Badanekayi kai gojju recipe in Kannada | ಬದನೇಕಾಯಿ ಕೈ ಗೊಜ್ಜು ಮಾಡುವ ವಿಧಾನ
ಬದನೇಕಾಯಿ ಕೈ ಗೊಜ್ಜು ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/4 kg ಬದನೇಕಾಯಿ
- 1/4 ಟೀಸ್ಪೂನ್ ಅರಿಶಿನ
- 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
- 1 ಚಮಚ ಬೆಲ್ಲ
- ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- ಒಂದು ಈರುಳ್ಳಿ
- 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
- 1 ಟೇಬಲ್ ಚಮಚ ತುಪ್ಪ (ಅಥವಾ ಎಣ್ಣೆ)
ಬದನೇಕಾಯಿ ಕೈ ಗೊಜ್ಜು ಮಾಡುವ ವಿಧಾನ:
- ಬದನೇಕಾಯಿಯನ್ನು ಕತ್ತರಿಸಿ, ಹತ್ತು ನಿಮಿಷ ನೀರಿನಲ್ಲಿ ನೆನೆಸಿಡಿ.
- ಒಂದು ಬಾಣಲೆಯಲ್ಲಿ ತುಪ್ಪ (ಅಥವಾ ಎಣ್ಣೆ) ಬಿಸಿ ಮಾಡಿ, ಬದನೆಕಾಯಿಯನ್ನು ಸೇರಿಸಿ.
- ಅರಿಶಿನ ಮತ್ತು ಉಪ್ಪು ಹಾಕಿ ಮಗುಚಿ.
- ಮುಚ್ಚಳ ಮುಚ್ಚಿ ಬದನೇಕಾಯಿ ಮೆತ್ತಗಾಗುವವರೆಗೆ ಬೇಯಿಸಿ.
- ನಂತ್ರ ಅಚ್ಚಖಾರದಪುಡಿ, ಬೆಲ್ಲ ಮತ್ತು ಹುಣಿಸೆಹಣ್ಣಿನ ರಸ ಸೇರಿಸಿ, ಕಲಸಿ.
- ಸ್ಟವ್ ಆಫ್ ಮಾಡಿ, ಬಿಸಿ ಆರಲು ಬಿಡಿ.
- ನಂತರ ಕತ್ತರಿಸಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಹಿಸುಕಿ ಕಲಸಿ.
- ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ