Sabbasige soppu palya recipe in Kannada | ಸಬ್ಬಸಿಗೆ ಸೊಪ್ಪು ಪಲ್ಯ ಮಾಡುವ ವಿಧಾನ
ಸಬ್ಬಸಿಗೆ ಸೊಪ್ಪು ಪಲ್ಯ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಟ್ಟು ಸಬ್ಬಸಿಗೆ ಸೊಪ್ಪು
- 1/2 ಕಪ್ ಹೆಸರುಬೇಳೆ
- 1 ಟೇಬಲ್ ಚಮಚ ಅಡುಗೆ ಎಣ್ಣೆ
- 1/2 ಟೀಸ್ಪೂನ್ ಸಾಸಿವೆ
- 1 ಟೀಸ್ಪೂನ್ ಉದ್ದಿನ ಬೇಳೆ
- 1 ಟೀಸ್ಪೂನ್ ಕಡ್ಲೆಬೇಳೆ
- 4 - 5 ಕರಿಬೇವಿನ ಎಲೆ
- 1 - 2 ಹಸಿ ಮೆಣಸಿನಕಾಯಿ
- 1 ಈರುಳ್ಳಿ
- ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
- ಒಂದು ದೊಡ್ಡ ಚಿಟಿಕೆ ಇಂಗು
- 1/4 ಕಪ್ ತೆಂಗಿನ ತುರಿ
- ಉಪ್ಪು ರುಚಿಗೆ ತಕ್ಕಷ್ಟು
ಸಬ್ಬಸಿಗೆ ಸೊಪ್ಪು ಪಲ್ಯ ಮಾಡುವ ವಿಧಾನ:
- ಹೆಸರುಬೇಳೆಯನ್ನು 15 ನಿಮಿಷ ನೆನೆಸಿಕೊಳ್ಳಿ.
- ಸಬ್ಬಸಿಗೆ ಸೊಪ್ಪನ್ನು ಆರಿಸಿ, ತೊಳೆದು ಕತ್ತರಿಸಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆಯ ಒಗ್ಗರಣೆ ಮಾಡಿ.
- ಸಾಸಿವೆ ಸಿಡಿದ ಕೂಡಲೇ ಸೀಳಿದ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ.
- ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಹುರಿಯಿರಿ.
- ಅರಿಶಿನ ಮತ್ತು ಇಂಗು ಸೇರಿಸಿ.
- ನೆನೆಸಿದ ಹೆಸರುಬೇಳೆ ಹಾಕಿ ಮಗುಚಿ.
- ಕತ್ತರಿಸಿದ ಸಬ್ಬಸಿಗೆ ಸೊಪ್ಪು ಸೇರಿಸಿ ಮಗುಚಿ.
- ಸುಮಾರು 1/2 ಕಪ್ ನೀರು ಹಾಕಿ, ಮುಚ್ಚಳ ಮುಚ್ಚಿ ಹೆಸರುಬೇಳೆ ಮೆತ್ತಗಾಗುವವರೆಗೆ ಬೇಯಿಸಿ.
- ಕೊನೆಯಲ್ಲಿ ರುಚಿಗೆ ತಕ್ಕಂತೆ ಉಪ್ಪು ಮತ್ತು ತೆಂಗಿನತುರಿ ಸೇರಿಸಿ.
- ಚೆನ್ನಾಗಿ ಮಗುಚಿ. ಸ್ಟೋವ್ ಆಫ್ ಮಾಡಿ.
- ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ