Ragi vegetable dose recipe in Kannada | ತರಕಾರಿ ಹಾಕಿ ರಾಗಿ ದೋಸೆ ಮಾಡುವ ವಿಧಾನ
ತರಕಾರಿ ಹಾಕಿ ರಾಗಿ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ರಾಗಿಹಿಟ್ಟು
- 2 ಟೇಬಲ್ ಚಮಚ ರವೆ
- 2 ಟೇಬಲ್ ಚಮಚ ಗೋಧಿಹಿಟ್ಟು
- 1 ಟೀಸ್ಪೂನ್ ಹೆಚ್ಚಿದ ಶುಂಠಿ
- 1 ಟೇಬಲ್ ಚಮಚ ಕರಿಬೇವಿನ ಸೊಪ್ಪು
- 2 ಟೇಬಲ್ ಚಮಚ ಮೆಂತೆಸೊಪ್ಪು
- 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1 ಮಧ್ಯಮ ಗಾತ್ರದ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
- 1/2 ದಪ್ಪಮೆಣಸು ಸಣ್ಣಗೆ ಹೆಚ್ಚಿದ್ದು
- 1/2 ಕ್ಯಾರಟ್ ತುರಿದಿದ್ದು
- 1/2 ಟೀಸ್ಪೂನ್ ಜೀರಿಗೆ
- ಉಪ್ಪು ರುಚಿಗೆ ತಕ್ಕಷ್ಟು
ತರಕಾರಿ ಹಾಕಿ ರಾಗಿ ದೋಸೆ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ರಾಗಿಹಿಟ್ಟು, ರವೆ ಮತ್ತು ಗೋಧಿಹಿಟ್ಟು ತೆಗೆದುಕೊಳ್ಳಿ.
- ಅದಕ್ಕೆ ಹೆಚ್ಚಿದ ಶುಂಠಿ, ಕರಿಬೇವು, ಮೆಂತೆಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
- ಹಾಗೆಯೇ ತುರಿದ ಕ್ಯಾರಟ್, ಕತ್ತರಿಸಿದ ಈರುಳ್ಳಿ ಮತ್ತು ದಪ್ಪಮೆಣಸನ್ನು ಸೇರಿಸಿ.
- ಸುಮಾರು ಎರಡು ಕಪ್ ನೀರನ್ನು ಸ್ವಲ್ಪಸ್ವಲ್ಪವೇ ಸೇರಿಸುತ್ತಾ ಗಂಟಿಲ್ಲದಂತೆ ಹಿಟ್ಟನ್ನು ತಯಾರಿಸಿಕೊಳ್ಳಿ.
- ಜೀರಿಗೆಯನ್ನು ಸೇರಿಸಿ.
- ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ.
- ಚನ್ನಾಗಿ ಪಳಗಿಸಿದ ಕಬ್ಬಿಣದ ತವಾ ಅಥವಾ ನಾನ್ ಸ್ಟಿಕ್ ತವ ಬಿಸಿ ಮಾಡಿ, ರವೇ ದೋಸೆಯಂತೆ ತೆಳ್ಳಗಿನ ದೋಸೆ ಮಾಡಿ.
- ಮೇಲಿನಿಂದ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಖಾಯಿಸಿ.
- ಚಟ್ನಿಯೊಂದಿಗೆ ಅಥವಾ ಚಟ್ನಿ ಪುಡಿಯೊಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ