Potato upkari recipe in Kannada | ಆಲೂ ಉಪ್ಕರಿ ಅಥವಾ ಬಟಾಟೆ ತಳಸನಿ ಮಾಡುವ ವಿಧಾನ
ಆಲೂ ಉಪ್ಕರಿ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):
- 3 ಮಧ್ಯಮ ಗಾತ್ರದ ಆಲೂಗಡ್ಡೆ
- 1/2 ಚಮಚ ಸಾಸಿವೆ
- ದೊಡ್ಡ ಚಿಟಿಕೆ ಅರಿಶಿನ ಪುಡಿ (ಬೇಕಾದಲ್ಲಿ)
- ಎರಡು ದೊಡ್ಡ ಚಿಟಿಕೆ ಇಂಗು
- ಸ್ವಲ್ಪ ಕರಿಬೇವಿನ ಎಲೆ
- 1/2 ಟೀಸ್ಪೂನ್ ಅಚ್ಚಖಾರದ ಪುಡಿ
- ನಿಮ್ಮ ರುಚಿ ಪ್ರಕಾರ ಉಪ್ಪು
- 2 ಟೇಬಲ್ ಚಮಚ ಅಡುಗೆ ಎಣ್ಣೆ
ಆಲೂ ಉಪ್ಕರಿ ಅಥವಾ ಬಟಾಟೆ ತಳಸನಿ ಮಾಡುವ ವಿಧಾನ:
- ಮೊದಲಿಗೆ ಆಲೂಗಡ್ಡೆ ಸಿಪ್ಪೆ ತೆಗೆದು ತೆಳು ಮತ್ತು ಉದ್ದುದ್ದವಾಗಿ ಕತ್ತರಿಸಿ.
- ನಂತ್ರ ಕತ್ತರಿಸಿದ ಆಲೂಗಡ್ಡೆಯನ್ನು ನೀರಿನಲ್ಲಿ ನಾಲ್ಕೈದು ನಿಮಿಷ ಹಾಕಿಡಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
- ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿಕೊಳ್ಳಿ.
- ಸಾಸಿವೆ ಸಿಡಿದ ಮೇಲೆ ಸ್ಟವ್ ಆಫ್ ಮಾಡಿ. ಅರಿಶಿನ (ಬೇಕಾದಲ್ಲಿ), ಇಂಗು ಮತ್ತು ಅಚ್ಚಖಾರದ ಪುಡಿ ಸೇರಿಸಿ ಮಗುಚಿ.
- ನೀರಲ್ಲಿ ಹಾಕಿಟ್ಟ ಆಲೂಗಡ್ಡೆಯನ್ನು ಸೇರಿಸಿ.
- ಸ್ಟವ್ ಆನ್ ಮಾಡಿ, ದೊಡ್ಡ ಉರಿಯಲ್ಲಿ ಒಂದು ನಿಮಿಷ ಚೆನ್ನಾಗಿ ಮಗುಚಿ.
- ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.
- ಸ್ವಲ್ಪ ನೀರು ಸೇರಿಸಿ, ಮುಚ್ಚಳ ಮುಚ್ಚಿ ಆಲೂಗಡ್ಡೆ ಮೆತ್ತಗಾಗುವವರೆಗೆ ಬೇಯಿಸಿ. ನೀರು ಹಾಕದೇ ಹಾಗೇ ಬೇಯಿಸಬಹುದು.
- ಒಂದೆರಡು ಬಾರಿ ಮಗುಚಿ ಆಲೂಗಡ್ಡೆ ಬೆಂದಿದೆಯಾ ಎಂದು ನೋಡಿ. ನನಗೆ ಸುಮಾರು ಹತ್ತು ನಿಮಷ ಬೇಕಾಯಿತು.
- ಬೆಂದ ಕೂಡಲೇ ಸ್ಟವ್ ಆಫ್ ಮಾಡಿ. ನೀರಿದ್ದಲ್ಲಿ ಉರಿ ಜಾಸ್ತಿ ಮಾಡಿ ನೀರಾರಿಸಿ. ಜಾಸ್ತಿ ಬೇಯಿಸಬೇಡಿ. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ