Jolada hittina paddu recipe in Kannada | ಜೋಳದ ಹಿಟ್ಟಿನ ಪಡ್ಡು ಮಾಡುವ ವಿಧಾನ
ಜೋಳದ ಹಿಟ್ಟಿನ ಪಡ್ಡು ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- 1 ಕಪ್ ಜೋಳದ ಹಿಟ್ಟು
- 1/2 ಕಪ್ ರವೆ
- 1/4 ಕಪ್ ಮೊಸರು
- 1.5 ಕಪ್ ನೀರು
- ಎಣ್ಣೆ ಪಡ್ಡು ಮಾಡಲು
- 1/2 ಟೀಸ್ಪೂನ್ ಸಕ್ಕರೆ
- ಉಪ್ಪು ರುಚಿಗೆ ತಕ್ಕಷ್ಟು
- 1 ಈರುಳ್ಳಿ ಸಣ್ಣಗೆ ಕತ್ತರಿಸಿದ್ದು
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು ಕರಿಬೇವು
- 1 ಹಸಿಮೆಣಸಿನಕಾಯಿ ಕತ್ತರಿಸಿದ್ದು
- 1/2 ಟೀಸ್ಪೂನ್ ಜೀರಿಗೆ
- 1/4 ಟೀಸ್ಪೂನ್ ಅಡುಗೆ ಸೋಡಾ
ಜೋಳದ ಹಿಟ್ಟಿನ ಪಡ್ಡು ಮಾಡುವ ವಿಧಾನ:
- ಜೋಳದ ಹಿಟ್ಟು, ರವೆ, ಉಪ್ಪು ಮತ್ತು ಸಕ್ಕರೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
- ಒಮ್ಮೆ ಚೆನ್ನಾಗಿ ಕಲಸಿ.
- ನಂತರ ಮೊಸರನ್ನು ಸೇರಿಸಿ.
- ನೀರನ್ನು ಸೇರಿಸಿ. ಗಂಟಿಲ್ಲದಂತೆ ಹಿಟ್ಟನ್ನು ಕಲಸಿ ಹತ್ತು ನಿಮಿಷ ನೆನೆಯಲು ಬಿಡಿ.
- ನಂತರ ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಮತ್ತು ಜೀರಿಗೆಯನ್ನು ಸೇರಿಸಿ. ಚೆನ್ನಾಗಿ ಕಲಸಿ.
- ಕೊನೆಯಲ್ಲಿ ಅಡುಗೆ ಸೋಡಾ ಸೇರಿಸಿ ಕಲಸಿ.
- ಪಡ್ಡು ಕಾವಲಿಯನ್ನು ಬಿಸಿಮಾಡಿ ಕೊಳ್ಳಿ. ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
- ಎಲ್ಲ ಗುಳಿಗಳಿಗೆ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ.
- 5 - 10 ಸೆಕೆಂಡ್ ಗಳ ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಹಾಕಿ.
- ತಿರುಗಿಸಿ ಹಾಕಿ, ಇನ್ನೊಂದು ಬದಿಯೂ ಬೇಯಿಸಿ. ತೆಂಗಿನಕಾಯಿ ಚಟ್ನಿ ಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ