Thondekai masale palya recipe in Kannada | ತೊಂಡೆಕಾಯಿ ಮಸಾಲೆ ಪಲ್ಯ ಮಾಡುವ ವಿಧಾನ
ತೊಂಡೆಕಾಯಿ ಪಲ್ಯ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/4kg ತೊಂಡೆಕಾಯಿ
- 1/2 ಟೀಸ್ಪೂನ್ ಸಾಸಿವೆ
- ಸ್ವಲ್ಪ ಕರಿಬೇವಿನ ಎಲೆ
- ಚಿಟಿಕೆ ಅರಿಶಿನ ಪುಡಿ
- 2 ಟೇಬಲ್ ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ತೆಂಗಿನ ತುರಿ
- 1/2 ಟೀಸ್ಪೂನ್ ಜೀರಿಗೆ
- 2 - 3 ಹಸಿಮೆಣಸಿನಕಾಯಿ
- ಉಪ್ಪು ರುಚಿಗೆ ತಕ್ಕಷ್ಟು
- ಒಂದು ಹಿಡಿ ಕೊತ್ತಂಬರಿ ಸೊಪ್ಪು
ತೊಂಡೆಕಾಯಿ ಪಲ್ಯ ಮಾಡುವ ವಿಧಾನ:
- ತೊಂಡೆಕಾಯಿಯನ್ನು ಉದ್ದುದ್ದವಾಗಿ ಕತ್ತರಿಸಿಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಕರಿಬೇವು ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ.
- ಅದಕ್ಕೆ ಕತ್ತರಿಸಿದ ತೊಂಡೆಕಾಯಿ ಹಾಕಿ ಮಗುಚಿ.
- ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ.
- ಆ ಸಮಯದಲ್ಲಿ ಒಂದು ಮಿಕ್ಸಿ ಜಾರಿನಲ್ಲಿ, ತೆಂಗಿನತುರಿ, ಹಸಿಮೆಣಸಿನಕಾಯಿ ಮತ್ತು ಜೀರಿಗೆ ತೆಗೆದುಕೊಳ್ಳಿ.
- ಕೊತ್ತಂಬರಿ ಸೊಪ್ಪು ಮತ್ತು ಅಗತ್ಯವಿದ್ಧಷ್ಟು ನೀರು ಸೇರಿಸಿ ನುಣ್ಣಗೆ ಅರೆದು ಪಕ್ಕಕ್ಕಿಡಿ.
- ಬೇಯುತ್ತಿರುವ ತೊಂಡೆಕಾಯಿಗೆ ಸ್ವಲ್ಪ ನೀರು, ಅರಿಶಿನ ಮತ್ತು ಉಪ್ಪು ಹಾಕಿ ಮಗುಚಿ.
- ಮುಚ್ಚಳ ಮುಚ್ಚಿ ಮೆತ್ತಗಾಗುವವರೆಗೆ ಬೇಯಿಸಿ.
- ತೊಂಡೆಕಾಯಿ ಮೆತ್ತಗೆ ಬೆಂದ ಮೇಲೆ ಅರೆದ ಮಸಾಲೆ ಸೇರಿಸಿ.
- ಒಂದೆರಡು ನಿಮಿಷ ಚೆನ್ನಾಗಿ ಮಗುಚಿ. ಸ್ಟೋವ್ ಆಫ್ ಮಾಡಿ.
- ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.
Looks great. Thank you for this Sri Mayyia Caterers dates back to 1953, a nostalgic era where traditional Indian fare was a clear favourite, and every feast or celebration was incomplete without the mouthwatering delicacies. for further details pls visit our official website https://www.srimayyiacaterers.co.in/, Contact us @ +91 98450 38235/ +91 98454 9722260
ಪ್ರತ್ಯುತ್ತರಅಳಿಸಿ