Mavinakayi dal recipe in Kannada | ಮಾವಿನಕಾಯಿ ತೊವ್ವೆ ಮಾಡುವ ವಿಧಾನ
ಮಾವಿನಕಾಯಿ ತೊವ್ವೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ತೊಗರಿಬೇಳೆ
- 1/2 ಕಪ್ ಮಾವಿನಕಾಯಿ
- 1/2 ಟೀಸ್ಪೂನ್ ಸಾಸಿವೆ
- 7 - 8 ಮೆಂತ್ಯ ಕಾಳು
- 2 ಹಸಿರು ಮೆಣಸಿನ ಕಾಯಿ (ನಿಮ್ಮ ಖಾರಕ್ಕೆ ತಕ್ಕಂತೆ)
- 7 - 8 ಕರಿಬೇವಿನ ಎಲೆ
- 7 - 8 ಎಸಳು ಬೆಳ್ಳುಳ್ಳಿ
- ದೊಡ್ಡ ಚಿಟಿಕೆ ಇಂಗು
- 1 ಈರುಳ್ಳಿ
- 1/4 ಟೀಸ್ಪೂನ್ ಅಚ್ಚಖಾರದ ಪುಡಿ
- ದೊಡ್ಡ ಚಿಟಿಕೆ ಅರಶಿನ ಪುಡಿ
- 1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
- 1 ಟೇಬಲ್ ಚಮಚ ಅಡುಗೆ ಎಣ್ಣೆ
ಮಾವಿನಕಾಯಿ ತೊವ್ವೆ ಮಾಡುವ ವಿಧಾನ:
- ಮಾವಿನಕಾಯಿ ಸಿಪ್ಪೆ ತೆಗೆದು ಕತ್ತರಿಸಿಟ್ಟುಕೊಳ್ಳಿ.
- ತೊಗರಿಬೇಳೆಯನ್ನು ತೊಳೆಯಿರಿ.
- ಕತ್ತರಿಸಿದ ಮಾವಿನಕಾಯಿ, ಚಿಟಿಕೆ ಅರಿಶಿನ ಮತ್ತು ನಾಲ್ಕೈದು ಹನಿ ಎಣ್ಣೆ ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.
- ಬೇಯಿಸಿದ ಬೇಳೆ ಮತ್ತು ಮಾವಿನಕಾಯಿಯನ್ನು ಮಸಿದು ಪಕ್ಕಕ್ಕಿಡಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಮತ್ತು ಮೆಂತ್ಯದ ಒಗ್ಗರಣೆ ಮಾಡಿ.
- ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ.
- ಕತ್ತರಿಸಿದ ಬೆಳ್ಳುಳ್ಳಿ ಮತ್ತು ಇಂಗು ಸೇರಿಸಿ ಹುರಿಯಿರಿ.
- ರುಚಿಗೆ ತಕ್ಕಂತೆ ಅಚ್ಚಖಾರದ ಪುಡಿ ಸೇರಿಸಿ ಹುರಿಯಿರಿ.
- ಕತ್ತರಿಸಿದ ಈರುಳ್ಳಿ ಸೇರಿಸಿ ಹುರಿಯಿರಿ.
- ಮಸಿದ ಬೇಳೆ ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ.
- ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ.
- ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
- ಸ್ಟವ್ ಆಫ್ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ