Beetroot dose recipe in Kannada | ಬೀಟ್ರೂಟ್ ದೋಸೆ ಮಾಡುವ ವಿಧಾನ
ಬೀಟ್ರೂಟ್ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಅಕ್ಕಿಹಿಟ್ಟು
- 1/2 ಕಪ್ ರವೆ
- 1 ಟೇಬಲ್ ಚಮಚ ಗೋಧಿಹಿಟ್ಟು
- 1/2 ಟೀಸ್ಪೂನ್ ಅಚ್ಚಖಾರದ ಪುಡಿ
- 1/2 ಟೀಸ್ಪೂನ್ ಜಜ್ಜಿದ ಕಾಳುಮೆಣಸು
- 1/2 ಟೀಸ್ಪೂನ್ ಜೀರಿಗೆ
- 1 ಸಣ್ಣ ಗಾತ್ರದ ಬೀಟ್ರೂಟ್ ಸಿಪ್ಪೆ ತೆಗೆದು ತುರಿದಿದ್ದು
- 1 ಸಣ್ಣ ಗಾತ್ರದ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
- 2 ಟೇಬಲ್ ಚಮಚ ತೆಂಗಿನತುರಿ
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- 1 ಟೇಬಲ್ ಚಮಚ ಕರಿಬೇವಿನ ಸೊಪ್ಪು
- ಚಿಟಿಕೆ ಇಂಗು (ಬೇಕಾದಲ್ಲಿ)
- 2.25 ಕಪ್ ನೀರು
- 5 - 6 ಎಣ್ಣೆ ದೋಸೆ ಮಾಡಲು
- ಉಪ್ಪು ರುಚಿಗೆ ತಕ್ಕಷ್ಟು
ಬೀಟ್ರೂಟ್ ದೋಸೆ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ರವೆ, ಅಕ್ಕಿಹಿಟ್ಟು ಮತ್ತು ಗೋಧಿಹಿಟ್ಟು ತೆಗೆದುಕೊಳ್ಳಿ.
- ಅದಕ್ಕೆ ಉಪ್ಪು, ಅಚ್ಚಖಾರದ ಪುಡಿ, ಜಜ್ಜಿದ ಕಾಳುಮೆಣಸು ಮತ್ತು ಜೀರಿಗೆ ಸೇರಿಸಿ.
- ಹಾಗೆಯೇ ತುರಿದ ಬೀಟ್ರೂಟ್, ಕತ್ತರಿಸಿದ ಈರುಳ್ಳಿ ಮತ್ತು ತೆಂಗಿನತುರಿ ಸೇರಿಸಿ.
- ಕತ್ತರಿಸಿದ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
- ಚೆನ್ನಾಗಿ ಒಮ್ಮೆ ಕಲಸಿ.
- ಅಗತ್ಯವಿದ್ದಷ್ಟು ನೀರನ್ನು ಸ್ವಲ್ಪಸ್ವಲ್ಪವೇ ಸೇರಿಸುತ್ತಾ ತೆಳ್ಳಗಿನ ಹಿಟ್ಟನ್ನು ತಯಾರಿಸಿಕೊಳ್ಳಿ.
- ಬೇಕಾದಲ್ಲಿ ಚಿಟಿಕೆ ಇಂಗನ್ನು ಸೇರಿಸಿ.
- ಚನ್ನಾಗಿ ಪಳಗಿಸಿದ ಕಬ್ಬಿಣದ ತವಾ ಅಥವಾ ನಾನ್ ಸ್ಟಿಕ್ ತವ ಬಿಸಿ ಮಾಡಿ, ರವೇ ದೋಸೆಯಂತೆ ತೆಳ್ಳಗಿನ ದೋಸೆ ಮಾಡಿ.
- ಮೇಲಿನಿಂದ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಖಾಯಿಸಿ.
- ಚಟ್ನಿಯೊಂದಿಗೆ ಅಥವಾ ಹಾಗೆ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ