Pepper rice recipe in Kannada | ಕಾಳುಮೆಣಸಿನ ಅನ್ನ ಮಾಡುವ ವಿಧಾನ
ಕಾಳುಮೆಣಸಿನ ಅನ್ನ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅಕ್ಕಿ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಉದ್ದಿನಬೇಳೆ
- 2 ಟೇಬಲ್ ಚಮಚ ಗೋಡಂಬಿ
- 1 ಈರುಳ್ಳಿ
- ಸ್ವಲ್ಪ ಕರಿಬೇವು
- 2 ಟೀಸ್ಪೂನ್ ಕರಿಮೆಣಸು ಅಥವಾ ಕಾಳುಮೆಣಸು
- ಉಪ್ಪು ರುಚಿಗೆ ತಕ್ಕಷ್ಟು
ಕಾಳುಮೆಣಸಿನ ಅನ್ನ ಮಾಡುವ ವಿಧಾನ:
- ಉದುರುದುರಾದ ಅನ್ನ ಮಾಡಿ ಎತ್ತಿಟ್ಟುಕೊಳ್ಳಿ. ಉಳಿದ ಅನ್ನವನ್ನು ಬಳಸಬಹುದು.
- ಕರಿಮೆಣಸು ಅಥವಾ ಕಾಳುಮೆಣಸನ್ನು ತರಿತರಿಯಾಗಿ ಜಜ್ಜಿ ಎತ್ತಿಟ್ಟುಕೊಳ್ಳಿ.
- ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಜೀರಿಗೆ ಮತ್ತು ಉದ್ದಿನಬೇಳೆಯ ಒಗ್ಗರಣೆ ಮಾಡಿ.
- ಗೋಡಂಬಿ ಹಾಕಿ ಹುರಿಯಿರಿ.
- ಕತ್ತರಿಸಿದ ಈರುಳ್ಳಿ ಮತ್ತು ಕರಿಬೇವು ಹಾಕಿ, ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
- ರುಚಿಗೆ ತಕ್ಕಷ್ಟು ಉಪ್ಪು ಮತ್ತು ಜಜ್ಜಿದ ಕಾಳುಮೆಣಸು ಸೇರಿಸಿ.
- ಒಮ್ಮೆ ಮಗುಚಿ, ಕೂಡಲೇ ಮಾಡಿಟ್ಟ ಅನ್ನ ಸೇರಿಸಿ.
- ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ