Thodekai kayirasa recipe in Kannada | ತೊಂಡೆಕಾಯಿ ಕಾಯಿರಸ ಮಾಡುವ ವಿಧಾನ
ತೊಂಡೆಕಾಯಿ ಕಾಯಿರಸ ವಿಡಿಯೋ
ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 250 ಗ್ರಾಂ ತೊಂಡೆಕಾಯಿ
- 4 ಟೀಸ್ಪೂನ್ ಉದ್ದಿನ ಬೇಳೆ
- 2 ಹಸಿ ಮೆಣಸಿನಕಾಯಿ
- 1/2 ಕಪ್ ತೆಂಗಿನ ತುರಿ
- ಹುಣಸೆ ಹಣ್ಣು (ಬೇಕಾದಲ್ಲಿ, ನಾನು ಹಾಕಲಿಲ್ಲ)
- 1/4 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/4 ಟೀಸ್ಪೂನ್ ಸಾಸಿವೆ
- 4 - 5 ಕರಿಬೇವಿನ ಎಲೆ
- 1 ಟೀಸ್ಪೂನ್ ಅಡುಗೆ ಎಣ್ಣೆ
ತೊಂಡೆಕಾಯಿ ಕಾಯಿರಸ ಮಾಡುವ ವಿಧಾನ:
- ತೊಂಡೆಕಾಯಿ ತೊಳೆದು, ತುದಿ ಮತ್ತು ಬುಡ ತೆಗೆದು, ಉದ್ದುದ್ದವಾಗಿ ಕತ್ತರಿಸಿಕೊಳ್ಳಿ.
- ಕುಕ್ಕರ್‌ಗೆ ಕತ್ತರಿಸಿದ ತೊಂಡೆಕಾಯಿ ಹಾಕಿ. ಸ್ವಲ್ಪ ಉಪ್ಪು ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ.
- ಒಂದು ಬಾಣಲೆಯಲ್ಲಿ ಹಸಿಮೆಣಸಿನಕಾಯಿ, ಉದ್ದಿನ ಬೇಳೆ ಮತ್ತು 1/4 ಟೀಸ್ಪೂನ್ ಎಣ್ಣೆ ಹಾಕಿ, ಉದ್ದಿನ ಬೇಳೆ ಕಂದು ಬಣ್ಣಕ್ಕೆ ಬರುವ ತನಕ ಮಧ್ಯಮ ಉರಿಯಲ್ಲಿ ಹುರಿಯಿರಿ.
- ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಉದ್ದಿನ ಬೇಳೆ ಹಾಕಿ ಅರೆಯಿರಿ. ನಂತರ ಹುರಿದ ಹಸಿಮೆಣಸನ್ನು ಸೇರಿಸಿ ಸುಮಾರು 5 ಸೆಕೆಂಡುಗಳ ಕಾಲ ಅರೆಯಿರಿ.
- ಬೇಯಿಸಿದ ತರಕಾರಿ ಬಿಸಿ ಆರಿದ ನಂತರ ಅರೆದ ಮಸಾಲೆ ಸೇರಿಸಿ, ಉಪ್ಪು ಹಾಕಿ ಕಲಸಿ. ಈ ಅಡುಗೆಯಲ್ಲಿ ಮಸಾಲೆ ಹಾಕಿದ ಮೇಲೆ ಕುದಿಸಬಾರದು.
- ಕಲಸಿದ ನಂತರ ಎಣ್ಣೆ, ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಮಾಡಿ. ಅನ್ನ ಅಥವಾ ಚಪಾತಿ ಜೊತೆ ಬಡಿಸಿ.
- ಈ ಅಡುಗೆಯನ್ನು 2-3 ಗಂಟೆಗಳ ಮೊದಲು ಬಳಸಿ ಅಥವಾ ಫ್ರಿಜ್ ನಲ್ಲಿ ಇಟ್ಟು ಉಪಯೋಗಿಸುವ ಮೊದಲು ಬಿಸಿಮಾಡಿಕೊಳ್ಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ