲೆಬೇಳೆಯನ್ನು 2-3 ಗಂಟೆಗಳ ಕಾಲ ನೆನೆಸಿ. ನೆನೆಸುವಾಗ ೧/೪ ಚಮಚದಷ್ಟು ಉಪ್ಪು ಹಾಕಿ ನೆನೆಸಿ. 
  2. ಸೌತೆಕಾಯಿಯನ್ನು ಸಣ್ಣಗೆ ಕೊಚ್ಚಿಟ್ಟುಕೊಳ್ಳಿ.
  3. ಒಂದು ಬಟ್ಟಲಿನಲ್ಲಿ ನೆನೆಸಿದ ಕಡ್ಲೆಬೇಳೆ, ಕೊಚ್ಚಿದ ಸೌತೆಕಾಯಿ ಮತ್ತು ತೆಂಗಿನ ತುರಿಯನ್ನು ತೆಗೆದು ಕೊಳ್ಳಿ. 
  4. ಸ್ವಲ್ಪ ಉಪ್ಪು ಹಾಕಿ. ಬೇಕಾದಲ್ಲಿ ಹಸಿರುಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  5. ನಂತರ ಒಣ ಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ಚೆನ್ನಾಗಿ ಕಲಸಿ ಬಡಿಸಿ.

ಸೋಮವಾರ, ಅಕ್ಟೋಬರ್ 24, 2016

Avarekalu usli recipe in Kannada | ಅವರೇಕಾಳು ಉಸ್ಲಿ ಮಾಡುವ ವಿಧಾನ

Avarekalu usli recipe in Kannada

Avarekalu usli recipe in Kannada | ಅವರೇಕಾಳು ಉಸ್ಲಿ ಮಾಡುವ ವಿಧಾನ 


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅವರೇಕಾಳು
  2. 1 ಟೇಬಲ್ ಚಮಚ ಅಡುಗೆ ಎಣ್ಣೆ
  3. 1/4 ಟೀಸ್ಪೂನ್ ಸಾಸಿವೆ 
  4. 1/4 ಟೀಸ್ಪೂನ್ ಜೀರಿಗೆ
  5. 1/2 ಒಣಮೆಣಸಿನಕಾಯಿ ಚೂರು ಮಾಡಿದ್ದೂ
  6. 4 - 5 ಕರಿಬೇವಿನ ಎಲೆ
  7. 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  8. ಒಂದು ಚಿಟಿಕೆ ಅರಿಶಿನ ಪುಡಿ
  9. ಒಂದು ದೊಡ್ಡ ಚಿಟಿಕೆ ಇಂಗು
  10. 1 ಟೀಸ್ಪೂನ್ ಲಿಂಬೆ ರಸ (ಬೇಕಾದಲ್ಲಿ)
  11. ಉಪ್ಪು ರುಚಿಗೆ ತಕ್ಕಷ್ಟು.

ಮಸಾಲೆ ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನ ತುರಿ 
  2. ಸಣ್ಣ ಚೂರು ಶುಂಠಿ
  3. 2 - 3 ಹಸಿರು ಮೆಣಸಿನಕಾಯಿ 
  4. ಸ್ವಲ್ಪ ಕೊತಂಬರಿ ಸೊಪ್ಪು

ಅವರೇಕಾಳು ಉಸ್ಲಿ ಮಾಡುವ ವಿಧಾನ:

  1. ಅವರೇಕಾಳನ್ನು ಕುಕ್ಕರ್ ನಲ್ಲಿ 3 - 4 ವಿಷಲ್ ಮಾಡಿ ಚೆನ್ನಾಗಿ ಬೇಯಿಸಿಕೊಳ್ಳಿ.
  2. ತೆಂಗಿನತುರಿ, ಶುಂಠಿ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ, ಮಸಾಲೆ ಅರೆದಿಟ್ಟುಕೊಳ್ಳಿ. 
  3. ನಂತರ ಒಂದು ಬಾಣಲೆಯನ್ನು ಬಿಸಿ ಮಾಡಿ. ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ತಯಾರಿಸಿ. 
  4. ನಂತರ ಒಗ್ಗರಣೆಗೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ
  5. ಜೊತೆಯಲ್ಲಿ ಅರಿಶಿನ ಪುಡಿ ಮತ್ತು ಇಂಗು ಸೇರಿಸಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  6. ಅದಕ್ಕೆ ಬೇಯಿಸಿದ ಅವರೇಕಾಳನ್ನು ಹಾಕಿ ಮಗುಚಿ. 
  7. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  8. ಅರೆದ ಮಸಾಲೆ ಸೇರಿಸಿ, ಚೆನ್ನಾಗಿ ಮಗುಚಿ ಒಂದು ನಿಮಿಷ ಬೇಯಿಸಿ. 
  9.  ಸ್ಟವ್ ಆಫ್ ಮಾಡಿ. 
  10. ಕೊನೆಯಲ್ಲಿ ಬೇಕಾದಲ್ಲಿ ಲಿಂಬೆರಸ ಸೇರಿಸಿ. ಚಹಾದೊಂದಿಗೆ ಸವಿದು ಆನಂದಿಸಿ. ಅನ್ನ ಅಥವಾ ಚಪಾತಿಯೊಂದಿಗೂ ಬಡಿಸಬಹುದು. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಆಗಸ್ಟ್ 4, 2016

Kara kadle usli recipe in Kannada | ಕಡ್ಲೆ ಉಸ್ಲಿ ಮಾಡುವ ವಿಧಾನ

Kara kadle usli recipe in Kannada | ಕಡ್ಲೆ ಉಸುಳಿ ಮಾಡುವ ವಿಧಾನ

ಕಡ್ಲೆ ಉಸ್ಲಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕಡಲೆ ಕಾಳು
  2. 2 ಟೇಬಲ್ ಚಮಚ ಅಡುಗೆ ಎಣ್ಣೆ
  3. 1/4 ಟೀಸ್ಪೂನ್ ಸಾಸಿವೆ 
  4. 1 ಕೆಂಪು ಮೆಣಸಿನಕಾಯಿ 
  5. 1 ಟೀಸ್ಪೂನ್ ಉದ್ದಿನ ಬೇಳೆ
  6. ಒಂದು ಚಿಟಿಕೆ ಅರಿಶಿನ ಪುಡಿ
  7. ಒಂದು ದೊಡ್ಡ ಚಿಟಿಕೆ ಇಂಗು
  8. 4 - 5 ಕರಿಬೇವಿನ ಎಲೆ
  9. 1 ಟೀಸ್ಪೂನ್ ಲಿಂಬೆ ರಸ (ಬೇಕಾದಲ್ಲಿ)
  10. ಉಪ್ಪು ರುಚಿಗೆ ತಕ್ಕಷ್ಟು.

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ 
  2. 2 - 4 ಹಸಿರು ಮೆಣಸಿನಕಾಯಿ 
  3. ಒಂದು ಸಣ್ಣ ಹಿಡಿ ಕೊತಂಬರಿ ಸೊಪ್ಪು 
  4. 1 cm ಉದ್ದದ ಶುಂಠಿ

ಖಾರ ಕಡ್ಲೆ ಉಸ್ಲಿ ಮಾಡುವ ವಿಧಾನ:

  1. ಕಡ್ಲೆಕಾಳನ್ನು 7 - 8 ಘಂಟೆಗಳ ಕಾಲ ನೆನೆಸಿ. ಕಡ್ಲೆ ಮುಚ್ಚುವಷ್ಟು ನೀರು ಹಾಕಿ ಕುಕ್ಕರ್ ನಲ್ಲಿ 4 - 5 ವಿಷಲ್ ಮಾಡಿ ಚೆನ್ನಾಗಿ ಬೇಯಿಸಿಕೊಳ್ಳಿ.
  2. ಆ ಸಮಯದಲ್ಲಿ ತೆಂಗಿನ ತುರಿ, ಹಸಿರು ಮೆಣಸಿನಕಾಯಿ, ಕೊತಂಬರಿ ಸೊಪ್ಪು ಮತ್ತು ಶುಂಠಿಯನ್ನು ನೀರು ಹಾಕದೆ ಮಿಕ್ಸಿಯಲ್ಲಿ ಪುಡಿ ಮಾಡಿ ಮಸಾಲೆ ತಯಾರಿಸಿಟ್ಟು ಕೊಳ್ಳಿ. 
  3. ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕೆಂಪು ಮೆಣಸಿನಕಾಯಿ, ಅರಿಶಿನ ಪುಡಿ, ಇಂಗು ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ.
  4. ಅದಕ್ಕೆ ಬೇಯಿಸಿದ ಕಡ್ಲೆಯನ್ನು ಬೇಯಿಸಿದ ನೀರು ಸಹಿತ ಹಾಕಿ. 
  5. ಅರೆದ ಮಸಾಲೆ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಗುಚಿ. 
  6. ನೀರಾರುತ್ತಾ ಬಂದಾಗ ಸ್ಟವ್ ಆಫ್ ಮಾಡಿ. ಕೊನೆಯಲ್ಲಿ ಬೇಕಾದಲ್ಲಿ ಲಿಂಬೆರಸ ಸೇರಿಸಿ. ಚೆನ್ನಾಗಿ ಮಗುಚಿ ಚಹಾದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Kadle usli recipe in Kannada | ಮಲೆನಾಡು ಶೈಲಿಯ ಕಡ್ಲೆ ಉಸುಳಿ ಮಾಡುವ ವಿಧಾನ

Kadle usli recipe in Kannada

Kadle usli recipe in Kannada | ಮಲೆನಾಡು ಶೈಲಿಯ ಕಡ್ಲೆ ಉಸುಳಿ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಕಡಲೆ ಕಾಳು
  2. 1 - 2 ಟೇಬಲ್ ಚಮಚ ಬೆಲ್ಲ 
  3. 2 ಟೇಬಲ್ ಚಮಚ ಅಡುಗೆ ಎಣ್ಣೆ
  4. 1/4 ಟೀಸ್ಪೂನ್ ಸಾಸಿವೆ 
  5. 1 ಕೆಂಪು ಮೆಣಸಿನಕಾಯಿ 
  6. 1 ಟೀಸ್ಪೂನ್ ಉದ್ದಿನ ಬೇಳೆ
  7. ಒಂದು ಚಿಟಿಕೆ ಅರಿಶಿನ ಪುಡಿ
  8. ಒಂದು ದೊಡ್ಡ ಚಿಟಿಕೆ ಇಂಗು
  9. 4 - 5 ಕರಿಬೇವಿನ ಎಲೆ
  10. ಉಪ್ಪು ರುಚಿಗೆ ತಕ್ಕಷ್ಟು.

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ 
  2. 2 - 4 ಕೆಂಪು ಮೆಣಸಿನಕಾಯಿ 
  3. 1/4 ಟೀಸ್ಪೂನ್ ಸಾಸಿವೆ

ಮಲೆನಾಡು ಶೈಲಿಯ ಕಡ್ಲೆ ಉಸುಳಿ ಮಾಡುವ ವಿಧಾನ:

  1. ಕಡ್ಲೆಕಾಳನ್ನು 7 - 8 ಘಂಟೆಗಳ ಕಾಲ ನೆನೆಸಿ. ಕಡ್ಲೆ ಮುಚ್ಚುವಷ್ಟು ನೀರು ಹಾಕಿ ಕುಕ್ಕರ್ ನಲ್ಲಿ 4 - 5 ವಿಷಲ್ ಮಾಡಿ ಚೆನ್ನಾಗಿ ಬೇಯಿಸಿಕೊಳ್ಳಿ.
  2. ಆ ಸಮಯದಲ್ಲಿ ತೆಂಗಿನ ತುರಿ, ಕೆಂಪು ಮೆಣಸಿನಕಾಯಿ ಮತ್ತು ಸಾಸಿವೆಯನ್ನು ನೀರು ಹಾಕದೆ ಮಿಕ್ಸಿಯಲ್ಲಿ ಪುಡಿ ಮಾಡಿ ಮಸಾಲೆ ತಯಾರಿಸಿಟ್ಟು ಕೊಳ್ಳಿ. 
  3. ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕೆಂಪು ಮೆಣಸಿನಕಾಯಿ, ಅರಿಶಿನ ಪುಡಿ, ಇಂಗು ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ.
  4. ಅದಕ್ಕೆ ಬೇಯಿಸಿದ ಕಡ್ಲೆಯನ್ನು ಬೇಯಿಸಿದ ನೀರು ಸಹಿತ ಹಾಕಿ. 
  5. ಅರೆದ ಮಸಾಲೆ, ಬೆಲ್ಲ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಗುಚಿ. 
  6. ನೀರಾರುತ್ತಾ ಬಂದಾಗ ಸ್ಟವ್ ಆಫ್ ಮಾಡಿ. ಈ ಉಸುಳಿ ಸ್ವಲ್ಪ ನೀರು ನೀರಾಗಿರಬೇಕು.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಅಕ್ಟೋಬರ್ 22, 2015

Hesarubele-carrot kosambari | ಹೆಸರುಬೇಳೆ - ಕ್ಯಾರೆಟ್ ಕೋಸಂಬರಿ




Hesarubele-carrot kosambari recipe Kannada | ಹೆಸರುಬೇಳೆ - ಕ್ಯಾರೆಟ್ ಕೋಸಂಬರಿ

ಹೆಸರುಬೇಳೆ ಮತ್ತು ಕ್ಯಾರೆಟ್ ಕೋಸಂಬರಿಯಲ್ಲಿ ನೆನೆಸಿದ ಹೆಸರುಬೇಳೆ ಮತ್ತು ತುರಿದ ಕ್ಯಾರೆಟ್ ಮುಖ್ಯ ಪದಾರ್ಥಗಳಾಗಿವೆ. ಕೋಸಂಬರಿ ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳಲ್ಲೊಂದಾಗಿದೆ ಹಾಗೂ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಈ ಅಡುಗೆ ಚಾಲ್ತಿಯಲ್ಲಿದೆ. ಶುಭ ಸಮಾರಂಭಗಳಲ್ಲಿ, ಅತಿಥಿಗಳು ಬಂದಾಗ, ಸುಲಭವಾಗಿ ಮಾಡಬಲ್ಲ ವಿಶೇಷ ಅಡುಗೆ ಇದಾಗಿದೆ.


ತಯಾರಿ ಸಮಯ: 2 ಗಂಟೆ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : ಇಬ್ಬರಿಗೆ
ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
  1. 1/2 ಕಪ್ ಹೆಸರುಬೇಳೆ
  2. 1 ತುರಿದ ಕ್ಯಾರೆಟ್
  3. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  4. 2 ಟೇಬಲ್ ಸ್ಪೂನ್ ತೆಂಗಿನತುರಿ
  5. 1/2 ಟೀಸ್ಪೂನ್ ನಿಂಬೇ ರಸ
  6. 1 ಹಸಿಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು (ಬೇಕಾದಲ್ಲಿ)
  7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ

ಮಾಡುವ ವಿಧಾನ:

  1. ಹೆಸರುಬೇಳೆಯನ್ನು 2-3 ಗಂಟೆಗಳ ಕಾಲ ನೆನೆಸಿ. ಕ್ಯಾರೆಟ್, ತೆಂಗಿನತುರಿ, ಹಸಿಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪಿನಂತ ಪದಾರ್ಥಗಳನ್ನು ಸಿದ್ಧ ಮಾಡಿಟ್ಟುಕೊಳ್ಳಿ.
  2. ಈಗ ಒಂದು ಬೌಲ್ ತೆಗೆದುಕೊಂಡು, ಸಿದ್ಧ ಮಾಡಿಟ್ಟುಕೊಂಡ ಎಲ್ಲಾ ಪದಾರ್ಥಗಳನ್ನು ಹಾಕಿ, ಉಪ್ಪು ಮತ್ತು ನಿಂಬೆ ರಸ ಸೇರಿಸಿ ಕಲಸಿ. ನಂತರ ಒಣ ಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಕೊಡಿ.
Related Posts Plugin for WordPress, Blogger...