Menthe hittu recipe in Kannada | ಮೆಂತೆ ಹಿಟ್ಟು ಮಾಡುವ ವಿಧಾನ
ಮೆಂತೆ ಹಿಟ್ಟು ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಕಡ್ಲೆಬೇಳೆ
- 1/4 ಕಪ್ ಉದ್ದಿನಬೇಳೆ
- 1/4 ಕಪ್ ಹೆಸರು ಬೇಳೆ
- 1/4 ಕಪ್ ತೊಗರಿಬೇಳೆ
- 1/4 ಕಪ್ ಗಿಂತ ಸ್ವಲ್ಪ ಕಡಿಮೆ ಗೋಧಿ ಅಥವಾ ಗೋಧಿನುಚ್ಚು
- 2 ಟೀಸ್ಪೂನ್ ಅಕ್ಕಿ
- 1 ಟೀಸ್ಪೂನ್ ಕೊತ್ತಂಬರಿ ಬೀಜ
- 3/4 ಟೀಸ್ಪೂನ್ ಜೀರಿಗೆ
- 3/4 ಟೀಸ್ಪೂನ್ ಮೆಂತೆ
- 1/4 ಟೀಸ್ಪೂನ್ ಅರಿಶಿನ
- ಉಪ್ಪು ರುಚಿಗೆ ತಕ್ಕಷ್ಟು
ಮೆಂತೆ ಹಿಟ್ಟು ಮಾಡುವ ವಿಧಾನ:
- ಎಲ್ಲ ಪದಾರ್ಥಗಳನ್ನು ಅಳತೆ ಪ್ರಕಾರ ತೆಗೆದುಕೊಳ್ಳಿ.
- ಮೊದಲಿಗೆ ಕಡಲೆಬೇಳೆಯನ್ನು ಮಧ್ಯಮ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರವರೆಗೆ ಹುರಿದು ತೆಗೆದಿಡಿ.
- ನಂತರ ಹೆಸರು ಬೇಳೆ, ಆಮೇಲೆ ತೊಗರಿಬೇಳೆ, ನಂತರ ಉದ್ದಿನ ಬೇಳೆ ಹೀಗೆ ಎಲ್ಲ ಬೇಳೆ ಗಳನ್ನು ಕಂದು ಬಣ್ಣ ಬರುವವರೆಗೆ ಹುರಿದು ತೆಗೆದಿಡಿ.
- ಗೋಧಿ ಅಥವಾ ಗೋಧಿ ನುಚ್ಚನ್ನು ಸಹ ಹುರಿದು ತೆಗೆದಿಡಿ.
- ಕೊನೆಯಲ್ಲಿ ಉಳಿದ ಪದಾರ್ಥಗಳನ್ನು (ಅಕ್ಕಿ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಮೆಂತೆ) ಸಣ್ಣ ಉರಿಯಲ್ಲಿ ಹುರಿದು ತೆಗೆದಿಡಿ.
- ಸ್ಟವ್ ಆಫ್ ಮಾಡಿ, ಅರಿಶಿನ ಪುಡಿ ಸೇರಿಸಿ ಮಗುಚಿ.
- ಎಲ್ಲ ಹುರಿದ ಪದಾರ್ಥಗಳನ್ನು ಸೇರಿಸಿ, ಉಪ್ಪು ಸೇರಿಸಿ, ಬಿಸಿ ಆರಲು ಬಿಡಿ.
- ಹುರಿದ ಎಲ್ಲ ಪದಾರ್ಥಗಳು ತಣ್ಣಗೆ ಆದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ.
- ಬಿಸಿ ಅನ್ನ ಮತ್ತು ತುಪ್ಪದ ಜೊತೆ ಕಲಸಿ ತಿನ್ನಿ. ಅಥವಾ ಗೊಜ್ಜು ಮಾಡಬಹುದು.
- ಗೊಜ್ಜು ಮಾಡಲು, ಒಂದು ಬೌಲ್ ನಲ್ಲಿ ಮೆಂತೆ ಹಿಟ್ಟು, ರುಚಿಗೆ ತಕ್ಕಂತೆ ಉಪ್ಪು, ಹುಳಿ ಮತ್ತು ಬೆಲ್ಲ ತೆಗೆದುಕೊಂಡು, ಅಗತ್ಯವಿದ್ದಷ್ಟು ನೀರು ಹಾಕಿ ಕಲಸಿ. ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ