Onion rasam recipe in Kannada | ಈರುಳ್ಳಿ ಸಾರು ಮಾಡುವ ವಿಧಾನ
ಈರುಳ್ಳಿ ಸಾರು ವಿಡಿಯೋ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
- 1 ಈರುಳ್ಳಿ ತೆಳ್ಳಗೆ ಕತ್ತರಿಸಿದ್ದು
- 7 - 8 ಎಸಳು ಬೆಳ್ಳುಳ್ಳಿ ಕತ್ತರಿಸಿದ್ದು
- 3 - 5 ಒಣಮೆಣಸಿನಕಾಯಿ
- 2 ಟೀಸ್ಪೂನ್ ಧನಿಯಾ ಅಥವಾ ಕೊತ್ತಂಬರಿ ಬೀಜ
- 1 ಟೀಸ್ಪೂನ್ ಜೀರಿಗೆ
- 7 - 8 ಕರಿಬೇವು
- 1/4 ಕಪ್ ತೆಂಗಿನಕಾಯಿ
- 1/4 ಟೀಸ್ಪೂನ್ ಅರಿಶಿನ
- ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು
- ಬೆಲ್ಲ ರುಚಿಗೆ ತಕ್ಕಷ್ಟು
- 1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
- 1 ಟೀಸ್ಪೂನ್ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/2 ಚಮಚ ಸಾಸಿವೆ
- 1 ಒಣಮೆಣಸಿನಕಾಯಿ
- 5 - 6 ಕರಿಬೇವಿನ ಎಲೆ
- 1 ಟೇಬಲ್ ಚಮಚ ಎಣ್ಣೆ
ಈರುಳ್ಳಿ ಸಾರು ಮಾಡುವ ವಿಧಾನ:
- ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
- ಒಣಮೆಣಸಿನಕಾಯಿ, ಕೊತ್ತಂಬರಿ ಮತ್ತು ಜೀರಿಗೆಯನ್ನು ಹಾಕಿ ಹುರಿಯಿರಿ.
- ನಂತರ ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಕರಿಬೇವನ್ನು ಸೇರಿಸಿ.
- ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
- ಬಿಸಿ ಅರಿದಮೇಲೆ ಮಿಕ್ಸಿ ಜಾರಿಗೆ ಹಾಕಿ.
- ತೆಂಗಿನಕಾಯಿಯನ್ನು ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣಗೆ ಅರೆಯಿರಿ. ಮಸಾಲೆ ಪೇಸ್ಟ್ ತಯಾರಾಯಿತು.
- ಅದನ್ನು ಒಂದು ಪಾತ್ರೆಗೆ ಹಾಕಿ, ಅರಿಶಿನ ಸೇರಿಸಿ.
- ರುಚಿಗೆ ತಕ್ಕಂತೆ ಉಪ್ಪು, ಹುಳಿ ಮತ್ತು ಬೆಲ್ಲ ಸೇರಿಸಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ.
- ಒಂದು ನಿಮಿಷ ಚೆನ್ನಾಗಿ ಕುದಿಸಿ.
- ಕೊತ್ತಂಬರಿ ಸೊಪ್ಪು ಸೇರಿಸಿ, ಸ್ಟವ್ ಆಫ್ ಮಾಡಿ.
- ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ.
- ಸಾರಿಗೆ ಒಗ್ಗರಣೆ ಹಾಕಿ, ಒಮ್ಮೆ ಕಲಸಿ, ಬಿಸಿ ಅನ್ನದೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ