Navane khichdi recipe in Kannada | ನವಣೆ ಖಿಚಡಿ ಮಾಡುವ ವಿಧಾನ
ನವಣೆ ಖಿಚಡಿ ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1 ಕಪ್ ನವಣೆ
- 1/2 ಕಪ್ ಹೆಸರುಬೇಳೆ
- 1 ಪುಲಾವ್ ಎಲೆ
- 1/2 ಟೀಸ್ಪೂನ್ ಸಾಸಿವೆ
- 1/2 ಟೀಸ್ಪೂನ್ ಜೀರಿಗೆ
- 1 ಟೀಸ್ಪೂನ್ ಶುಂಠಿ
- ಸ್ವಲ್ಪ ಕರಿಬೇವು
- 1 - 2 ಹಸಿಮೆಣಸಿನಕಾಯಿ
- 1 ಈರುಳ್ಳಿ
- 1 ಸಣ್ಣ ಗಾತ್ರದ ದಪ್ಪಮೆಣಸು
- 2 ಕಪ್ ಬೆರಕೆ ತರಕಾರಿ
- ದೊಡ್ಡ ಚಿಟಿಕೆ ಅರಿಶಿನ ಪುಡಿ
- ದೊಡ್ಡ ಚಿಟಿಕೆ ಇಂಗು
- 1 ಟೊಮೇಟೊ
- 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
- 3 ಟೀಸ್ಪೂನ್ ತುಪ್ಪ
- ಸ್ವಲ್ಪ ಕೊತ್ತಂಬರಿ ಸೊಪ್ಪು
ಖಿಚಡಿ ಮಾಡುವ ವಿಧಾನ:
- ನವಣೆಯನ್ನು ಚೆನ್ನಾಗಿ ತೊಳೆದು, ಎರಡು ಘಂಟೆ ನೆನೆಸಿಡಿ.
- ಹೆಸರುಬೇಳೆಯನ್ನು 20 ನಿಮಿಷ ನೆನೆಸಿ.
- ಒಂದು ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ.
- ಪುಲಾವ್ ಎಲೆ, ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ.
- ಶುಂಠಿ, ಕರಿಬೇವು ಮತ್ತು ಸೀಳಿದ ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ.
- ಕತ್ತರಿಸಿದ ಈರುಳ್ಳಿ ಮತ್ತು ದಪ್ಪಮೆಣಸು ಹಾಕಿ ಹುರಿಯಿರಿ.
- ನಂತರ ಅರಿಶಿನ ಮತ್ತು ಇಂಗು ಸೇರಿಸಿ ಮಗುಚಿ.
- ಕತ್ತರಿಸಿದ ಬೆರಕೆ ತರಕಾರಿಗಳನ್ನು ಹಾಕಿ ಹುರಿಯಿರಿ.
- ಟೊಮೇಟೊ ಸೇರಿಸಿ ಹುರಿಯಿರಿ.
- ನೆನೆಸಿದ ಹೆಸರುಬೇಳೆ ಮತ್ತು ಅಕ್ಕಿ ಹಾಕಿ ಮಗುಚಿ.
- ಸುಮಾರು 4 ಕಪ್ ನೀರು ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
- ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ.
- ಮುಚ್ಚಳ ಮುಚ್ಚಿ 2 - 3 ವಿಷಲ್ ಮಾಡಿ.
- ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ. ಬೆಳಿಗ್ಗಿನ ತಿಂಡಿಗೆ ಅಥವಾ ರಾತ್ರಿ ಊಟಕ್ಕೆ ಬಹಳ ಚೆನ್ನಾಗಿರುತ್ತದೆ.
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ