Baale dindina palya recipe in Kannada | ಬಾಳೆ ದಿಂಡಿನ ಪಲ್ಯ ಮಾಡುವ ವಿಧಾನ
bale dindu palya video
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 20cm ಉದ್ದದ ಬಾಳೆ ದಿಂಡು
- 1/4 ಕಪ್ ಹೆಸರುಬೇಳೆ
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಕಡ್ಲೆ ಬೇಳೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಒಣ ಮೆಣಸಿನಕಾಯಿ
- 1 - 2 ಹಸಿಮೆಣಸಿನಕಾಯಿ
- 7 - 8 ಕರಿಬೇವಿನ ಎಲೆ
- 1 ದೊಡ್ಡ ಚಿಟಿಕೆ ಅರಿಶಿನ ಪುಡಿ
- 1 ದೊಡ್ಡ ಚಿಟಿಕೆ ಇಂಗು
- 1/4 ಕಪ್ ತೆಂಗಿನ ತುರಿ
- 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1 - 2 ಟೇಬಲ್ ಚಮಚ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ಬಾಳೆ ದಿಂಡಿನ ಪಲ್ಯ ಮಾಡುವ ವಿಧಾನ:
- ಹೆಸರುಬೇಳೆಯನ್ನು ಹದಿನೈದು ನಿಮಿಷ ನೆನೆಸಿಕೊಳ್ಳಿ.
- ಬಾಳೆ ದಿಂಡಿನ ಹೊರಗಿನ ಸಿಪ್ಪೆಗಳನ್ನು ತೆಗೆದು, ಒಳಗಿನ ದಿಂಡನ್ನು ಮಾತ್ರ ತೆಗೆದುಕೊಳ್ಳಿ.
- ಚಕ್ರಗಳನ್ನಾಗಿ ಕತ್ತರಿಸಿ, ನಾರನ್ನು ತೆಗೆದು, ಆಮೇಲೆ ಸಣ್ಣದಾಗಿ ಕತ್ತರಿಸಿಕೊಳ್ಳಿ.
- ಒಂದು ಪಾತ್ರೆಯಲ್ಲಿ, ನೀರು ಮತ್ತು ನಿಂಬೆಹಣ್ಣಿನ ರಸ ತೆಗೆದುಕೊಂಡು, ಅದರಲ್ಲಿ ಕತ್ತರಿಸಿದ ಬಾಳೆದಿಂಡನ್ನು ನೆನೆಸಿಡಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ ಮತ್ತು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಕೂಡಲೇ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ.
- ಅರಿಶಿನ ಮತ್ತು ಇಂಗು ಸೇರಿಸಿ.
- ನೆನೆಸಿದ ಹೆಸರುಬೇಳೆ ಹಾಕಿ ಮಗುಚಿ.
- ಅದಕ್ಕೆ ಕತ್ತರಿಸಿದ ಬಾಳೆದಿಂಡನ್ನು ಹಾಕಿ.
- ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಮಗುಚಿ.
- ಮುಚ್ಚಳ ಮುಚ್ಚಿ ಹೆಸರುಬೇಳೆ ಮೆತ್ತಗಾಗುವವರೆಗೆ ಬೇಯಿಸಿ.
- ಮೆತ್ತಗೆ ಬೆಂದ ಮೇಲೆ ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಗುಚಿ. ಸ್ಟೋವ್ ಆಫ್ ಮಾಡಿ.
- ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ