Sutta tomato gojju recipe in Kannada | ಸುಟ್ಟ ಟೊಮೇಟೊ ಗೊಜ್ಜು ಮಾಡುವ ವಿಧಾನ
ಸುಟ್ಟ ಟೊಮೇಟೊ ಗೊಜ್ಜು ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 2 ಟೊಮೇಟೊ
- 2 - 3 ಹಸಿರು ಮೆಣಸಿನಕಾಯಿ
- 3 - 4 ಎಸಳು ಬೆಳ್ಳುಳ್ಳಿ (ಅಥವಾ ಅರ್ಧ ಚಮಚ ಜೀರಿಗೆ ಪುಡಿ)
- 1 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
- 1 ಚಮಚ ಬೆಲ್ಲ (ಬೇಕಾದಲ್ಲಿ)
- ಉಪ್ಪು ರುಚಿಗೆ ತಕ್ಕಷ್ಟು
- 1 ಟೀಸ್ಪೂನ್ ಎಣ್ಣೆ
ಸುಟ್ಟ ಟೊಮೇಟೊ ಗೊಜ್ಜು ಮಾಡುವ ವಿಧಾನ:
- ಟೊಮೇಟೊ ತೊಳೆದು ನೀರಾರಿಸಿ, ನೇರವಾಗಿ ಸ್ಟವ್ ನಲ್ಲಿ ಮೆತ್ತಗಾಗುವವರೆಗೆ ಸುಡಿ. ಟೊಮ್ಯಾಟೊವನ್ನು ತಿರುಗಿಸಿ ತಿರುಗಿಸಿ ಸುಡಬೇಕು.
- ನಂತರ ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನೂ ಸುಡಿ. ಬೆಳ್ಳುಳ್ಳಿ ಬದಲು ಕೊನೆಯಲ್ಲಿ ಅರ್ಧ ಚಮಚ ಜೀರಿಗೆ ಪುಡಿ ಸೇರಿಸಬಹುದು.
- ಬಿಸಿ ಕಡಿಮೆ ಆದಮೇಲೆ ಸಿಪ್ಪೆ ತೆಗೆದು ಚೆನ್ನಾಗಿ ಮಸೆಯಿರಿ. ಮಿಕ್ಸಿಯಲ್ಲಿ ತರಿತರಿಯಾಗಿ ಅರೆಯಬಹುದು.
- ಮಸೆದ ಅಥವಾ ಮ್ಯಾಶ್ ಮಾಡಿದ ಚಟ್ನಿಯನ್ನು ಒಂದು ಪಾತ್ರೆಗೆ ಹಾಕಿ.
- ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
- ಒಂದು ಚಮಚ ಎಣ್ಣೆ ಸೇರಿಸಿ ಕಲಸಿ.
- ಚಟ್ನಿ ಅಥವಾ ಗೊಜ್ಜು ಹುಳಿ ಎನಿಸಿದರೆ, ಬೆಲ್ಲ ಸೇರಿಸಬಹುದು.
- ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ