Ragi shavige recipe in Kannada | ರಾಗಿ ಶಾವಿಗೆ ಮಾಡುವ ವಿಧಾನ
ರಾಗಿ ಶಾವಿಗೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ರಾಗಿ ಹಿಟ್ಟು
- 1.25 ಕಪ್ ನೀರು
- 1 ಟೀಸ್ಪೂನ್ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು
ರಾಗಿ ಶಾವಿಗೆ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು ಮತ್ತು ನೀರನ್ನು ಗಂಟಿಲ್ಲದಂತೆ ಕಲಸಿ.
- ಕಲಸಿದ ಹಿಟ್ಟನ್ನು ಒಂದು ಬಾಣಲೆಯಲ್ಲಿ ತೆಗೆದುಕೊಳ್ಳಿ.
- ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ.
- ಎಣ್ಣೆಯನ್ನೂ ಸೇರಿಸಿ.
- ಮಧ್ಯಮ ಉರಿಯಲ್ಲಿ ಕೈ ಬಿಡದೆ ಮಗುಚುತ್ತಾ ಮೃದುವಾದ ಹಿಟ್ಟನ್ನು ತಯಾರಿಸಿ.
- ಸ್ಟವ್ ಆಫ್ ಮಾಡಿ, ಕೈಗೆ ಎಣ್ಣೆ ಹಚ್ಚಿಕೊಂಡು, ಚೆನ್ನಾಗಿ ಹಿಟ್ಟನ್ನು ನಾದಿಕೊಳ್ಳಿ.
- ಹಿಟ್ಟು ಮೃದುವಾಗಿರಲಿ.
- ನಂತರ ಉದ್ದುದ್ದ ಉಂಡೆಗಳನ್ನು ಮಾಡಿ.
- ಶಾವಿಗೆ ಅಚ್ಚಿನಲ್ಲಿ ಹಾಕಿ ಎಣ್ಣೆ ಸವರಿದ ಇಡ್ಲಿ ಪ್ಲೇಟ್ ಗೆ ಒತ್ತಿ.
- ಸೆಕೆಯಲ್ಲಿ (ಆವಿಯಲ್ಲಿ) 8-10 ನಿಮಿಷ ಬೇಯಿಸಿ. ನಿಮ್ಮಿಷ್ಟದ ಸಾಂಬಾರ್ ಅಥವಾ ಗೊಜ್ಜು ಅಥವಾ ಚಟ್ನಿಯೊಂದಿಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ