ಬುಧವಾರ, ಜೂನ್ 25, 2025

Bendekayi sambar recipe in Kannada | ಬೆಂಡೆಕಾಯಿ ಹುಳಿ ಮಾಡುವ ವಿಧಾನ

 

Bendekayi huli or sambar recipe Kannada

Bendekayi huli or sambar recipe in Kannada | ಬೆಂಡೆಕಾಯಿ ಹುಳಿ ಅಥವಾ ಸಾಂಬಾರ್ ಮಾಡುವ ವಿಧಾನ

ಬೆಂಡೆಕಾಯಿ ಹುಳಿ ಅಥವಾ ಸಾಂಬಾರ್ ವಿಡಿಯೋ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1/4 kg ಬೆಂಡೆಕಾಯಿ
  2. 1/4 ಕಪ್ ತೊಗರಿಬೇಳೆ
  3. ದೊಡ್ಡ ಚಿಟಿಕೆ ಅರಿಶಿನ ಪುಡಿ
  4. 2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  5. 1 ಟೀಸ್ಪೂನ್ ಬೆಲ್ಲ
  6. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/2 ಕಪ್ ತೆಂಗಿನ ತುರಿ
  2. 4 - 5 ಒಣ ಮೆಣಸಿನಕಾಯಿ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/2 ಟೀಸ್ಪೂನ್ ಜೀರಿಗೆ
  6. 7 - 8 ಮೆಂತ್ಯ ಕಾಳು
  7. 1/2 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/2 ಟೀಸ್ಪೂನ್ ಸಾಸಿವೆ
  4. ದೊಡ್ಡ ಚಿಟಿಕೆ ಇಂಗು
  5. 1 ಟೀಸ್ಪೂನ್ ಅಡುಗೆ ಎಣ್ಣೆ

ಬೆಂಡೆಕಾಯಿ ಹುಳಿ ಅಥವಾ ಸಾಂಬಾರ್ ಮಾಡುವ ವಿಧಾನ:

  1. ತೊಗರಿಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. 
  2. ನೀರು, ಅರಿಶಿನ, ನಾಲ್ಕೈದು ಹನಿ ಎಣ್ಣೆ ಹಾಕಿ ಬೇಳೆ ಮೆತ್ತಗಾಗುವವರೆಗೆ ಬೇಯಿಸಿ. 
  3. ಬೆಂಡೆಕಾಯಿಯನ್ನು ಕತ್ತರಿಸಿ.
  4. ಬಾಣಲೆಯಲ್ಲಿ ಬೆಂಡೆಕಾಯಿಯನ್ನು ಒಂದು ಚಮಚ ಎಣ್ಣೆ ಹಾಕಿ ಎರಡು ನಿಮಿಷ ಹುರಿಯಿರಿ. 
  5. ಅದನ್ನು ಬೇಯಿಸಿದ ಬೇಳೆಗೆ ಹಾಕಿ.
  6. ಹುಣಿಸೆಹಣ್ಣಿನ ರಸ ಹಾಕಿ. 
  7. ರುಚಿಗೆ ತಕ್ಕಂತೆ ಉಪ್ಪು ಹಾಕಿ. 
  8. ಅಗತ್ಯವಿದ್ದಷ್ಟು ನೀರು ಹಾಕಿ ಬೇಯಲು ಇಡಿ. 
  9. ಆ ಸಮಯದಲ್ಲಿ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಮೆಂತೆಯನ್ನು 1/2 ಟೀಸ್ಪೂನ್ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬೇಳೆಗಳು ಕಂದು ಬಣ್ಣಕ್ಕೆ ಬರುವರೆಗೆ ಹುರಿಯಿರಿ. 
  10. ಸ್ಟವ್ ಆಫ್  ಮಾಡಿ.
  11. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  12. ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. 
  13. ಬೆಲ್ಲ ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ.
  14. ಅಗತ್ಯವಿದ್ದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ. ಸ್ಟವ್ ಆಫ್ ಮಾಡಿ. 
  15. ಒಣ ಮೆಣಸು, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಶನಿವಾರ, ಜೂನ್ 7, 2025

Masala oats recipe in Kannada | ಮಸಾಲಾ ಓಟ್ಸ್ ಮಾಡುವ ವಿಧಾನ

 

Masala oats recipe in Kannada

Masala oats recipe in Kannada | ಮಸಾಲಾ ಓಟ್ಸ್ ಮಾಡುವ ವಿಧಾನ

ಮಸಾಲಾ ಓಟ್ಸ್ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1/2 ಕಪ್ ಓಟ್ಸ್
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 1 tsp ಟೀಸ್ಪೂನ್ ಶುಂಠಿ
  5. 1 tsp ಟೀಸ್ಪೂನ್ ಬೆಳ್ಳುಳ್ಳಿ
  6. 1 ಹಸಿಮೆಣಸಿನಕಾಯಿ
  7. ಸ್ವಲ್ಪ ಕರಿಬೇವು
  8. 1 ಈರುಳ್ಳಿ
  9. 1/2 cup ಮಿಶ್ರ ತರಕಾರಿಗಳು
  10. 1 ಟೊಮೇಟೊ
  11. 1/4 tsp ಅರಿಶಿನ ಪುಡಿ
  12. 1/2 tsp ಅಚ್ಚಖಾರದ ಪುಡಿ
  13. 1/2 tsp ಧನಿಯಾ ಪುಡಿ
  14. 1/2 tsp ಪಾವ್ ಬಾಜಿ ಮಸಾಲಾ
  15. 1/4 tsp ಗರಂ ಮಸಾಲಾ
  16. ಸ್ವಲ್ಪ ಕೊತ್ತಂಬರಿ ಸೊಪ್ಪು
  17. ನಿಂಬೆ ಹಣ್ಣಿನ ರಸ ರುಚಿಗೆ ತಕ್ಕಂತೆ
  18. 2 tbsp ಅಡುಗೆ ಎಣ್ಣೆ
  19. ಉಪ್ಪು ರುಚಿಗೆ ತಕ್ಕಂತೆ

ಮಸಾಲಾ ಓಟ್ಸ್ ಮಾಡುವ ವಿಧಾನ:

  1. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಜೀರಿಗೆ ಒಗ್ಗರಣೆ ಮಾಡಿ. 
  2. ಸಣ್ಣಗೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವು  ಹಾಕಿ ಹುರಿಯಿರಿ. 
  3. ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. 
  4. ಮಿಶ್ರ ತರಕಾರಿಗಳನ್ನು ಹಾಕಿ ಹುರಿಯಿರಿ. 
  5. ಹೆಚ್ಚಿದ ಟೊಮೇಟೊ ಹಾಕಿ ಹುರಿಯಿರಿ. 
  6. ನಂತರ ಅಚ್ಚಖಾರದ ಪುಡಿ, ಧನಿಯಾ ಪುಡಿ, ಪಾವ್ ಬಾಜಿ ಮಸಾಲಾ, ಗರಂ ಮಸಾಲ ಮತ್ತು ಅರಿಶಿನ ಸೇರಿಸಿ ಹುರಿಯಿರಿ. 
  7. ಸುಮಾರು ಒಂದೂವರೆ ಕಪ್ ನೀರು ಸೇರಿಸಿ
  8. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕುದಿಯಲು ಬಿಡಿ.   
  9. ಒಂದು ಕುದಿ ಬಂದ ಮೇಲೆ, ಅರ್ಧ ಕಪ್ ಓಟ್ಸ್ ಹಾಕಿ ಮಗುಚಿ.
  10. ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಿಸಿ. 
  11. ಅಗತ್ಯವಿದ್ದರೆ ನೀರು ಸೇರಿಸಿ, ಕುದಿಸಿ. 
  12. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಸ್ಟವ್ ಆಫ್ ಮಾಡಿ.  
  13. ಕೊನೆಯಲ್ಲಿ ರುಚಿಗೆ ತಕ್ಕಂತೆ ನಿಂಬೆ ಹಣ್ಣಿನ ರಸ ಸೇರಿಸಿ. 
  14. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ. ಬೆಳಿಗ್ಗಿನ ತಿಂಡಿಗೆ ಅಥವಾ ರಾತ್ರಿ ಊಟಕ್ಕೆ ಬಹಳ ರುಚಿಯಾಗಿರುತ್ತದೆ. 
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಜೂನ್ 4, 2025

Badanekayi shenga pudi palya recipe in Kannada | ಬದನೇಕಾಯಿ ಪಲ್ಯ ಮಾಡುವ ವಿಧಾನ

 

Badanekayi shenga pudi palya recipe in Kannada

Badanekayi shenga pudi palya recipe in Kannada | ಬದನೇಕಾಯಿ ಪಲ್ಯ ಮಾಡುವ ವಿಧಾನ 

ಬದನೇಕಾಯಿ ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 7 - 8 ಸಣ್ಣ ಗಾತ್ರದ ಬದನೆ ಕಾಯಿ
  2. 1/4 ಕಪ್ ಶೇಂಗಾ ಅಥವಾ ನೆಲಗಡಲೆ
  3. 1 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಜೀರಿಗೆ
  5. 1 ಟೀಸ್ಪೂನ್ ಉದ್ದಿನ ಬೇಳೆ
  6. 7 - 8 ಕರಿಬೇವಿನ ಎಲೆ
  7. 2 - 3 ಹಸಿರು ಮೆಣಸಿನಕಾಯಿ
  8. 1 ದೊಡ್ಡ ಈರುಳ್ಳಿ
  9. 1/4 ಟೀಸ್ಪೂನ್ ಅರಿಶಿನ ಪುಡಿ
  10. ಒಂದು ದೊಡ್ಡ ಚಿಟಿಕೆ ಇಂಗು
  11. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  12. ನಿಮ್ಮ ರುಚಿ ಪ್ರಕಾರ ಉಪ್ಪು
  13. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಬದನೇಕಾಯಿ ಪಲ್ಯ ಮಾಡುವ ವಿಧಾನ:

  1. ಮೊದಲಿಗೆ ಬದನೆಕಾಯಿಯನ್ನು ಉದ್ದುದ್ದವಾಗಿ ಕತ್ತರಿಸಿ ನೀರಿನಲ್ಲಿ ಹಾಕಿಟ್ಟು ಕೊಳ್ಳಿ.
  2. ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಶೇಂಗಾ ಅಥವಾ ನೆಲಗಡಲೆಯನ್ನು ಕಂದು ಬಣ್ಣ ಬಂದು ಗರಿಗರಿ ಆಗುವವರೆಗೆ ಹುರಿಯಿರಿ. 
  4. ಬಿಸಿ ಕಡಿಮೆ ಆದಮೇಲೆ ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳಿ
  5. ನಂತರ ಅದೇ ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ ಮತ್ತು ಉದ್ದಿನ ಬೇಳೆ ಹಾಕಿ ಒಗ್ಗರಣೆ ಮಾಡಿ. 
  6. ಸಾಸಿವೆ ಸಿಡಿದ ಕೂಡಲೇ ಸೀಳಿಟ್ಟ ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ. 
  7. ಕತ್ತರಿಸಿಟ್ಟ ಈರುಳ್ಳಿ ಹಾಕಿ ಒಂದೆರಡು ನಿಮಿಷ ಹುರಿಯಿರಿ. 
  8. ಅರಿಶಿನ ಮತ್ತು ಇಂಗು ಸೇರಿಸಿ. 
  9. ನಂತರ ನೀರಿನಲ್ಲಿ ಹಾಕಿದ ಬದನೆಕಾಯಿಯನ್ನು, ನೀರು ಹಿಂಡಿ ತೆಗೆದು ಹಾಕಿ.
  10. ರುಚಿಗೆ ತಕ್ಕಂತೆ ಉಪ್ಪು ಹಾಕಿ. 
  11. ರುಚಿಗೆ ತಕ್ಕಂತೆ ಹುಣಿಸೆರಸ ಹಾಕಿ ಮಗುಚಿ. 
  12. ಮುಚ್ಚಳ ಮುಚ್ಚಿ, ಸಣ್ಣ ಉರಿಯಲ್ಲಿ ಬೇಯಿಸಿ.
  13. ಕೊನೆಯಲ್ಲಿ ಪುಡಿ ಮಾಡಿದ ಶೇಂಗಾ ಹಾಕಿ ಕಲಸಿ. ಸ್ಟವ್ ಆಫ್ ಮಾಡಿ. 
  14.  ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಸೆಪ್ಟೆಂಬರ್ 20, 2024

Heerekai maskai recipe in kannada | ಹೀರೆಕಾಯಿ ಮಸ್ಕಾಯಿ ಮಾಡುವ ವಿಧಾನ

 

Heerekai maskai recipe in kannada

Heerekai maskai recipe in kannada | ಹೀರೆಕಾಯಿ ಮಸ್ಕಾಯಿ ಮಾಡುವ ವಿಧಾನ

ಮಸ್ಕಾಯಿ  ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 120 ಎಂ ಎಲ್)

  1. 1 ಹೀರೆಕಾಯಿ
  2. 1/2 ಕಪ್ ತೊಗರಿ ಬೇಳೆ 
  3. 1  ಈರುಳ್ಳಿ
  4. 1 ಟೊಮೇಟೊ 
  5. 4 - 5 ಎಸಳು ಬೆಳ್ಳುಳ್ಳಿ
  6. 2 ಟೇಬಲ್ ಸ್ಪೂನ್ ತೆಂಗಿನತುರಿ
  7. 1/4 ಟೀಸ್ಪೂನ್ ಅರಶಿನ ಪುಡಿ 
  8. 2 - 4 ಹಸಿರು ಮೆಣಸಿನಕಾಯಿ 
  9. 1 ಟೀಸ್ಪೂನ್ ಜೀರಿಗೆ
  10. ಸ್ವಲ್ಪ ಕೊತ್ತಂಬರಿ ಸೊಪ್ಪು 
  11. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 4 -5 ಎಸಳು ಕತ್ತರಿಸಿದ ಬೆಳ್ಳುಳ್ಳಿ 
  4. 1 ಈರುಳ್ಳಿ
  5. 4 - 5 ಕರಿಬೇವಿನ ಎಲೆ 
  6. 2 ಟೀಸ್ಪೂನ್ ಅಡುಗೆ ಎಣ್ಣೆ

ಹೀರೆಕಾಯಿ ಮಸ್ಕಾಯಿ ಮಾಡುವ ವಿಧಾನ:

  1. ತೊಗರಿಬೇಳೆಯನ್ನು ತೊಳೆದು 30 ನಿಮಿಷ ನೆನೆಸಿ ಕುಕ್ಕರ್ ನಲ್ಲಿ ತೆಗೆದುಕೊಳ್ಳಿ. 
  2. ಅದಕ್ಕೆ ಕತ್ತರಿಸಿದ ಹೀರೆಕಾಯಿ, ಈರುಳ್ಳಿ, ಟೊಮೇಟೊ, ಹಸಿಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಸೇರಿಸಿ
  3. ತೆಂಗಿನತುರಿ, ಕೊತ್ತಂಬರಿ ಸೊಪ್ಪು ಮತ್ತು ಜೀರಿಗೆಯನ್ನು ಸೇರಿಸಿ.
  4. ಜೊತೆಗೆ ಅರಿಶಿನ ಮತ್ತು ಉಪ್ಪನ್ನು ಸೇರಿಸಿ.
  5.  ಸುಮಾರು ಒಂದು ಕಪ್ ನೀರು ಸೇರಿಸಿ, ಮುಚ್ಚಳವನ್ನು ಮುಚ್ಚಿ ಎರಡು ವಿಷಲ್ ಮಾಡಿ ಮೆತ್ತಗೆ ಬೇಯಿಸಿಕೊಳ್ಳಿ.
  6. ಬೆಂದ ಪದಾರ್ಥಗಳನ್ನು ಕಡಗೋಲು ಉಪಯೋಗಿಸಿ ಚೆನ್ನಾಗಿ ಮಸೆಯಿರಿ. ಇಲ್ಲವೇ ಮಿಕ್ಸಿಗೆ ಹಾಕಿ ಒಂದೆರಡು ಸುತ್ತು ಅರೆಯಿರಿ. ತುಂಬ ನುಣ್ಣಗೆ ಮಾಡುವುದು ಬೇಡ.
  7. ಈಗ ಒಂದು ಸಣ್ಣ ಬಾಣಲೆ ತೆಗೆದುಕೊಂಡು ಎಣ್ಣೆ, ಮೆಣಸಿನಕಾಯಿ ಮತ್ತು ಸಾಸಿವೆ ಹಾಕಿ ಒಗ್ಗರಣೆ ಮಾಡಿ.
  8. ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಕರಿಬೇವು ಹಾಕಿ ಹುರಿಯಿರಿ.
  9. ಮಸೆದ ತರಕಾರಿ ಮತ್ತು ಬೇಳೆಯನ್ನು ಸೇರಿಸಿ.
  10. ಅಗತ್ಯವಿದ್ದಷ್ಟು ನೀರು ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. 
  11. ಒಂದು ಕುದಿ ಕುದಿಸಿ, ಸ್ಟವ್ ಆರಿಸಿ. ಬಿಸಿ ಅನ್ನ ಅಥವಾ ರಾಗಿ ಮುದ್ದೆಯೊಂದಿಗೆ ಬಡಿಸಿ.

ಮಂಗಳವಾರ, ಸೆಪ್ಟೆಂಬರ್ 17, 2024

Eerulli rice recipe in Kannada | ಈರುಳ್ಳಿ ರೈಸ್ ಮಾಡುವ ವಿಧಾನ

 

Eerulli rice recipe in Kannada

Eerulli rice recipe in Kannada | ಈರುಳ್ಳಿ ರೈಸ್ ಮಾಡುವ ವಿಧಾನ 

ಈರುಳ್ಳಿ ರೈಸ್ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1/2 ಕಪ್ ಅಕ್ಕಿ (ಸೋನಾ ಮಸೂರಿ)
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 7 - 8 ಕರಿಬೇವಿನ ಎಲೆ
  5. 1 ದೊಡ್ಡ ಈರುಳ್ಳಿ
  6. 1/4 ಟೀಸ್ಪೂನ್ ಅರಿಶಿನ ಪುಡಿ
  7. 1 ಟೇಬಲ್ ಸ್ಪೂನ್ ರಸಂ ಪೌಡರ್
  8. 2 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  9. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೆಹಣ್ಣು (ಅಥವಾ ರುಚಿಗೆ ತಕ್ಕಷ್ಟು)
  10. ಸಣ್ಣ ನೆಲ್ಲಿಕಾಯಿ ಗಾತ್ರದ ಬೆಲ್ಲ (ಅಥವಾ ರುಚಿಗೆ ತಕ್ಕಷ್ಟು)
  11. 1 ಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  12. 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ

ಈರುಳ್ಳಿ ರೈಸ್ ಮಾಡುವ ವಿಧಾನ:

  1. ಅಕ್ಕಿ ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ಅನ್ನ ಸ್ವಲ್ಪ ಉದುರುದುರಾಗಿರಲಿ. 
  2. ಈರುಳ್ಳಿಯನ್ನು ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ. ಮೊದಲಿಗೆ ಸಾಸಿವೆ ಮತ್ತು ಜೀರಿಗೆ ಸೇರಿಸಿ.
  4. ಸಾಸಿವೆ ಸಿಡಿದ ಕೂಡಲೇ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ.
  5.  ಅರಿಶಿನ, ಉಪ್ಪು ಮತ್ತು ಸಾರಿನ ಪುಡಿ ಸೇರಿಸಿ ಹುರಿಯಿರಿ. 
  6. ನಂತರ ಹುಣಿಸೆರಸ ಸೇರಿಸಿ. 
  7. ರುಚಿಗೆ ತಕ್ಕಂತೆ ಬೆಲ್ಲ ಸೇರಿಸಿ. 
  8. ಚೆನ್ನಾಗಿ ಮಗುಚಿ ಒಂದು ನಿಮಿಷ ಕುದಿಸಿ. 
  9.  ಬೇಯಿಸಿದ ಅನ್ನ ಸೇರಿಸಿ. 
  10. ಕೊತ್ತಂಬರಿ ಸೊಪ್ಪು ಸೇರಿಸಿ. 
  11. ಒಂದು ಚಪ್ಪಟೆಯಾದ ಸಟ್ಟುಗದಿಂದ ಕಲಸಿ. 
  12. ಸ್ಟವ್ ಆಫ್ ಮಾಡಿ. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಸೆಪ್ಟೆಂಬರ್ 13, 2024

Mandakki dose recipe in Kannada | ಮಂಡಕ್ಕಿ ದೋಸೆ ಮಾಡುವ ವಿಧಾನ

 

Mandakki dose recipe in Kannada

Mandakki dose recipe in Kannada | ಮಂಡಕ್ಕಿ ದೋಸೆ ಮಾಡುವ ವಿಧಾನ

ಮಂಡಕ್ಕಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಅಕ್ಕಿ
  2. 1 ಟೀಸ್ಪೂನ್ ಮೆಂತ್ಯ
  3. 2 ಕಪ್ ಮಂಡಕ್ಕಿ
  4. ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
  5. ಉಪ್ಪು ರುಚಿಗೆ ತಕ್ಕಷ್ಟು.

ಮಂಡಕ್ಕಿ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿಅಕ್ಕಿ ಮತ್ತು ಮೆಂತೆಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಇನ್ನೊಂದು ಪಾತ್ರೆಯಲ್ಲಿ ಮಂಡಕ್ಕಿಯನ್ನು ಹತ್ತು ನಿಮಿಷ ನೆನೆಯಲು ಬಿಡಿ.
  3. ನೆನೆಸಿದ ಅಕ್ಕಿ ಮತ್ತು ಮೆಂತೆಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಳ್ಳಿ. 
  4. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ. 
  5. ಆನಂತರ ನೆನೆಸಿದ ಮಂಡಕ್ಕಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆದು ಅದೇ ಪಾತ್ರೆಗೆಹಾಕಿ. 
  6. ಹಿಟ್ಟನ್ನು ಚೆನ್ನಾಗಿ ಕಲಸಿ. 
  7. ಮುಚ್ಚಳವನ್ನು ಮುಚ್ಚಿ, 7 - 8 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  8. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  9. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ತೆಳ್ಳಗಿನ ದೋಸೆ ಮಾಡಿ.
  10. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  11. ಮುಚ್ಚಳವನ್ನು ತೆಗೆದು, ತುಪ್ಪ ಅಥವಾ ಎಣ್ಣೆ ಹಾಕಿ ಖಾಯಿಸಿ.
  12. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶನಿವಾರ, ಆಗಸ್ಟ್ 17, 2024

Balekai mosaru kootu recipe in Kannada | ಬಾಳೆಕಾಯಿ ಮೊಸರು ಕೂಟು ಮಾಡುವ ವಿಧಾನ

 

Balekai mosaru kootu recipe in Kannada

Balekai mosaru kootu recipe in Kannada | ಬಾಳೆಕಾಯಿ ಮೊಸರು ಕೂಟು ಮಾಡುವ ವಿಧಾನ

ಬಾಳೆಕಾಯಿ ಮೊಸರು ಕೂಟು ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಬಾಳೆಕಾಯಿ
  2. 1/2 ಕಪ್ ಮೊಸರು ಅಥವಾ ದಪ್ಪ ಮಜ್ಜಿಗೆ
  3. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೆಂಗಿನತುರಿ
  2. 2 - 4 ಹಸಿಮೆಣಸಿನಕಾಯಿ
  3. 1 ಟೀಸ್ಪೂನ್ ಜೀರಿಗೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. ಒಂದು ಚಿಟಿಕೆ ಇಂಗು
  4. 5 - 6 ಕರಿಬೇವಿನ ಎಲೆ
  5. 2 ಟೀಸ್ಪೂನ್ ಎಣ್ಣೆ

ಬಾಳೆಕಾಯಿ ಮೊಸರು ಕೂಟು ಮಾಡುವ ವಿಧಾನ:

  1. ಬಾಳೆಕಾಯಿ ಸಿಪ್ಪೆ ತೆಗೆದು ಕತ್ತರಿಸಿ. 
  2. ಕತ್ತರಿಸಿದ ಬಾಳೆಕಾಯಿಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಒಂದು ಚಮಚ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ
  3. ಮೆತ್ತಗಾಗುವವರೆಗೆ ಬೇಯಲು ಇಡಿ.   
  4. ಆ ಸಮಯದಲ್ಲಿ ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಜೀರಿಗೆ ಮತ್ತು ಹಸಿಮೆಣಸಿನಕಾಯಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ರುಬ್ಬಿ ಕೊಳ್ಳಿ. 
  5. ರುಬ್ಬಿದ ಮಸಾಲೆಯನ್ನು ಬೇಯಿಸಿದ ಬಾಳೆಕಾಯಿಗೆ ಸೇರಿಸಿ.
  6. ನಿಮ್ಮ ರುಚಿ ಪ್ರಕಾರ ಉಪ್ಪು ಸೇರಿಸಿ.
  7. ಒಮ್ಮೆ ಕಲಸಿ. ಒಂದೆರಡು ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ.
  8. ಮಜ್ಜಿಗೆ ಅಥವಾ ಮೊಸರು ಸೇರಿಸಿ. ಮೊಸರು ಅಥವಾ ಮಜ್ಜಿಗೆ ಜಾಸ್ತಿ ಹುಳಿ ಇರುವುದು ಬೇಡ. 
  9. ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಹಾಕಿ. ಬಿಸಿ ಅನ್ನದೊಂದಿಗೆ ಬಡಿಸಿ.

ಶನಿವಾರ, ಆಗಸ್ಟ್ 10, 2024

Bale dindu mosaru sasive recipe in kannada | ಬಾಳೆದಿಂಡು ಮೊಸರು ಸಾಸಿವೆ ಮಾಡುವ ವಿಧಾನ

 

Bale dindu mosaru sasive recipe in kannada

Bale dindu mosaru sasive recipe in kannada | ಬಾಳೆದಿಂಡು ಮೊಸರು ಸಾಸಿವೆ ಮಾಡುವ ವಿಧಾನ

ಬಾಳೆದಿಂಡು ಮೊಸರು ಸಾಸಿವೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 7 - 8 cm ಉದ್ದದ ಬಾಳೆದಿಂಡು
  2. 1/2 ಕಪ್ ಮೊಸರು 
  3. 1 ಟೀಸ್ಪೂನ್ ಉಪ್ಪು ಅಥವಾ ನಿಮ್ಮ ರುಚಿಗೆ ತಕ್ಕಷ್ಟು 

ಅರೆಯಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಹಸಿಮೆಣಸಿನಕಾಯಿ
  2. 1/2 ಕಪ್ ತೆಂಗಿನ ತುರಿ 
  3. 1/2 ಟೀಸ್ಪೂನ್ ಸಾಸಿವೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಒಣ ಮೆಣಸಿನಕಾಯಿ
  3. 4 -5 ಕರಿಬೇವು
  4. 1 ಟೇಬಲ್  ಸ್ಪೂನ್ ಅಡುಗೆ ಎಣ್ಣೆ

ಬಾಳೆದಿಂಡು ಮೊಸರು ಸಾಸಿವೆ ಮಾಡುವ ವಿಧಾನ:

  1. ಬಾಳೆದಿಂಡಿನ ಹೊರಗಿನ ಸಿಪ್ಪೆಗಳನ್ನು ತೆಗೆಯಿರಿ.
  2. ಚಕ್ರಗಳಾಗಿ ಕತ್ತರಿಸಿ ನಾರನ್ನು ತೆಗೆಯಿರಿ.
  3. ನಂತರ ಸಣ್ಣದಾಗಿ ಕತ್ತರಿಸಿ.
  4. ನಿಂಬೆಹಣ್ಣಿನ ರಸ ಹಾಕಿದ ನೀರಿನಲ್ಲಿ ಹತ್ತು ನಿಮಿಷ ಹಾಕಿಡಿ.  
  5. ಆಮೇಲೆ ನೀರು ಬಗ್ಗಿಸಿ ತೆಗೆಯಿರಿ.
  6. ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಬೇಯಲು ಇಡಿ. ಬೇಯಿಸದೆಯೂ ಮಾಡಬಹುದು. 
  7. ಹತ್ತು ನಿಮಿಷ ಬೇಯಿಸಿ ಸ್ಟವ್ ಆಫ್ ಮಾಡಿ. 
  8. ತೆಂಗಿನತುರಿ, ಹಸಿಮೆಣಸಿನಕಾಯಿ ಮತ್ತು ಸಾಸಿವೆಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ರುಬ್ಬಿ. 
  9. ಅದನ್ನು ಒಂದು ಪಾತ್ರೆಗೆ ಹಾಕಿ ಮೊಸರನ್ನು ಸೇರಿಸಿ.
  10. ಬೇಯಿಸಿದ ಬಾಳೆದಿಂಡನ್ನು ಬಿಸಿ ಕಡಿಮೆ ಆದಮೇಲೆ ನೀರು ಬಸಿದು ಸೇರಿಸಿ. 
  11. ರುಚಿಗೆ ತಕ್ಕಂತೆ ಉಪ್ಪು ಹಾಕಿ ಕಲಸಿ. 
  12. ಎಣ್ಣೆ, ಮೆಣಸಿನಕಾಯಿ, ಕರಿಬೇವು ಮತ್ತು ಸಾಸಿವೆಯ ಒಗ್ಗರಣೆ ಮಾಡಿ. 
  13. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಭಾನುವಾರ, ಆಗಸ್ಟ್ 4, 2024

Bendekai mirpudi recipe in Kannada | ಬೆಂಡೆಕಾಯಿ ಮಿರ್ಪುಡಿ ಮಾಡುವ ವಿಧಾನ

 

Bendekai mirpudi recipe in Kannada

Bendekai mirpudi recipe in Kannada | ಬೆಂಡೆಕಾಯಿ ಮಿರ್ಪುಡಿ ಮಾಡುವ ವಿಧಾನ

ಬೆಂಡೆಕಾಯಿ ಮಿರ್ಪುಡಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/4 kg ಬೆಂಡೆಕಾಯಿ
  2. 1 ಕಪ್ ಒಣಕೊಬ್ಬರಿ ತುರಿ 
  3. 1/2 ಕಪ್ ಹುರಿಗಡಲೆ
  4. 1 ಟೇಬಲ್ ಚಮಚ ಅಚ್ಚಖಾರದ ಪುಡಿ (ರುಚಿಗೆ ತಕ್ಕಂತೆ ಹೊಂದಿಸಿ)
  5. 2 ಟೀಸ್ಪೂನ್ ಉಪ್ಪು (ರುಚಿಗೆ ತಕ್ಕಂತೆ ಹೊಂದಿಸಿ)
  6. 2 ಟೀಸ್ಪೂನ್ ಬೆಲ್ಲ (ರುಚಿಗೆ ತಕ್ಕಂತೆ ಹೊಂದಿಸಿ)
  7. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  8. 1/2 ಟೀಸ್ಪೂನ್ ಜೀರಿಗೆ
  9. ಎಣ್ಣೆ ಬೆಂಡೆಕಾಯಿ ಕಾಯಿಸಲು

ಬೆಂಡೆಕಾಯಿ ಮಿರ್ಪುಡಿ ಮಾಡುವ ವಿಧಾನ:

  1. ಬೆಂಡೆಕಾಯಿಯನ್ನು ತೊಳೆದು ನೀರಾರಿಸಿ. 
  2. ತೆಳುವಾದ ಬಿಲ್ಲೆಗಳಾಗಿ ಕತ್ತರಿಸಿಕೊಳ್ಳಿ. 
  3. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. 
  4. ಕತ್ತರಿಸಿದ ಬೆಂಡೆಕಾಯಿಯನ್ನು ಬಿಸಿ ಎಣ್ಣೆಗೆ ಹಾಕಿ. 
  5. ಹೊಂಬಣ್ಣ ಬರುವವರೆಗೆ ಖಾಯಿಸಿ ತೆಗೆಯಿರಿ. 
  6. ನಂತರ ನಂತ್ರ ಒಂದು ಮಿಕ್ಸಿಜಾರಿನಲ್ಲಿ ಕೊಬ್ಬರಿ ತುರಿ ತೆಗೆದುಕೊಳ್ಳಿ. 
  7. ಅದಕ್ಕೆ ಹುರಿಗಡಲೆ, ಅಚ್ಚಖಾರದ ಪುಡಿ, ಉಪ್ಪು, ಬೆಲ್ಲ, ಹುಣಿಸೇಹಣ್ಣು ಮತ್ತು ಜೀರಿಗೆ ಸೇರಿಸಿ. 
  8. ನುಣ್ಣಗೆ ಪುಡಿ ಮಾಡಿ. 
  9. ಪುಡಿಯನ್ನು ಕರಿದು ತೆಗೆದ ಬೆಂಡೆಕಾಯಿಗೆ ಸೇರಿಸಿ, ಕಲಸಿ. ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. 15 ದಿನಗಳ ಕಾಲ ಹಾಳಾಗುವುದಿಲ್ಲ. 
  10. ಬಿಸಿಯಾದ ಅನ್ನ ಮತ್ತು ತುಪ್ಪದೊಂದಿಗೆ ಬಡಿಸಿ. ಚಟ್ನಿ ಪುಡಿಯಂತೆ ಕಲಸಿ ತಿನ್ನಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಜುಲೈ 5, 2024

Instant rasam recipe in Kannada | ದಿಢೀರ್ ಸಾರು ಮಾಡುವ ವಿಧಾನ

 

ದಿಢೀರ್ ಸಾರು ಮಾಡುವ ವಿಧಾನ

Instant rasam recipe in Kannada | ದಿಢೀರ್ ಸಾರು ಮಾಡುವ ವಿಧಾನ

ದಿಢೀರ್ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 1/2 ಟೊಮೆಟೋ
  2. 1/2 ಟೀಸ್ಪೂನ್ ಸಾಸಿವೆ
  3. 7 - 8 ಕರಿಬೇವಿನ ಎಲೆ
  4. 1/4 ಟೀಸ್ಪೂನ್ ಅರಿಶಿನ ಪುಡಿ
  5. 1 ಟೇಬಲ್ ಸ್ಪೂನ್ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
  6. 1 ಟೇಬಲ್ ಸ್ಪೂನ್ ಎಣ್ಣೆ
  7. ಉಪ್ಪು ರುಚಿಗೆ ತಕ್ಕಷ್ಟು

ಅರೆಯಲು ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240ಎಂ ಎಲ್)

  1. 2 ಒಣ ಮೆಣಸಿನಕಾಯಿ
  2. 1 ಹಸಿಮೆಣಸಿನಕಾಯಿ
  3. 1 ಟೀಸ್ಪೂನ್ ಕಾಳುಮೆಣಸು
  4. 1 ಟೀಸ್ಪೂನ್ ಜೀರಿಗೆ
  5. 1/2 ಟೊಮೇಟೊ
  6. 7 - 8 ಎಸಳು ಬೆಳ್ಳುಳ್ಳಿ
  7. 1 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು
  8. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು

ದಿಢೀರ್ ಸಾರು ಮಾಡುವ ವಿಧಾನ:

  1. ಅರೆಯಲು ಪಟ್ಟಿಮಾಡಿದ ಪದಾರ್ಥಗಳನ್ನು (ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ, ಕಾಳುಮೆಣಸು, ಜೀರಿಗೆ, ಟೊಮೇಟೊ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಹುಣಿಸೇಹಣ್ಣು) ಮಿಕ್ಸಿಜಾರಿನಲ್ಲಿ ಸ್ವಲ್ಪ ನೀರು ಸೇರಿಸಿ ಅರೆದಿಟ್ಟುಕೊಳ್ಳಿ. 
  2. ನಂತರ ಎಣ್ಣೆ, ಸಾಸಿವೆ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.  
  3. ಅದಕ್ಕೆ ಟೊಮೇಟೊ ಹಾಕಿ ಹುರಿಯಿರಿ. 
  4. ಅರೆದ ಮಸಾಲೆ ಪೇಸ್ಟ್ ಮತ್ತು ಸ್ವಲ್ಪ ನೀರು ಸೇರಿಸಿ. 
  5. ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಮಗುಚಿ, ಕುದಿಸಿ. 
  6. ಸುಮಾರು ಅರ್ಧ ಲೀಟರ್ ನೀರು ಸೇರಿಸಿ ಕುದಿಸಿ. 
  7. ಕೊತ್ತಂಬರಿ ಸೊಪ್ಪು ಉದುರಿಸಿ, ಸ್ಟವ್ ಆಫ್ ಮಾಡಿ. 
  8. ಬಿಸಿಯಾದ ಅನ್ನದೊಂದಿಗೆ ಬಡಿಸಿ. ಅಥವಾ ಸೂಪ್ ತರಹ ಕುಡಿಯಲು ಕೊಡಿ. 

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶನಿವಾರ, ಜೂನ್ 29, 2024

Veg raita recipe in Kannada | ವೆಜ್ ರಾಯಿತ ಮಾಡುವ ವಿಧಾನ

 

Veg raita recipe in Kannada

Veg raita recipe in Kannada | ವೆಜ್ ರಾಯಿತ ಮಾಡುವ ವಿಧಾನ

ವೆಜ್ ರಾಯಿತ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಮೊಸರು 
  2. 1/2 ಕಪ್ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಸೌತೆಕಾಯಿ
  3. 1 ಸಣ್ಣ ಗಾತ್ರದ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  4. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ಕ್ಯಾರಟ್
  5. 1 ಟೇಬಲ್ ಚಮಚ ಸಣ್ಣಗೆ ಹೆಚ್ಚಿದ ದಪ್ಪಮೆಣಸು
  6. 1/2 ಟೊಮೇಟೊ ಸಣ್ಣಗೆ ಹೆಚ್ಚಿದ್ದು
  7. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 1/4 ಟೀಸ್ಪೂನ್ ಕಾಳುಮೆಣಸಿನ ಪುಡಿ
  9. 1/4 ಟೀಸ್ಪೂನ್ ಜೀರಿಗೆ ಪುಡಿ
  10. ಉಪ್ಪು ರುಚಿಗೆ ತಕ್ಕಷ್ಟು.

ಪದಾರ್ಥಗಳು (ಬೇಕಾದಲ್ಲಿ):

  1. ಅಚ್ಚಖಾರದ ಪುಡಿ
  2. ಚಾಟ್ ಮಸಾಲಾ
  3. ಬ್ಲಾಕ್ ಸಾಲ್ಟ್ 
  4. ಸ್ವಲ್ಪ ಕೊತ್ತಂಬರಿ ಸೊಪ್ಪು

ವೆಜ್ ರಾಯಿತ ಮಾಡುವ ವಿಧಾನ:

  1. ಒಂದು ಬಟ್ಟಲಿನಲ್ಲಿ ಮೊಸರು ಮತ್ತು ಉಪ್ಪನ್ನು ತೆಗೆದು ಕೊಳ್ಳಿ. 
  2. ಅದಕ್ಕೆ ಕಾಳುಮೆಣಸಿನ ಪುಡಿ ಮತ್ತು ಜೀರಿಗೆ ಪುಡಿ ಸೇರಿಸಿ ಕಲಸಿ. 
  3. ನಂತರ ಹೆಚ್ಚಿದ ಸೌತೆಕಾಯಿ ಮತ್ತು ಈರುಳ್ಳಿ ಸೇರಿಸಿ. 
  4. ಕ್ಯಾರಟ್ ಮತ್ತು ದಪ್ಪಮೆಣಸನ್ನೂ ಸೇರಿಸಿ. 
  5. ಟೊಮೇಟೊ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಕಲಸಿ. 
  6. ಮೇಲಿನಿಂದ ರುಚಿಗೆ ತಕ್ಕಂತೆ ಅಚ್ಚಖಾರದ ಪುಡಿ, ಚಾಟ್ ಮಸಾಲಾ ಮತ್ತು ಬ್ಲಾಕ್ ಸಾಲ್ಟ್ ಉದುರಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಕೂಡಲೇ ಬಡಿಸಿ.
  7. ಅಥವಾ ಬಡಿಸುವವರೆಗೆ ಫ್ರಿಡ್ಜ್ನಲ್ಲಿಡಿ. 

ಶನಿವಾರ, ಜೂನ್ 15, 2024

Chinthamani kadlekai recipe in Kannada | ಚಿಂತಾಮಣಿ ಕಡ್ಲೆಕಾಯಿ ಮಾಡುವ ವಿಧಾನ

 

Chinthamani kadlekai recipe in Kannada

Chinthamani kadlekai recipe in Kannada | ಚಿಂತಾಮಣಿ ಕಡ್ಲೆಕಾಯಿ ಮಾಡುವ ವಿಧಾನ

ಚಿಂತಾಮಣಿ ಕಡ್ಲೆಕಾಯಿ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಶೇಂಗಾ ಅಥವಾ ಕಡ್ಲೆಕಾಯಿ 
  2. ಸಣ್ಣ ಹಿಡಿ ಕೊತ್ತಂಬರಿ ಸೊಪ್ಪು
  3. 7 - 8 ಕರಿಬೇವಿನ ಎಲೆ
  4. 3 - 4 ಹಸಿಮೆಣಸಿನಕಾಯಿ
  5. 1/2 ನಿಂಬೆಹಣ್ಣಿನ ರಸ
  6.  1/4 ಟೀಸ್ಪೂನ್ ಅರಶಿನ ಪುಡಿ
  7. ದೊಡ್ಡ ಚಿಟಿಕೆ ಇಂಗು
  8. 1/4 ಟೀಸ್ಪೂನ್ ಮೆಂತ್ಯಕಾಳು
  9. ಉಪ್ಪು ರುಚಿಗೆ ತಕ್ಕಷ್ಟು

ಶೇಂಗಾ ಹುರಿಗಾಳು ಮಾಡುವ ವಿಧಾನ:

  1. ಒಂದು ದಪ್ಪ ತಳದ ಬಾಣಲೆಯಲ್ಲಿ ಶೇಂಗಾ ಅಥವಾ ಕಡಲೆಕಾಯಿಯನ್ನು ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಕೈ ಬಿಡದೇ ಹುರಿಯಿರಿ. 
  2. ಹುರಿದ ಕಡಲೆಕಾಯಿಯನ್ನು ಒಂದು ಪಾತ್ರೆಗೆ ಹಾಕಿ. 
  3. ನಂತರ ಒಂದು ಮಿಕ್ಸಿ ಜಾರಿನಲ್ಲಿ ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಹಸಿಮೆಣಸಿನಕಾಯಿ ತೆಗೆದುಕೊಳ್ಳಿ.
  4. ಅದಕ್ಕೆ ಉಪ್ಪು, ನಿಂಬೆ ಹಣ್ಣಿನ ರಸ, ಇಂಗು ಮತ್ತು ಅರಿಶಿನ ಸೇರಿಸಿ. 
  5. ನೆನೆಸಿದ ಮೆಂತ್ಯ ಕಾಳನ್ನು ಸೇರಿಸಿ. 
  6. ೧ - ೨ ಟೇಬಲ್ ಚಮಚದಷ್ಟು ನೀರು ಸೇರಿಸಿ, ದಪ್ಪನಾದ ಮಸಾಲೆಯನ್ನು ಅರೆದುಕೊಳ್ಳಿ. 
  7. ಹುರಿದ ಶೇಂಗಾ ಸ್ವಲ್ಪ ಬಿಸಿ ಕಡಿಮೆ ಆದಮೇಲೆ ಮಸಾಲೆಯನ್ನು ಹಾಕಿ ಚೆನ್ನಾಗಿ ಕಲಸಿ. 
  8. ಪುನಃ ಸ್ಟವ್ ಮೇಲಿಟ್ಟು ಶೇಂಗಾ ಒಣಗುವವರೆಗೆ ಹುರಿಯಿರಿ. 
  9. ಸ್ಟವ್ ಆಫ್ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸಂಜೆ ಚಹಾ ಅಥವಾ ಕಾಫಿಯೊಂದಿಗೆ ಸವಿದು ಆನಂದಿಸಿ.

ಮಂಗಳವಾರ, ಜೂನ್ 11, 2024

Thodekai kayirasa recipe in Kannada | ತೊಂಡೆಕಾಯಿ ಕಾಯಿರಸ ಮಾಡುವ ವಿಧಾನ

 

Thodekai kayirasa recipe in Kannada

Thodekai kayirasa recipe in Kannada | ತೊಂಡೆಕಾಯಿ ಕಾಯಿರಸ ಮಾಡುವ ವಿಧಾನ

ತೊಂಡೆಕಾಯಿ ಕಾಯಿರಸ ವಿಡಿಯೋ

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 250 ಗ್ರಾಂ ತೊಂಡೆಕಾಯಿ
  2. 4 ಟೀಸ್ಪೂನ್ ಉದ್ದಿನ ಬೇಳೆ
  3. 2 ಹಸಿ ಮೆಣಸಿನಕಾಯಿ
  4. 1/2 ಕಪ್ ತೆಂಗಿನ ತುರಿ
  5. ಹುಣಸೆ ಹಣ್ಣು (ಬೇಕಾದಲ್ಲಿ, ನಾನು ಹಾಕಲಿಲ್ಲ)
  6. 1/4 ಟೀಸ್ಪೂನ್ ಅಡುಗೆ ಎಣ್ಣೆ
  7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಸಾಸಿವೆ
  2. 4 - 5 ಕರಿಬೇವಿನ ಎಲೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ

ತೊಂಡೆಕಾಯಿ ಕಾಯಿರಸ ಮಾಡುವ ವಿಧಾನ:

  1. ತೊಂಡೆಕಾಯಿ ತೊಳೆದು, ತುದಿ ಮತ್ತು ಬುಡ ತೆಗೆದು, ಉದ್ದುದ್ದವಾಗಿ ಕತ್ತರಿಸಿಕೊಳ್ಳಿ.
  2. ಕುಕ್ಕರ್‌ಗೆ ಕತ್ತರಿಸಿದ ತೊಂಡೆಕಾಯಿ ಹಾಕಿ. ಸ್ವಲ್ಪ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. 
  3. ಒಂದು ಬಾಣಲೆಯಲ್ಲಿ ಹಸಿಮೆಣಸಿನಕಾಯಿ, ಉದ್ದಿನ ಬೇಳೆ ಮತ್ತು 1/4 ಟೀಸ್ಪೂನ್ ಎಣ್ಣೆ ಹಾಕಿ, ಉದ್ದಿನ ಬೇಳೆ ಕಂದು ಬಣ್ಣಕ್ಕೆ ಬರುವ ತನಕ ಮಧ್ಯಮ ಉರಿಯಲ್ಲಿ ಹುರಿಯಿರಿ.
  4. ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಉದ್ದಿನ ಬೇಳೆ ಹಾಕಿ ಅರೆಯಿರಿ. ನಂತರ ಹುರಿದ ಹಸಿಮೆಣಸನ್ನು ಸೇರಿಸಿ ಸುಮಾರು 5 ಸೆಕೆಂಡುಗಳ ಕಾಲ ಅರೆಯಿರಿ.
  5. ಬೇಯಿಸಿದ ತರಕಾರಿ ಬಿಸಿ ಆರಿದ ನಂತರ ಅರೆದ ಮಸಾಲೆ ಸೇರಿಸಿ, ಉಪ್ಪು ಹಾಕಿ ಕಲಸಿ. ಈ ಅಡುಗೆಯಲ್ಲಿ ಮಸಾಲೆ ಹಾಕಿದ ಮೇಲೆ ಕುದಿಸಬಾರದು.
  6. ಕಲಸಿದ ನಂತರ ಎಣ್ಣೆ, ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಮಾಡಿ. ಅನ್ನ ಅಥವಾ ಚಪಾತಿ ಜೊತೆ ಬಡಿಸಿ.
  7. ಈ ಅಡುಗೆಯನ್ನು 2-3 ಗಂಟೆಗಳ ಮೊದಲು ಬಳಸಿ ಅಥವಾ ಫ್ರಿಜ್ ನಲ್ಲಿ ಇಟ್ಟು ಉಪಯೋಗಿಸುವ ಮೊದಲು ಬಿಸಿಮಾಡಿಕೊಳ್ಳಿ.

ಶುಕ್ರವಾರ, ಜೂನ್ 7, 2024

Ragi vegetable dose recipe in Kannada | ತರಕಾರಿ ಹಾಕಿ ರಾಗಿ ದೋಸೆ ಮಾಡುವ ವಿಧಾನ

 

Ragi vegetable dose recipe in Kannada

Ragi vegetable dose recipe in Kannada | ತರಕಾರಿ ಹಾಕಿ ರಾಗಿ ದೋಸೆ ಮಾಡುವ ವಿಧಾನ

ತರಕಾರಿ ಹಾಕಿ ರಾಗಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ರಾಗಿಹಿಟ್ಟು
  2. 2 ಟೇಬಲ್ ಚಮಚ ರವೆ
  3. 2 ಟೇಬಲ್ ಚಮಚ ಗೋಧಿಹಿಟ್ಟು
  4. 1 ಟೀಸ್ಪೂನ್ ಹೆಚ್ಚಿದ ಶುಂಠಿ
  5. 1 ಟೇಬಲ್ ಚಮಚ ಕರಿಬೇವಿನ ಸೊಪ್ಪು
  6. 2 ಟೇಬಲ್ ಚಮಚ ಮೆಂತೆಸೊಪ್ಪು
  7. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  8. 1 ಮಧ್ಯಮ ಗಾತ್ರದ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  9. 1/2 ದಪ್ಪಮೆಣಸು ಸಣ್ಣಗೆ ಹೆಚ್ಚಿದ್ದು
  10. 1/2 ಕ್ಯಾರಟ್ ತುರಿದಿದ್ದು
  11. 1/2 ಟೀಸ್ಪೂನ್ ಜೀರಿಗೆ
  12. ಉಪ್ಪು ರುಚಿಗೆ ತಕ್ಕಷ್ಟು

ತರಕಾರಿ ಹಾಕಿ ರಾಗಿ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ರಾಗಿಹಿಟ್ಟು, ರವೆ ಮತ್ತು ಗೋಧಿಹಿಟ್ಟು ತೆಗೆದುಕೊಳ್ಳಿ. 
  2. ಅದಕ್ಕೆ ಹೆಚ್ಚಿದ ಶುಂಠಿ, ಕರಿಬೇವು, ಮೆಂತೆಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. 
  3. ಹಾಗೆಯೇ ತುರಿದ ಕ್ಯಾರಟ್, ಕತ್ತರಿಸಿದ ಈರುಳ್ಳಿ ಮತ್ತು ದಪ್ಪಮೆಣಸನ್ನು ಸೇರಿಸಿ. 
  4. ಸುಮಾರು ಎರಡು ಕಪ್ ನೀರನ್ನು ಸ್ವಲ್ಪಸ್ವಲ್ಪವೇ ಸೇರಿಸುತ್ತಾ ಗಂಟಿಲ್ಲದಂತೆ ಹಿಟ್ಟನ್ನು ತಯಾರಿಸಿಕೊಳ್ಳಿ. 
  5. ಜೀರಿಗೆಯನ್ನು ಸೇರಿಸಿ. 
  6. ರುಚಿಗೆ ತಕ್ಕಂತೆ ಉಪ್ಪನ್ನು ಸೇರಿಸಿ. 
  7. ಚನ್ನಾಗಿ ಪಳಗಿಸಿದ ಕಬ್ಬಿಣದ ತವಾ ಅಥವಾ ನಾನ್ ಸ್ಟಿಕ್ ತವ ಬಿಸಿ ಮಾಡಿ, ರವೇ ದೋಸೆಯಂತೆ ತೆಳ್ಳಗಿನ ದೋಸೆ ಮಾಡಿ. 
  8. ಮೇಲಿನಿಂದ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಖಾಯಿಸಿ. 
  9. ಚಟ್ನಿಯೊಂದಿಗೆ ಅಥವಾ ಚಟ್ನಿ ಪುಡಿಯೊಂದಿಗೆ ಸವಿದು ಆನಂದಿಸಿ. 


ಗುರುವಾರ, ಏಪ್ರಿಲ್ 18, 2024

Kallangadi sippe dose recipe in Kannada | ಕಲ್ಲಂಗಡಿ ಸಿಪ್ಪೆ ದೋಸೆ ಮಾಡುವ ವಿಧಾನ

 

Kallangadi sippe dose recipe in Kannada

Kallangadi sippe dose recipe in Kannada | ಕಲ್ಲಂಗಡಿ ಸಿಪ್ಪೆ ದೋಸೆ ಮಾಡುವ ವಿಧಾನ

ಕಲ್ಲಂಗಡಿ ಸಿಪ್ಪೆ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):

  1. 1 ಕಪ್ ಅಕ್ಕಿ
  2. 1 ಕಪ್ ಕಲ್ಲಂಗಡಿ ಹಣ್ಣಿನ ಬಿಳಿ ಭಾಗ 
  3. 2 ಟೇಬಲ್ ಚಮಚ ಉದ್ದಿನಬೇಳೆ
  4. 1 ಟೀಸ್ಪೂನ್ ಮೆಂತ್ಯ
  5. 1/4 ಕಪ್ ಅವಲಕ್ಕಿ
  6. ಉಪ್ಪು ರುಚಿಗೆ ತಕ್ಕಷ್ಟು.

ಕಲ್ಲಂಗಡಿ ಸಿಪ್ಪೆ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  2. ಇನ್ನೊಂದು ಪಾತ್ರೆಯಲ್ಲಿಉದ್ದಿನಬೇಳೆ, ಮೆಂತ್ಯ ಮತ್ತು ಅವಲಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಯಲು ಬಿಡಿ.
  3. ಕಲ್ಲಂಗಡಿ ಹಣ್ಣನ್ನು ಕತ್ತರಿಸಿ, ಬಿಳಿ ಭಾಗವನ್ನು ತೆಗೆದಿಟ್ಟುಕೊಳ್ಳಿ. 
  4. ನೆನೆಸಿದ ಉದ್ದಿನಬೇಳೆ, ಮೆಂತ್ಯ ಮತ್ತು ಅವಲಕ್ಕಿಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಂಡು, ಕತ್ತರಿಸಿದ ಕಲ್ಲಂಗಡಿ ಹಣ್ಣಿನ ಬಿಳಿ ಭಾಗವನ್ನು ಹಾಕಿ.  
  5. ಆದಷ್ಟು ಕಡಿಮೆ ನೀರು ಸೇರಿಸಿ ಅರೆಯಿರಿ. ನುಣ್ಣನೆ ಅರೆದು ಒಂದು ಪಾತ್ರೆಗೆ ಹಾಕಿ.
  6. ನಂತರ ನೆನೆಸಿದ ಅಕ್ಕಿಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಂಡು, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. ಕಡಿಮೆ ನೀರು ಬಳಸಿ, ಏಕೆಂದರೆ ಕಲ್ಲಂಗಡಿ ಹಣ್ಣಿನ ಬಿಳಿ ಭಾಗದಲ್ಲಿ ನೀರಿನಂಶ ಜಾಸ್ತಿ ಇರುತ್ತದೆ. 
  7. ನುಣ್ಣನೆ ಅರೆದು ಅದೇ ಪಾತ್ರೆಗೆ ಹಾಕಿ.
  8. ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 7 - 8 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
  9. ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ. 
  10. ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ದೋಸೆ ಮಾಡಿ.
  11. ಮುಚ್ಚಳವನ್ನು ಮುಚ್ಚಿ ಬೇಯಿಸಿ.
  12. ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ, ಖಾಯಿಸಿ.
  13. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಏಪ್ರಿಲ್ 12, 2024

Mavinakayi dal recipe in Kannada | ಮಾವಿನಕಾಯಿ ತೊವ್ವೆ ಮಾಡುವ ವಿಧಾನ

 

Mavinakayi dal recipe in Kannada

Mavinakayi dal recipe in Kannada | ಮಾವಿನಕಾಯಿ ತೊವ್ವೆ ಮಾಡುವ ವಿಧಾನ

ಮಾವಿನಕಾಯಿ ತೊವ್ವೆ ವಿಡಿಯೋ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ತೊಗರಿಬೇಳೆ
  2. 1/2 ಕಪ್ ಮಾವಿನಕಾಯಿ
  3. 1/2 ಟೀಸ್ಪೂನ್ ಸಾಸಿವೆ
  4. 7 - 8 ಮೆಂತ್ಯ ಕಾಳು
  5. 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
  6. 7 - 8 ಕರಿಬೇವಿನ ಎಲೆ
  7. 7 - 8 ಎಸಳು ಬೆಳ್ಳುಳ್ಳಿ
  8. ದೊಡ್ಡ ಚಿಟಿಕೆ ಇಂಗು
  9. 1 ಈರುಳ್ಳಿ
  10. 1/4 ಟೀಸ್ಪೂನ್ ಅಚ್ಚಖಾರದ ಪುಡಿ
  11. ದೊಡ್ಡ ಚಿಟಿಕೆ ಅರಶಿನ ಪುಡಿ
  12. 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  13. ಉಪ್ಪು ರುಚಿಗೆ ತಕ್ಕಷ್ಟು
  14. 1 ಟೇಬಲ್ ಚಮಚ ಅಡುಗೆ ಎಣ್ಣೆ

ಮಾವಿನಕಾಯಿ ತೊವ್ವೆ ಮಾಡುವ ವಿಧಾನ:

  1. ಮಾವಿನಕಾಯಿ ಸಿಪ್ಪೆ ತೆಗೆದು ಕತ್ತರಿಸಿಟ್ಟುಕೊಳ್ಳಿ. 
  2. ತೊಗರಿಬೇಳೆಯನ್ನು ತೊಳೆಯಿರಿ. 
  3. ಕತ್ತರಿಸಿದ ಮಾವಿನಕಾಯಿ, ಚಿಟಿಕೆ ಅರಿಶಿನ ಮತ್ತು ನಾಲ್ಕೈದು ಹನಿ ಎಣ್ಣೆ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
  4. ಬೇಯಿಸಿದ ಬೇಳೆ ಮತ್ತು ಮಾವಿನಕಾಯಿಯನ್ನು ಮಸಿದು ಪಕ್ಕಕ್ಕಿಡಿ. 
  5. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಮೆಂತ್ಯದ ಒಗ್ಗರಣೆ ಮಾಡಿ.
  6.  ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ.
  7. ಕತ್ತರಿಸಿದ ಬೆಳ್ಳುಳ್ಳಿ ಮತ್ತು ಇಂಗು ಸೇರಿಸಿ ಹುರಿಯಿರಿ. 
  8. ರುಚಿಗೆ ತಕ್ಕಂತೆ ಅಚ್ಚಖಾರದ ಪುಡಿ ಸೇರಿಸಿ ಹುರಿಯಿರಿ.
  9. ಕತ್ತರಿಸಿದ ಈರುಳ್ಳಿ ಸೇರಿಸಿ ಹುರಿಯಿರಿ. 
  10. ಮಸಿದ ಬೇಳೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ.
  11. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ.
  12. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
  13. ಸ್ಟವ್ ಆಫ್ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಸೋಮವಾರ, ಏಪ್ರಿಲ್ 8, 2024

Baale dindina palya recipe in Kannada | ಬಾಳೆ ದಿಂಡಿನ ಪಲ್ಯ ಮಾಡುವ ವಿಧಾನ

 

Baale dindina palya recipe in Kannada

Baale dindina palya recipe in Kannada | ಬಾಳೆ ದಿಂಡಿನ ಪಲ್ಯ ಮಾಡುವ ವಿಧಾನ 

bale dindu palya video

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 20cm ಉದ್ದದ ಬಾಳೆ ದಿಂಡು
  2. 1/4 ಕಪ್ ಹೆಸರುಬೇಳೆ
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಕಡ್ಲೆ ಬೇಳೆ
  5. 1 ಟೀಸ್ಪೂನ್ ಉದ್ದಿನ ಬೇಳೆ
  6. 1 ಒಣ ಮೆಣಸಿನಕಾಯಿ
  7. 1 - 2 ಹಸಿಮೆಣಸಿನಕಾಯಿ
  8. 7 - 8 ಕರಿಬೇವಿನ ಎಲೆ
  9. 1 ದೊಡ್ಡ ಚಿಟಿಕೆ ಅರಿಶಿನ ಪುಡಿ
  10. 1 ದೊಡ್ಡ ಚಿಟಿಕೆ ಇಂಗು
  11. 1/4 ಕಪ್ ತೆಂಗಿನ ತುರಿ
  12. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  13. 1 - 2 ಟೇಬಲ್ ಚಮಚ ಅಡುಗೆ ಎಣ್ಣೆ
  14. ಉಪ್ಪು ರುಚಿಗೆ ತಕ್ಕಷ್ಟು

ಬಾಳೆ ದಿಂಡಿನ ಪಲ್ಯ ಮಾಡುವ ವಿಧಾನ:

  1. ಹೆಸರುಬೇಳೆಯನ್ನು ಹದಿನೈದು ನಿಮಿಷ ನೆನೆಸಿಕೊಳ್ಳಿ. 
  2. ಬಾಳೆ ದಿಂಡಿನ ಹೊರಗಿನ ಸಿಪ್ಪೆಗಳನ್ನು ತೆಗೆದು, ಒಳಗಿನ ದಿಂಡನ್ನು ಮಾತ್ರ ತೆಗೆದುಕೊಳ್ಳಿ. 
  3. ಚಕ್ರಗಳನ್ನಾಗಿ ಕತ್ತರಿಸಿ, ನಾರನ್ನು ತೆಗೆದು, ಆಮೇಲೆ ಸಣ್ಣದಾಗಿ ಕತ್ತರಿಸಿಕೊಳ್ಳಿ. 
  4. ಒಂದು ಪಾತ್ರೆಯಲ್ಲಿ, ನೀರು ಮತ್ತು ನಿಂಬೆಹಣ್ಣಿನ ರಸ ತೆಗೆದುಕೊಂಡು, ಅದರಲ್ಲಿ ಕತ್ತರಿಸಿದ ಬಾಳೆದಿಂಡನ್ನು ನೆನೆಸಿಡಿ.
  5. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ ಮತ್ತು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. 
  6. ಸಾಸಿವೆ ಸಿಡಿದ ಕೂಡಲೇ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆ ಹಾಕಿ.  
  7. ಅರಿಶಿನ ಮತ್ತು ಇಂಗು ಸೇರಿಸಿ. 
  8. ನೆನೆಸಿದ ಹೆಸರುಬೇಳೆ ಹಾಕಿ ಮಗುಚಿ.
  9. ಅದಕ್ಕೆ ಕತ್ತರಿಸಿದ ಬಾಳೆದಿಂಡನ್ನು ಹಾಕಿ.
  10.  ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಮಗುಚಿ.
  11. ಮುಚ್ಚಳ ಮುಚ್ಚಿ ಹೆಸರುಬೇಳೆ ಮೆತ್ತಗಾಗುವವರೆಗೆ ಬೇಯಿಸಿ. 
  12. ಮೆತ್ತಗೆ ಬೆಂದ ಮೇಲೆ ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಗುಚಿ.  ಸ್ಟೋವ್ ಆಫ್ ಮಾಡಿ. 
  13. ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಬಡಿಸಿ.

ಬುಧವಾರ, ಡಿಸೆಂಬರ್ 20, 2023

Gobi palya recipe in Kannada | ಹೂಕೋಸು ಪಲ್ಯ ಮಾಡುವ ವಿಧಾನ

 

Gobi palya recipe in Kannada

Gobi palya recipe in Kannada | ಹೂಕೋಸು ಪಲ್ಯ ಮಾಡುವ ವಿಧಾನ

ಹೂಕೋಸು ಪಲ್ಯ ವಿಡಿಯೋ

ಬೇಕಾಗುವ ಪದಾರ್ಥಗಳು (ಅಳತೆ ಕಪ್ 240 ಎಂ ಎಲ್ ):

  1. 1 ಹೂಕೋಸು
  2. 1 ದೊಡ್ಡ ಈರುಳ್ಳಿ
  3. 2 ಟೊಮೇಟೊ
  4. ಸ್ವಲ್ಪ ಕರಿಬೇವು
  5. 1/2 ಟೀಸ್ಪೂನ್ ಸಾಸಿವೆ
  6. 1/2 ಟೀಸ್ಪೂನ್ ಜೀರಿಗೆ
  7. 1/4 ಟೀಸ್ಪೂನ್ ಅರಿಶಿನ ಪುಡಿ
  8. ಒಂದು ದೊಡ್ಡ ಚಿಟಿಕೆ ಇಂಗು
  9. 1 ಟೀಸ್ಪೂನ್ ಅಚ್ಚಖಾರದ ಪುಡಿ
  10. 1 ಟೀಸ್ಪೂನ್ ಧನಿಯಾ ಪುಡಿ
  11. 1/2 ಟೀಸ್ಪೂನ್ ಗರಂ ಮಸಾಲಾ
  12. 1/4 ಟೀಸ್ಪೂನ್ ಜೀರಿಗೆ ಪುಡಿ
  13. 2 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
  14. ನಿಮ್ಮ ರುಚಿ ಪ್ರಕಾರ ಉಪ್ಪು
  15. 1 ಟೇಬಲ್ ಚಮಚ ಅಡುಗೆ ಎಣ್ಣೆ

 ಹೂಕೋಸು ಪಲ್ಯ ಮಾಡುವ ವಿಧಾನ:

  1. ಮೊದಲಿಗೆ ಹೂಕೋಸನ್ನುಬಿಡಿಸಿ, ತೊಳೆದು, ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ.
  2. ಅರ್ಧ ಚಮಚ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ, ಎರಡು ನಿಮಿಷ ಬೇಯಿಸಿ. 
  3. ನಂತರ ನೀರು ಬಗ್ಗಿಸಿ ತೆಗೆದಿಟ್ಟುಕೊಳ್ಳಿ. 
  4. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಜೀರಿಗೆಯ ಒಗ್ಗರಣೆ ಮಾಡಿಕೊಳ್ಳಿ. 
  5. ಸಾಸಿವೆ ಸಿಡಿದ ಮೇಲೆ ಕತ್ತರಿಸಿದ ಈರುಳ್ಳಿ ಮತ್ತು ಕರಿಬೇವು ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  6. ಅರಿಶಿನ ಮತ್ತು ಇಂಗು ಸೇರಿಸಿ. 
  7. ಕತ್ತರಿಸಿದ ಟೊಮೇಟೊ ಸೇರಿಸಿ, ಟೊಮೇಟೊ ಮೆತ್ತಗಾಗುವವರೆಗೆ ಹುರಿಯಿರಿ. 
  8. ಅಚ್ಚಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಮತ್ತು ಜೀರಿಗೆ ಪುಡಿ ಸೇರಿಸಿ ಮಗುಚಿ. 
  9. ಸ್ವಲ್ಪ ನೀರನ್ನು ಸೇರಿಸಿ, ಕುದಿಸಿ, ಗೊಜ್ಜು ತಯಾರಿಸಿಕೊಳ್ಳಿ. 
  10. ಅದಕ್ಕೆ ಬೇಯಿಸಿದ ಹೂಕೋಸು ಸೇರಿಸಿ. 
  11. ಕೊತ್ತಂಬರಿ ಸೊಪ್ಪನ್ನು ಸೇರಿಸಿ. 
  12. ಮಗುಚಿ, ಮುಚ್ಚಳ ಮುಚ್ಚಿ ಹೂಕೋಸು ಮೆತ್ತಗಾಗುವವರೆಗೆ ಬೇಯಿಸಿ.  
  13. ಕೊನೆಯಲ್ಲಿ ಬೇಕಾದಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಸ್ಟವ್ ಆಫ್ ಮಾಡಿ. 
  14. ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.

ಶುಕ್ರವಾರ, ಡಿಸೆಂಬರ್ 15, 2023

Onion rasam recipe in Kannada | ಈರುಳ್ಳಿ ಸಾರು ಮಾಡುವ ವಿಧಾನ

 

Onion rasam recipe in Kannada

Onion rasam recipe in Kannada | ಈರುಳ್ಳಿ ಸಾರು ಮಾಡುವ ವಿಧಾನ

ಈರುಳ್ಳಿ ಸಾರು ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಈರುಳ್ಳಿ ತೆಳ್ಳಗೆ ಕತ್ತರಿಸಿದ್ದು
  2. 7 - 8 ಎಸಳು ಬೆಳ್ಳುಳ್ಳಿ ಕತ್ತರಿಸಿದ್ದು
  3. 3 - 5 ಒಣಮೆಣಸಿನಕಾಯಿ
  4. 2 ಟೀಸ್ಪೂನ್ ಧನಿಯಾ ಅಥವಾ ಕೊತ್ತಂಬರಿ ಬೀಜ
  5. 1 ಟೀಸ್ಪೂನ್ ಜೀರಿಗೆ
  6. 7 - 8 ಕರಿಬೇವು
  7. 1/4 ಕಪ್ ತೆಂಗಿನಕಾಯಿ
  8. 1/4 ಟೀಸ್ಪೂನ್ ಅರಿಶಿನ
  9. ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
  10. ಬೆಲ್ಲ ರುಚಿಗೆ ತಕ್ಕಷ್ಟು
  11. 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  12. ಉಪ್ಪು ರುಚಿಗೆ ತಕ್ಕಷ್ಟು
  13. 1 ಟೀಸ್ಪೂನ್ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಒಣಮೆಣಸಿನಕಾಯಿ
  3. 5 - 6 ಕರಿಬೇವಿನ ಎಲೆ
  4. 1 ಟೇಬಲ್ ಚಮಚ ಎಣ್ಣೆ

 ಈರುಳ್ಳಿ ಸಾರು ಮಾಡುವ ವಿಧಾನ:

  1. ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
  2. ಒಣಮೆಣಸಿನಕಾಯಿ, ಕೊತ್ತಂಬರಿ ಮತ್ತು  ಜೀರಿಗೆಯನ್ನು ಹಾಕಿ ಹುರಿಯಿರಿ. 
  3. ನಂತರ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಕರಿಬೇವನ್ನು ಸೇರಿಸಿ.
  4. ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. 
  5. ಬಿಸಿ ಅರಿದಮೇಲೆ ಮಿಕ್ಸಿ ಜಾರಿಗೆ ಹಾಕಿ.
  6. ತೆಂಗಿನಕಾಯಿಯನ್ನು ಸೇರಿಸಿ. 
  7. ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. ಮಸಾಲೆ ಪೇಸ್ಟ್ ತಯಾರಾಯಿತು. 
  8. ಅದನ್ನು ಒಂದು ಪಾತ್ರೆಗೆ ಹಾಕಿ, ಅರಿಶಿನ ಸೇರಿಸಿ. 
  9. ರುಚಿಗೆ ತಕ್ಕಂತೆ ಉಪ್ಪು, ಹುಳಿ ಮತ್ತು ಬೆಲ್ಲ ಸೇರಿಸಿ. 
  10. ಅಗತ್ಯವಿದ್ದಷ್ಟು ನೀರು ಸೇರಿಸಿ. 
  11. ಒಂದು ನಿಮಿಷ ಚೆನ್ನಾಗಿ ಕುದಿಸಿ. 
  12. ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ.
  13. ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
  14. ಸಾರಿಗೆ ಒಗ್ಗರಣೆ ಹಾಕಿ, ಒಮ್ಮೆ ಕಲಸಿ, ಬಿಸಿ ಅನ್ನದೊಂದಿಗೆ ಬಡಿಸಿ.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಮಂಗಳವಾರ, ಡಿಸೆಂಬರ್ 12, 2023

Navane khichdi recipe in Kannada | ನವಣೆ ಖಿಚಡಿ ಮಾಡುವ ವಿಧಾನ

 

Navane khichdi recipe in Kannada

Navane khichdi recipe in Kannada | ನವಣೆ ಖಿಚಡಿ ಮಾಡುವ ವಿಧಾನ 

ನವಣೆ ಖಿಚಡಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಕಪ್ ನವಣೆ
  2. 1/2 ಕಪ್ ಹೆಸರುಬೇಳೆ
  3. 1 ಪುಲಾವ್ ಎಲೆ
  4. 1/2 ಟೀಸ್ಪೂನ್ ಸಾಸಿವೆ
  5. 1/2 ಟೀಸ್ಪೂನ್ ಜೀರಿಗೆ
  6. 1 ಟೀಸ್ಪೂನ್ ಶುಂಠಿ
  7. ಸ್ವಲ್ಪ ಕರಿಬೇವು
  8. 1 - 2 ಹಸಿಮೆಣಸಿನಕಾಯಿ
  9. 1 ಈರುಳ್ಳಿ
  10. 1 ಸಣ್ಣ ಗಾತ್ರದ ದಪ್ಪಮೆಣಸು
  11. 2 ಕಪ್ ಬೆರಕೆ ತರಕಾರಿ
  12. ದೊಡ್ಡ ಚಿಟಿಕೆ ಅರಿಶಿನ ಪುಡಿ
  13. ದೊಡ್ಡ ಚಿಟಿಕೆ ಇಂಗು
  14. 1 ಟೊಮೇಟೊ
  15. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  16. 3 ಟೀಸ್ಪೂನ್ ತುಪ್ಪ
  17. ಸ್ವಲ್ಪ ಕೊತ್ತಂಬರಿ ಸೊಪ್ಪು

ಖಿಚಡಿ ಮಾಡುವ ವಿಧಾನ:

  1. ನವಣೆಯನ್ನು ಚೆನ್ನಾಗಿ ತೊಳೆದು, ಎರಡು ಘಂಟೆ ನೆನೆಸಿಡಿ. 
  2. ಹೆಸರುಬೇಳೆಯನ್ನು 20 ನಿಮಿಷ ನೆನೆಸಿ.
  3. ಒಂದು ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ. 
  4. ಪುಲಾವ್ ಎಲೆ, ಸಾಸಿವೆ ಮತ್ತು ಜೀರಿಗೆ ಹಾಕಿ ಒಗ್ಗರಣೆ ಮಾಡಿ. 
  5. ಶುಂಠಿ, ಕರಿಬೇವು ಮತ್ತು ಸೀಳಿದ ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. 
  6. ಕತ್ತರಿಸಿದ ಈರುಳ್ಳಿ ಮತ್ತು ದಪ್ಪಮೆಣಸು ಹಾಕಿ ಹುರಿಯಿರಿ. 
  7. ನಂತರ ಅರಿಶಿನ ಮತ್ತು ಇಂಗು ಸೇರಿಸಿ ಮಗುಚಿ. 
  8. ಕತ್ತರಿಸಿದ ಬೆರಕೆ ತರಕಾರಿಗಳನ್ನು ಹಾಕಿ ಹುರಿಯಿರಿ.  
  9. ಟೊಮೇಟೊ ಸೇರಿಸಿ ಹುರಿಯಿರಿ. 
  10. ನೆನೆಸಿದ ಹೆಸರುಬೇಳೆ ಮತ್ತು ಅಕ್ಕಿ ಹಾಕಿ ಮಗುಚಿ.
  11. ಸುಮಾರು 4 ಕಪ್ ನೀರು ಸೇರಿಸಿ.
  12. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.  
  13. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. 
  14. ಮುಚ್ಚಳ ಮುಚ್ಚಿ 2 - 3 ವಿಷಲ್ ಮಾಡಿ. 
  15. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ. ಬೆಳಿಗ್ಗಿನ ತಿಂಡಿಗೆ ಅಥವಾ ರಾತ್ರಿ ಊಟಕ್ಕೆ ಬಹಳ ಚೆನ್ನಾಗಿರುತ್ತದೆ. 
To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)
Related Posts Plugin for WordPress, Blogger...