Badanekayi mosaru gojju recipe in Kannada | ಬದನೇಕಾಯಿ ಮೊಸರು ಗೊಜ್ಜು ಮಾಡುವ ವಿಧಾನ
ಬದನೇಕಾಯಿ ಮೊಸರು ಗೊಜ್ಜು ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/4kg ಸಣ್ಣ ಬದನೇಕಾಯಿ (ಅಥವಾ ಬೇರೆ ಯಾವುದೇ ಬದನೇಕಾಯಿ)
- 1 - 2 ಹಸಿರು ಮೆಣಸಿನಕಾಯಿ
- ಉಪ್ಪು ರುಚಿಗೆ ತಕ್ಕಷ್ಟು
- 1 ಕಪ್ ಮೊಸರು
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1 ಟೇಬಲ್ ಚಮಚ ಅಡುಗೆ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- 1/2 ಒಣ ಮೆಣಸಿನಕಾಯಿ
- 1 ಟೀಸ್ಪೂನ್ಉದ್ದಿನಬೇಳೆ
- ಒಂದು ಚಿಟಿಕೆ ಇಂಗು
- ಸ್ವಲ್ಪ ಕರಿಬೇವು
ಬದನೇಕಾಯಿ ಮೊಸರು ಗೊಜ್ಜು ಮಾಡುವ ವಿಧಾನ:
- ಬದನೇಕಾಯಿ ತೊಳೆದು, + ಆಕಾರದಲ್ಲಿ ಸಿಗಿದು (ಸೀಳಿ), ಆವಿಯಲ್ಲಿ ಹತ್ತು ನಿಮಿಷ ಅಥವಾ ಮೆತ್ತಗಾಗುವವರೆಗೆ ಬೇಯಿಸಿ.
- ಆ ಸಮಯದಲ್ಲಿ ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಂಡು, ಉಪ್ಪು ಮತ್ತು ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿಯನ್ನು ನಿಮ್ಮ ರುಚಿಗೆ ತಕ್ಕಂತೆ ಸೇರಿಸಿ ಕಲಸಿ.
- ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಉದ್ದಿನಬೇಳೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಒಗ್ಗರಣೆಯನ್ನು ಕಲಸಿಟ್ಟ ಮೊಸರಿಗೆ ಸೇರಿಸಿ.
- ಬದನೇಕಾಯಿ ಬೆಂದ ಮೇಲೆ ಸಿಪ್ಪೆ ತೆಗೆದು, ತೊಟ್ಟಿನ ಭಾಗವನ್ನು ಕತ್ತರಿಸಿ ತೆಗೆಯಿರಿ.
- ಸಣ್ಣ ಚೂರುಗಳಾಗಿ ಕತ್ತರಿಸಿ.
- ಅದನ್ನು ಮೊಸರು ಇರುವ ಪಾತ್ರೆಗೆ ಸೇರಿಸಿ ಕಲಸಿ.
- ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ