Hesarukaalu usli recipe in Kannada | ಹೆಸರು ಕಾಳು ಉಸ್ಲಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಹೆಸರು ಕಾಳು
- 2 ಚಮಚ ಅಡುಗೆ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- ಒಂದು ಚಿಟಿಕೆ ಅರಿಶಿನ ಪುಡಿ
- ಒಂದು ದೊಡ್ಡ ಚಿಟಿಕೆ ಇಂಗು
- 4 - 5 ಕರಿಬೇವಿನ ಎಲೆ
- ಒಂದು ಸಣ್ಣ ಚೂರು ಶುಂಠಿ
- 1 - 2 ಹಸಿರು ಮೆಣಸಿನಕಾಯಿ ಅಥವಾ ಒಣಮೆಣಸಿನಕಾಯಿ
- 2 ಟೇಬಲ್ ಚಮಚ ತೆಂಗಿನ ತುರಿ
- 1 ಟೇಬಲ್ ಚಮಚ ಕೊತಂಬರಿ ಸೊಪ್ಪು
- 1 ಟೀಸ್ಪೂನ್ ಲಿಂಬೆ ರಸ (ಬೇಕಾದಲ್ಲಿ)
- ಉಪ್ಪು ರುಚಿಗೆ ತಕ್ಕಷ್ಟು.
ಹೆಸರು ಕಾಳು ಉಸ್ಲಿ ಮಾಡುವ ವಿಧಾನ:
- ಹೆಸರುಕಾಳನ್ನು ನೆನೆಸಿ ಮೊಳಕೆ ಕಟ್ಟಿಸಿಕೊಳ್ಳಿ.
- ಬೇಕಾದಷ್ಟು ನೀರು ಹಾಕಿ ಕುಕ್ಕರ್ ನಲ್ಲಿ ಮೆತ್ತಗೆ ಬೇಯಿಸಿಕೊಳ್ಳಿ ಆದರೆ ಮುದ್ದೆಯಾಗುವುದು ಬೇಡ.
- ಬೇಯಿಸಿದ ನಂತರ ನೀರು ಬಸಿದು ಪಕ್ಕಕ್ಕಿಡಿ. ನಾನು ಈ ನೀರಿನಿಂದ ಸಾರು ಮಾಡುತ್ತೇನೆ.
- ನಂತರ ಒಂದು ಬಾಣಲೆಯನ್ನು ತೆಗೆದುಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ ಮತ್ತು ಜೀರಿಗೆ ಹಾಕಿ.
- ಸಾಸಿವೆ ಸಿಡಿದ ಮೇಲೆ ಹಸಿರು ಮೆಣಸಿನಕಾಯಿ, ಅರಿಶಿನ ಪುಡಿ, ಇಂಗು, ಕತ್ತರಿಸಿದ ಶುಂಠಿ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ತಯಾರಿಸಿ.
- ಅದಕ್ಕೆ ಬೇಯಿಸಿದ ಹೆಸರುಕಾಳನ್ನು ಹಾಕಿ ಮಗುಚಿ.
- ಉಪ್ಪು, ತೆಂಗಿನ ತುರಿ ಮತ್ತು ಕೊತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ.
- ಕೊನೆಯಲ್ಲಿ ಬೇಕಾದಲ್ಲಿ ಲಿಂಬೆರಸ ಸೇರಿಸಿ. ಚಹಾದೊಂದಿಗೆ ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ