ಸಿರಿಧಾನ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಿರಿಧಾನ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಡಿಸೆಂಬರ್ 12, 2023

Navane khichdi recipe in Kannada | ನವಣೆ ಖಿಚಡಿ ಮಾಡುವ ವಿಧಾನ

 

Navane khichdi recipe in Kannada

Navane khichdi recipe in Kannada | ನವಣೆ ಖಿಚಡಿ ಮಾಡುವ ವಿಧಾನ 

ನವಣೆ ಖಿಚಡಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಕಪ್ ನವಣೆ
  2. 1/2 ಕಪ್ ಹೆಸರುಬೇಳೆ
  3. 1 ಪುಲಾವ್ ಎಲೆ
  4. 1/2 ಟೀಸ್ಪೂನ್ ಸಾಸಿವೆ
  5. 1/2 ಟೀಸ್ಪೂನ್ ಜೀರಿಗೆ
  6. 1 ಟೀಸ್ಪೂನ್ ಶುಂಠಿ
  7. ಸ್ವಲ್ಪ ಕರಿಬೇವು
  8. 1 - 2 ಹಸಿಮೆಣಸಿನಕಾಯಿ
  9. 1 ಈರುಳ್ಳಿ
  10. 1 ಸಣ್ಣ ಗಾತ್ರದ ದಪ್ಪಮೆಣಸು
  11. 2 ಕಪ್ ಬೆರಕೆ ತರಕಾರಿ
  12. ದೊಡ್ಡ ಚಿಟಿಕೆ ಅರಿಶಿನ ಪುಡಿ
  13. ದೊಡ್ಡ ಚಿಟಿಕೆ ಇಂಗು
  14. 1 ಟೊಮೇಟೊ
  15. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  16. 3 ಟೀಸ್ಪೂನ್ ತುಪ್ಪ
  17. ಸ್ವಲ್ಪ ಕೊತ್ತಂಬರಿ ಸೊಪ್ಪು

ಖಿಚಡಿ ಮಾಡುವ ವಿಧಾನ:

  1. ನವಣೆಯನ್ನು ಚೆನ್ನಾಗಿ ತೊಳೆದು, ಎರಡು ಘಂಟೆ ನೆನೆಸಿಡಿ. 
  2. ಹೆಸರುಬೇಳೆಯನ್ನು 20 ನಿಮಿಷ ನೆನೆಸಿ.
  3. ಒಂದು ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ. 
  4. ಪುಲಾವ್ ಎಲೆ, ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ. 
  5. ಶುಂಠಿ, ಕರಿಬೇವು ಮತ್ತು ಸೀಳಿದ ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. 
  6. ಕತ್ತರಿಸಿದ ಈರುಳ್ಳಿ ಮತ್ತು ದಪ್ಪಮೆಣಸು ಹಾಕಿ ಹುರಿಯಿರಿ. 
  7. ನಂತರ ಅರಿಶಿನ ಮತ್ತು ಇಂಗು ಸೇರಿಸಿ ಮಗುಚಿ. 
  8. ಕತ್ತರಿಸಿದ ಬೆರಕೆ ತರಕಾರಿಗಳನ್ನು ಹಾಕಿ ಹುರಿಯಿರಿ.  
  9. ಟೊಮೇಟೊ ಸೇರಿಸಿ ಹುರಿಯಿರಿ. 
  10. ನೆನೆಸಿದ ಹೆಸರುಬೇಳೆ ಮತ್ತು ಅಕ್ಕಿ ಹಾಕಿ ಮಗುಚಿ.
  11. ಸುಮಾರು 4 ಕಪ್ ನೀರು ಸೇರಿಸಿ.
  12. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.  
  13. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. 
  14. ಮುಚ್ಚಳ ಮುಚ್ಚಿ 2 - 3 ವಿಷಲ್ ಮಾಡಿ. 
  15. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ. ಬೆಳಿಗ್ಗಿನ ತಿಂಡಿಗೆ ಅಥವಾ ರಾತ್ರಿ ಊಟಕ್ಕೆ ಬಹಳ ಚೆನ್ನಾಗಿರುತ್ತದೆ. 
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ನವೆಂಬರ್ 24, 2017

Easy siridhanya recipes in Kannada | ಸಿರಿಧಾನ್ಯದ ಅಡಿಗೆ ಮಾಡುವ ವಿಧಾನ

Easy siridhanya recipes in Kannada

Easy siridhanya recipes in Kannada | ಸಿರಿಧಾನ್ಯದ ಸರಳ ಅಡಿಗೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಸಿರಿಧಾನ್ಯ
  1. 1 ಕಪ್ ಮೊಸರು
  2. 1/4 ಚಮಚ ಸಾಸಿವೆ 
  3. 1/2 ಟೀಸ್ಪೂನ್ ಉದ್ದಿನ ಬೇಳೆ 
  4. 2 ಕರಿಬೇವಿನ ಎಲೆ 
  5. 1 ಹಸಿರು ಮೆಣಸಿನಕಾಯಿ ಅಥವಾ ಮಜ್ಜಿಗೆ ಮೆಣಸು
  6. ಸ್ವಲ್ಪ ಶುಂಠಿ ಸಣ್ಣಗೆ ಕತ್ತರಿಸಿದ್ದು
  7. ಒಂದು ಚಿಟಿಕೆ ಇಂಗು
  8. 2 ಟೀ ಚಮಚ ಅಡುಗೆ ಎಣ್ಣೆ 
  9. ಉಪ್ಪು ರುಚಿಗೆ ತಕ್ಕಷ್ಟು
  1. 1/2 ಕಪ್ ಹಾಲು
  2. ಸಕ್ಕರೆ ರುಚಿಗೆ ತಕ್ಕಷ್ಟು
  3. 2 ಟೀ ಚಮಚ ತುಪ್ಪ
  4. 1 ಟೇಬಲ್ ಚಮಚ ಒಣದ್ರಾಕ್ಷಿ
  1. 1 ಕಪ್ ಬಿಸಿ ನೀರು
  2. 1 ಟೀ ಚಮಚ ತುಪ್ಪ
  3. ಉಪ್ಪು ರುಚಿಗೆ ತಕ್ಕಷ್ಟು
  4. ಉಪ್ಪಿನಕಾಯಿ

ಸಿರಿಧಾನ್ಯದ ಸರಳ ಅಡಿಗೆ ಮಾಡುವ ವಿಧಾನ:

  1. ಮೊದಲಿಗೆ ಯಾವುದೇ ಸಿರಿಧಾನ್ಯವನ್ನು ಮೆತ್ತಗೆ ಬೇಯಿಸಿಟ್ಟು ಕೊಳ್ಳಿ. ನಾನು 1/2 ಕಪ್ ಸಿರಿಧಾನ್ಯಕ್ಕೆ 1.5 ಕಪ್ ನೀರು ಬಳಸಿದ್ದೇನೆ. 
  2. ಮೊದಲನೇ ಬಟ್ಟಲಿನಲ್ಲಿ 1/3 ಭಾಗದಷ್ಟು ಬೇಯಿಸಿದ ಸಿರಿಧಾನ್ಯ ತೆಗೆದುಕೊಂಡು, ಅದಕ್ಕೆ ಮೊಸರು ಮತ್ತು ಉಪ್ಪು ಹಾಕಿ ಕಲಸಿ. 
  3. ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವು, ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಇಂಗಿನ ಒಗ್ಗರಣೆ ಕೊಡಿ.  
  4. ಎರಡನೇ ಬಟ್ಟಲಿನಲ್ಲಿ 1/3 ಭಾಗದಷ್ಟು ಬೇಯಿಸಿದ ಸಿರಿಧಾನ್ಯ ತೆಗೆದುಕೊಂಡು, ಅದಕ್ಕೆ ಹಾಲು ಮತ್ತು ಸಕ್ಕರೆ ಹಾಕಿ ಕಲಸಿ. 
  5. ತುಪ್ಪದಲ್ಲಿ ಒಣದ್ರಾಕ್ಷಿ ಹುರಿದು ಸೇರಿಸಿ. 
  6. ಉಳಿದ ಸಿರಿಧಾನ್ಯವನ್ನು ಮೂರನೇ ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಬಿಸಿನೀರು, ಉಪ್ಪು ಮತ್ತು ತುಪ್ಪ ಹಾಕಿ ಕಲಸಿ. ಉಪ್ಪಿನಕಾಯಿಯೊಂದಿಗೆ ಸವಿಯಿರಿ. 

ಶನಿವಾರ, ಮೇ 13, 2017

Siridhanya idli recipe in kannada | ಸಿರಿಧಾನ್ಯ ಇಡ್ಲಿ ಮಾಡುವ ವಿಧಾನ

Siridhanya idli recipe in kannada

Siridhanya idli recipe in kannada | ಸಿರಿಧಾನ್ಯ ಇಡ್ಲಿ ಮಾಡುವ ವಿಧಾನ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸಿರಿಧಾನ್ಯ (ಇಲ್ಲಿ ನವಣೆ ಉಪಯೋಗಿಸಿದೆ)
  2. 1/4 ಕಪ್ ಉದ್ದಿನ ಬೇಳೆ 
  3. 1/4 ಗಟ್ಟಿ ಅವಲಕ್ಕಿ 
  4. ಉಪ್ಪು ನಿಮ್ಮ ರುಚಿ ಪ್ರಕಾರ

ಸಿರಿಧಾನ್ಯ ಇಡ್ಲಿ ಮಾಡುವ ವಿಧಾನ:

  1. ಉದ್ದಿನಬೇಳೆಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಸಿಡಿ.
  2. ಅರೆಯುವ ಮುನ್ನ ಅವಲಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ. 
  3. ಸಿರಿಧಾನ್ಯವನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಸಿಡಿ.
  4. 4 - 5 ಗಂಟೆಗಳ ನಂತರ ಮಿಕ್ಸಿಗೆ ನೆನೆಸಿದ ಉದ್ದಿನಬೇಳೆ ಮತ್ತು ಅವಲಕ್ಕಿ ಹಾಕಿ. ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆದು ಒಂದು ಪಾತ್ರೆಗೆ ಬಗ್ಗಿಸಿ. 
  5. ನಂತರ ನೆನೆಸಿದ ಸಿರಿಧಾನ್ಯದ ನೀರು ಬಸಿದು, ತರಿ ತರಿಯಾಗಿ ಅರೆದು, ಅದೇ ಪಾತ್ರೆಗೆ ಬಗ್ಗಿಸಿ. ಅರೆಯಲು ಅಗತ್ಯವಿದ್ದಷ್ಟು ನೀರು ಸೇರಿಸಿ.
  6. ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ ಮತ್ತು 7 - 8 ಗಂಟೆಗಳ ಕಾಲ ಹುದುಗಲು ಬಿಡಿ. 
  7. ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  8. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
  9. 10 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ. ಒಂದೈದು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆಯಿರಿ.

ಸೋಮವಾರ, ಏಪ್ರಿಲ್ 17, 2017

Siridhanya neer dose recipe in Kannada | ಸಿರಿಧಾನ್ಯ ನೀರ್ ದೋಸೆ ಮಾಡುವ ವಿಧಾನ

Siridhanya neer dose recipe in Kannada

Siridhanya neer dose recipe in Kannada | ಸಿರಿಧಾನ್ಯ ನೀರ್ ದೋಸೆ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸಿರಿಧಾನ್ಯ
  2. 1/4 ಕಪ್ ತೆಂಗಿನ ತುರಿ
  3. 1/4 ಕಪ್ ತೆಳು ಅವಲಕ್ಕಿ
  4. ಉಪ್ಪು ರುಚಿಗೆ ತಕ್ಕಷ್ಟು

ಸಿರಿಧಾನ್ಯ ನೀರ್ ದೋಸೆ ಮಾಡುವ ವಿಧಾನ:

  1. ಸಿರಿಧಾನ್ಯವನ್ನು ನ್ನು ತೊಳೆದು 5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
  2. ನಂತರ ನೀರನ್ನು ಬಗ್ಗಿಸಿ, ತೆಂಗಿನ ತುರಿ ಮತ್ತು ಅವಲಕ್ಕಿಯೊಂದಿಗೆ ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. 
  3. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
  4. ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ. ಒಮ್ಮೆಲೇ ತುಂಬಾ ನೀರು ಸೇರಿಸಬೇಡಿ. ದೋಸೆ ಮಾಡಲು ಪ್ರಾರಂಭಿಸಿದ ನಂತರ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಹಿಟ್ಟನ್ನು ಸರಿ ಮಾಡಿಕೊಳ್ಳಿ. 
  5. ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ. ನೀರು ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ಸಣ್ಣ ಈರುಳ್ಳಿ ಅಥವಾ ಒಂದು ಕ್ಯಾರೆಟ್ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. 
  6. ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ. 

ಶುಕ್ರವಾರ, ಡಿಸೆಂಬರ್ 23, 2016

Siridhanya mosaranna recipe in kannada | ಸಿರಿಧಾನ್ಯದ ಮೊಸರನ್ನ ಮಾಡುವ ವಿಧಾನ

Siridhanya mosaranna recipe in kannada

Siridhanya mosaranna recipe in kannada | ಸಿರಿಧಾನ್ಯದ ಮೊಸರನ್ನ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

  1. 1/2 ಕಪ್ ಸಿರಿಧಾನ್ಯ
  2. 2 ಕಪ್ ಮೊಸರು
  3. 1/2 ಕಪ್ ಹಾಲು (ಮೊಸರು ಹುಳಿ ಇದ್ದರೆ ಮಾತ್ರ) 
  4. 1/2 ಚಮಚ ಸಾಸಿವೆ 
  5. 1 ಟೀಸ್ಪೂನ್ ಉದ್ದಿನ ಬೇಳೆ 
  6. 1 ಟೀಸ್ಪೂನ್ ಕಡಲೆಬೇಳೆ 
  7. 5 - 6 ಗೋಡಂಬಿ (ಬೇಕಾದಲ್ಲಿ)
  8. 4 - 5 ಕರಿಬೇವಿನ ಎಲೆ 
  9. 1 ಹಸಿರು ಮೆಣಸಿನಕಾಯಿ
  10. ಒಂದು ಸೆಮೀ ಉದ್ದದ ಶುಂಠಿ ಸಣ್ಣಗೆ ಕತ್ತರಿಸಿದ್ದು
  11. ಒಂದು ಚಿಟಿಕೆ ಇಂಗು
  12. ಒಂದು ಮಧ್ಯಮ ಗಾತ್ರದ ಈರುಳ್ಳಿ ಹೆಚ್ಚಿದ್ದು
  13. 1 ಟೇಬಲ್ ಚಮಚ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
  14. 2 ಟೀ ಚಮಚ ಅಡುಗೆ ಎಣ್ಣೆ 
  15. ಉಪ್ಪು ರುಚಿಗೆ ತಕ್ಕಷ್ಟು

ಸಿರಿಧಾನ್ಯದ ಮೊಸರನ್ನ ಮಾಡುವ ವಿಧಾನ:

  1. ಮೊದಲಿಗೆ ಯಾವುದೇ ಸಿರಿಧಾನ್ಯವನ್ನು ಮೆತ್ತಗೆ ಬೇಯಿಸಿಟ್ಟು ಕೊಳ್ಳಿ. ನಾನು 1/2 ಕಪ್ ಸಿರಿಧಾನ್ಯಕ್ಕೆ 1.5 ಕಪ್ ನೀರು ಬಳಸಿದ್ದೇನೆ. 
  2. ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಮತ್ತು ಗೋಡಂಬಿಯ ಒಗ್ಗರಣೆ ಮಾಡಿ. 
  3. ಸಾಸಿವೆ ಸಿಡಿದ ಮೇಲೆ ಕರಿಬೇವಿನ ಎಲೆ, ಸೀಳಿದ ಹಸಿರು ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಇಂಗು ಹಾಕಿ. 
  4. ನಂತರ ಈರುಳ್ಳಿ ಹಾಕಿ ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ. 
  5. ಮೆತ್ತಗೆ ಬೇಯಿಸಿಟ್ಟ ಸಿರಿಧಾನ್ಯದ ಅನ್ನ ಹಾಕಿ ಕಲಸಿ.
  6. ಅನ್ನ ಬಿಸಿ ಆರಿದ ಮೇಲೆ ಮೊಸರು ಹಾಕಿ. ಮೊಸರು ಹುಳಿ ಇದ್ದಲ್ಲಿ ಹಾಲನ್ನು ಸೇರಿಸಿ. ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆಯಿಂದ (ದಾಳಿಂಬೆ ಬೇಕಾದಲ್ಲಿ) ಅಲಂಕರಿಸಿ.

ಶನಿವಾರ, ನವೆಂಬರ್ 5, 2016

Oodhalu or siridhanya dose recipe in Kannada | ಊಧಲು ಅಥವಾ ಸಿರಿಧಾನ್ಯ ದೋಸೆ ಮಾಡುವ ವಿಧಾನ

Oodhalu or siridhanya dose recipe in Kannada

Oodhalu or siridhanya dose recipe in Kannada | ಊಧಲು ಅಥವಾ ಸಿರಿಧಾನ್ಯ ದೋಸೆ ಮಾಡುವ ವಿಧಾನ 

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಊಧಲು ಅಥವಾ ಯಾವುದೇ ಸಿರಿಧಾನ್ಯ
  2. 1/3 ಕಪ್ ಉದ್ದಿನ ಬೇಳೆ
  3. 1/2 ಟೀಸ್ಪೂನ್ ಮೆಂತ್ಯ
  4. 2 - 4 ಟೇಬಲ್ ಚಮಚ ದಪ್ಪ ಅವಲಕ್ಕಿ / ಗಟ್ಟಿ ಆವಲಕ್ಕಿ
  5. ಉಪ್ಪು ರುಚಿಗೆ ತಕ್ಕಷ್ಟು.

ದೋಸೆ ಹಿಟ್ಟು ಮಾಡುವ ವಿಧಾನ:

  1. ಸಿರಿಧಾನ್ಯ, ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು 5-6 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಅವಲಕ್ಕಿ ಯನ್ನು ತೊಳೆದು ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ. ತೆಳು ಅವಲಕ್ಕಿ ಆದಲ್ಲಿ ನೆನೆಸಬೇಕಾಗಿಲ್ಲ. 
  3. ನೆನೆಸಿದ ನಂತರ ನೀರು ಬಗ್ಗಿಸಿ. ಸಿರಿಧಾನ್ಯ, ಉದ್ದಿನಬೇಳೆ, ಮೆಂತೆ ಮತ್ತು ಅವಲಕ್ಕಿಯನ್ನು ಅಗತ್ಯವಿದ್ಧಷ್ಟು ನೀರು ಸೇರಿಸಿ, ಮಿಕ್ಸಿಯಲ್ಲಿ ಅರೆದು ಒಂದು ಪಾತ್ರೆಗೆ ಹಾಕಿ. 
  4. ಮುಚ್ಚಳವನ್ನು ಮುಚ್ಚಿ, 8-9 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ. 
  5. 8-9 ಘಂಟೆಯ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

    ಉದ್ದಿನ ದೋಸೆ ಮಾಡುವ ವಿಧಾನ:

    1. ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿಮಾಡಿ ಕೊಳ್ಳಿ. ದೋಸೆ ಹೆಂಚನ್ನು ಬಳಸುತ್ತಿದ್ದರೆ ಮೊದಲಿಗೆ ಎಣ್ಣೆ ಹಚ್ಚಿ. ನಾನ್ ಸ್ಟಿಕ್ ಪ್ಯಾನ್ ಆದಲ್ಲಿ ಎಣ್ಣೆ ಹಚ್ಚಬೇಡಿ, ಎಣ್ಣೆ ಹಚ್ಚಿದರೆ ದೋಸೆ ಹರಡಲು ಸಾಧ್ಯವಾಗುವುದಿಲ್ಲ. ಈಗ ವೃತ್ತಾಕಾರದ ರೀತಿಯಲ್ಲಿ ದೋಸೆ ಹಿಟ್ಟನ್ನು ಹರಡಿ, ಮುಚ್ಚಳವನ್ನು ಮುಚ್ಚಿ .
    2. 5 ಸೆಕೆಂಡುಗಳ ನಂತರ ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

    To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

    ಶುಕ್ರವಾರ, ಅಕ್ಟೋಬರ್ 14, 2016

    Navane or siri dhanya pongal recipe in Kannada | ನವಣೆ ಅಥವಾ ಸಿರಿಧಾನ್ಯ ಪೊಂಗಲ್ ಮಾಡುವ ವಿಧಾನ

    Navane or siri dhanya pongal recipe in Kannada

    Navane or siri dhanya pongal recipe in Kannada | ನವಣೆ ಅಥವಾ ಸಿರಿಧಾನ್ಯ ಪೊಂಗಲ್ ಮಾಡುವ ವಿಧಾನ 

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

    1. 1/2 ಕಪ್ ನವಣೆ ಅಥವಾ ಇನ್ನಾವುದೇ ಸಿರಿಧಾನ್ಯ
    2. 1/2 ಕಪ್ ಹೆಸರುಬೇಳೆ
    3. 4 ಟೇಬಲ್ ಸ್ಪೂನ್ ತುಪ್ಪ
    4. 1/2 ಟೀ ಸ್ಪೂನ್ ಜೀರಿಗೆ
    5. 1/4 ಟೀ ಸ್ಪೂನ್ ಅರಶಿನ ಪುಡಿ
    6. 1/2 ಟೀ ಸ್ಪೂನ್ ಜಜ್ಜಿದ ಕಾಳುಮೆಣಸು
    7. 8 - 10 ಗೋಡಂಬಿ
    8. 1-2 ಹಸಿರುಮೆಣಸಿನಕಾಯಿ
    9. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
    10. 8 - 10 ಕರಿಬೇವಿನ ಎಲೆ
    11. 1/4 ಕಪ್ ತೆಂಗಿನತುರಿ
    12. ಉಪ್ಪು ರುಚಿಗೆ ತಕ್ಕಷ್ಟು

    ನವಣೆ ಅಥವಾ ಸಿರಿಧಾನ್ಯ ಪೊಂಗಲ್ ಮಾಡುವ ವಿಧಾನ:

    1. ಹೆಸರು ಬೇಳೆಯನ್ನು ಒಂದು ಬಾಣಲೆಯಲ್ಲಿ ಹಾಕಿ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿಯಿರಿ. ನೆನಪಿಡಿ, ಕೆಲವು ನಿಮಿಷಗಳ ಕಾಲ ಹುರಿದರೆ ಸಾಕಾಗುವುದು.
    2. ಒಂದು ಕುಕ್ಕರ್‌ನಲ್ಲಿ ಹುರಿದ ಹೆಸರುಬೇಳೆ ಮತ್ತು ನವಣೆಯನ್ನು ಹಾಕಿ ತೊಳೆಯಿರಿ. ನಂತರ 3 ಕಪ್ ನೀರು ಹಾಕಿ 2 ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ.
    3. ಈಗ ಶುಂಠಿಯನ್ನು ಕತ್ತರಿಸಿ, ಕಾಳುಮೆಣಸನ್ನು ಜಜ್ಜಿ, ಗೋಡಂಬಿಯನ್ನು ತುಂಡು ಮಾಡಿ, ತೆಂಗಿನಕಾಯಿ ತುರಿದಿಟ್ಟುಕೊಳ್ಳಿ ಮತ್ತು ಬೇರೆ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ. 
    4. ನಂತರ ಒಂದು ಬಾಣಲೆಯನ್ನು ಬಿಸಿಮಾಡಿ, ತುಪ್ಪ ಮತ್ತು ಜೀರಿಗೆ ಹಾಕಿ.
    5. ಜೀರಿಗೆ ಸಿಡಿದ ಕೂಡಲೇ ಗೋಡಂಬಿ, ಕಾಳುಮೆಣಸು ಮತ್ತು ಅರಶಿನ ಪುಡಿಯನ್ನು ಹಾಕಿ. ನಂತರ ಶುಂಠಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ.
    6. ತೆಂಗಿನ ತುರಿಯನ್ನು ಸೇರಿಸಿ ಮಗುಚಿ. ಸ್ಟೋವ್ ಆಫ್ ಮಾಡಿ.
    7. ಈಗ ಬೇಯಿಸಿದ ನವಣೆ ಮತ್ತು ಬೇಳೆ ಮಿಶ್ರಣವನ್ನು ಹಾಕಿ. 
    8. ಸುಮಾರು 1 ಕಪ್ ನಷ್ಟು ನೀರು ಅಥವಾ ಬಿಸಿಬೇಳೆಬಾತ್ ನಂತೆ ತೆಳ್ಳಗಾಗುವಷ್ಟು ನೀರು ಹಾಕಿ.
    9. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಆಗಾಗ್ಯೆ ಮಗುಚುತ್ತಾ ಕುದಿಸಿ. ಬಿಸಿ ಬಿಸಿ ಮತ್ತು ಆರೋಗ್ಯದಾಯಕ ನವಣೆ ಪೊಂಗಲ್ ನ್ನು ಸವಿದು ಆನಂದಿಸಿ.

    ಬುಧವಾರ, ಅಕ್ಟೋಬರ್ 12, 2016

    Navane uppittu recipe in Kannada | ನವಣೆ (ಸಿರಿಧಾನ್ಯ) ಉಪ್ಪಿಟ್ಟು ಮಾಡುವ ವಿಧಾನ

    Navane uppittu recipe in Kannada

    Navane uppittu recipe in Kannada | ನವಣೆ (ಸಿರಿಧಾನ್ಯ) ಉಪ್ಪಿಟ್ಟು ಮಾಡುವ ವಿಧಾನ

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)

    1. 1 ಕಪ್ ನವಣೆ  (ಸಿರಿಧಾನ್ಯ)
    2. 2.5 ಕಪ್ ನೀರು
    3. 1/2 ಟೀಸ್ಪೂನ್ ಸಾಸಿವೆ
    4. 1 ಟೀಸ್ಪೂನ್ ಉದ್ದಿನಬೇಳೆ
    5. 1 ಟೀಸ್ಪೂನ್ ಕಡ್ಲೆಬೇಳೆ
    6. 1 ದೊಡ್ಡ ಈರುಳ್ಳಿ
    7. 1 ಟೊಮ್ಯಾಟೋ 
    8. 1-2 ಹಸಿರು ಮೆಣಸಿನಕಾಯಿ
    9. 4-5 ಕರಿ ಬೇವಿನ ಎಲೆ
    10. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
    11. 1/2 ಮಧ್ಯಮ ಗಾತ್ರದ ಕ್ಯಾರಟ್ (ಬೇಕಾದಲ್ಲಿ)
    12. 4 ಬೀನ್ಸ್ (ಬೇಕಾದಲ್ಲಿ)
    13. 2 ಟೇಬಲ್ ಚಮಚ ಹಸಿ ಬಟಾಣಿ (ಬೇಕಾದಲ್ಲಿ)
    14. 1/4 ಟೀಸ್ಪೂನ್ ಅರಶಿನ ಪುಡಿ
    15. 6-8 ಟೀಸ್ಪೂನ್ ಅಡುಗೆ ಎಣ್ಣೆ
    16. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
    17. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
    18. 1/2 ಕಪ್ ತೆಂಗಿನತುರಿ

    ನವಣೆ (ಸಿರಿಧಾನ್ಯ) ಉಪ್ಪಿಟ್ಟು ಮಾಡುವ ವಿಧಾನ:

    1. ನವಣೆಯನ್ನು ತೊಳೆದು ನೀರು ಬಗ್ಗಿಸಿ ಪಕ್ಕಕ್ಕಿಡಿ. 
    2. ಈರುಳ್ಳಿ, ಟೊಮ್ಯಾಟೋ, ಶುಂಠಿ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಮತ್ತು ತರಕಾರಿಗಳನ್ನು ಕತ್ತರಿಸಿಟ್ಟು ಕೊಳ್ಳಿ. ಬೇರೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
    3. ಒಂದು ಕುಕ್ಕರ್ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
    4. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
    5. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಮತ್ತು ತರಕಾರಿಗಳನ್ನು ಹಾಕಿ. 
    6. ಅರಶಿನ ಪುಡಿ ಸೇರಿಸಿ ಒಂದೆರಡು ನಿಮಿಷ ಹುರಿಯಿರಿ.
    7. ನಂತರ ತೊಳೆದಿಟ್ಟ ನವಣೆಯನ್ನು ಹಾಕಿ ಒಂದು ನಿಮಿಷ ಹುರಿಯಿರಿ. 
    8. 2.5 ಕಪ್ ನೀರು ಹಾಕಿ ಕುದಿಸಿ.ಕುಕ್ಕರ್ ಮುಚ್ಚಳ ಮುಚ್ಚಿ ಎರಡು ವಿಷಲ್ ಮಾಡಿ ಬೇಯಿಸಿ. 
    9. ಕುಕ್ಕರ್ ಒತ್ತಡ ಕಡಿಮೆ ಆದ ಮೇಲೆ, ಮುಚ್ಚಳ ತೆಗೆದು ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಆರೋಗ್ಯಕರ ನವಣೆ ಉಪ್ಪಿಟ್ಟು ತಿಂದು ಆನಂದಿಸಿ. 


    Related Posts Plugin for WordPress, Blogger...